HomeLatest Newsಏಷ್ಯನ್ ಗೇಮ್ಸ್ 2026: ಪದಕ ವಿಜೇತರಿಗೆ ಭರ್ಜರಿ ಬಹುಮಾನ; ಸರ್ಕಾರಿ ಉದ್ಯೋಗದ ಕೊಡುಗೆ

ಏಷ್ಯನ್ ಗೇಮ್ಸ್ 2026: ಪದಕ ವಿಜೇತರಿಗೆ ಭರ್ಜರಿ ಬಹುಮಾನ; ಸರ್ಕಾರಿ ಉದ್ಯೋಗದ ಕೊಡುಗೆ

​ಬೆಂಗಳೂರು-ಏಷ್ಯನ್ ಗೇಮ್ಸ್-2026 ರಲ್ಲಿ ಪದಕಗಳನ್ನು ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಗೌರವಿಸಿ, ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಕ್ರೀಡಾಪಟುಗಳಿಗಾಗಿ ಹಲವು ಪ್ರಮುಖ ಮತ್ತು ಐತಿಹಾಸಿಕ ಯೋಜನೆ ಹಾಗೂ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ.

ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ಧನ

*ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ನಗದು ಪ್ರೋತ್ಸಾಹ ಧನ*:

ಏಷ್ಯನ್ ಗೇಮ್ಸ್-2026 ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ರೂ. 5.00 ಲಕ್ಷ ನಗದು ಪ್ರೋತ್ಸಾಹ ಧನವನ್ನು ಸರ್ಕಾರ ಮಂಜೂರು ಮಾಡಿದೆ. ಈ ಯೋಜನೆಯಡಿ ಅಥ್ಲೆಟಿಕ್ಸ್‌ನ ಯಶಸ್ ಪಾಲಾಕ್ಷ, ಸುಪ್ರಿಯಾ ಸಿಂಡಿಗೆರೆ ಬಸವರಾಜು, ಉನ್ನತಿ ಅಯ್ಯಪ್ಪ, ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಸಿಂಧು ಶ್ರೀ, ಬ್ಯಾಡ್ಮಿಂಟನ್‌ನ ಆಯುಷ್ ಶೆಟ್ಟಿ, ಕ್ರಿಕೆಟ್‌ನ ಶ್ರೇಯಾಂಕ ಆರ್. ಪಾಟೀಲ್, ಸೈಕ್ಲಿಂಗ್ ಟ್ರ್ಯಾಕ್ ನ ಕೀರ್ತಿ ರಂಗಸ್ವಾಮಿ, ಈಕ್ವೆಸ್ಟ್ರಿಯನ್‌ನ ಫವಾದ್ ಮಿರ್ಜಾ, ಗಾಲ್ಫ್‌ನ ಅದಿತಿ ಅಶೋಕ್, ಪ್ರಣವಿ ಎಸ್. ಅರಸ್, ಹಾಕಿ ಆಟಗಾರ ಮೋಹಿತ್ ಹೆಚ್.ಎಸ್., ಶೂಟಿಂಗ್‌ನ ತಿಲೋತ್ತಮಾ ಸೇನ್, ಈಜುಪಟುಗಳಾದ ಆಕಾಶ್ ಮಣಿ, ಶ್ರೀಹರಿ ನಟರಾಜ್, ದಕ್ಷಿಣ್ ಎಸ್., ಅನೀಶ್ ಗೌಡ, ಟೇಬಲ್ ಟೆನ್ನಿಸ್‌ನ ಯಶಸ್ವಿನಿ ಘೋರ್ಪಡೆ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್‌ನ ದೀಪು ಮಲ್ಲೇಶ್ ಅವರು ಲಾಭ ಪಡೆಯಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಗದು ಪುರಸ್ಕಾರ ಮೊತ್ತ ಭಾರಿ ಹೆಚ್ಚಳ

*​ನಗದು ಪುರಸ್ಕಾರ ಮೊತ್ತ ಭಾರಿ ಹೆಚ್ಚಳ*:

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರ ಮೊತ್ತವನ್ನು ರಾಜ್ಯ ಸರ್ಕಾರವು ಪರಿಷ್ಕರಿಸಿ ಗಮನಾರ್ಹವಾಗಿ ಹೆಚ್ಚಿಸಿದೆ. ಈ ಹಿಂದೆ ಚಿನ್ನದ ಪದಕಕ್ಕೆ ರೂ. 35.00 ಲಕ್ಷ, ಬೆಳ್ಳಿ ಪದಕಕ್ಕೆ ರೂ. 25.00 ಲಕ್ಷ ಹಾಗೂ ಕಂಚಿನ ಪದಕಕ್ಕೆ ರೂ. 15.00 ಲಕ್ಷ ನೀಡಲಾಗುತ್ತಿತ್ತು. ಇದೀಗ ಪರಿಷ್ಕೃತ ಆದೇಶದಂತೆ ಚಿನ್ನದ ಪದಕ ವಿಜೇತರಿಗೆ ರೂ. 1.00 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ರೂ. 75.00 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ರೂ. 50.00 ಲಕ್ಷ ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ.

*​ಪರಿಷ್ಕೃತ ಬಹುಮಾನ ಪಡೆದ ಪದಕ ವಿಜೇತರು*:

ಈ ಬಾರಿ ಪದಕ ಗೆದ್ದ 08 ಕ್ರೀಡಾಪಟುಗಳಿಗೆ ಹೆಚ್ಚಿಸಿದ ನಗದು ಬಹುಮಾನದ ಜೊತೆಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ನೀಡಲಾಗುವ ರೂ. 5.00 ಲಕ್ಷ ಹೆಚ್ಚುವರಿ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತಿದೆ.

​ಶ್ರೇಯಾಂಕಾ ಆರ್. ಪಾಟೀಲ್ (ಕ್ರಿಕೆಟ್ – ಮಹಿಳಾ ತಂಡ): ಚಿನ್ನದ ಪದಕಕ್ಕಾಗಿ ರೂ. 1.00 ಕೋಟಿ,

​ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್): 4×400 ಮಹಿಳಾ ರಿಲೇಯಲ್ಲಿ ಚಿನ್ನ (ರೂ. 1.00 ಕೋಟಿ) ಹಾಗೂ 4×400 ಮಿಕ್ಸ್‌ಡ್ ರಿಲೇಯಲ್ಲಿ ಬೆಳ್ಳಿ (ರೂ. 75.00 ಲಕ್ಷ) ಪಡೆದು ಒಟ್ಟು ರೂ. 1.75 ಕೋಟಿ ನಗದು ಪುರಸ್ಕಾರ.

​ಪ್ರಣವಿ ಎಸ್. ಅರಸ್ (ಗಾಲ್ಫ್) ವೈಯಕ್ತಿಕ ವಿಭಾಗದಲ್ಲಿ ಚಿನ್ನ (ರೂ. 1.00 ಕೋಟಿ) ಹಾಗೂ ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ (ರೂ. 75.00 ಲಕ್ಷ) ಪಡೆದು ಒಟ್ಟು ರೂ. 1.75 ಕೋಟಿ ನಗದು ಪುರಸ್ಕಾರ, ಮೋಹಿತ್ ಹೆಚ್.ಎಸ್. (ಹಾಕಿ – ಪುರುಷರ ತಂಡ) ಚಿನ್ನದ ಪದಕಕ್ಕಾಗಿ ರೂ. 1.00 ಕೋಟಿ, ​ತಿಲೋತ್ತಮಾ ಸೇನ್ (ಶೂಟಿಂಗ್ – 50ಮೀ ರೈಫಲ್ ತಂಡ): ಬೆಳ್ಳಿ ಪದಕಕ್ಕಾಗಿ ರೂ. 75.00 ಲಕ್ಷ, ಅದಿತಿ ಅಶೋಕ್ (ಗಾಲ್ಫ್ – ಮಹಿಳಾ ತಂಡ) ಬೆಳ್ಳಿ ಪದಕಕ್ಕಾಗಿ ರೂ. 75.00 ಲಕ್ಷ, ಆಯುಷ್ ಶೆಟ್ಟಿ (ಬ್ಯಾಡ್ಮಿಂಟನ್ – ಪುರುಷರ ತಂಡ) ಕಂಚಿನ ಪದಕಕ್ಕಾಗಿ ರೂ. 50.00 ಲಕ್ಷ, ಸ್ನೇಹಾ ಎಸ್.ಎಸ್. (ಅಥ್ಲೆಟಿಕ್ಸ್ – 4×100 ರಿಲೇ): ಕಂಚಿನ ಪದಕಕ್ಕಾಗಿ ರೂ. 50.00 ಲಕ್ಷ ನಗದು ಪುರಸ್ಕಾರ ಪಡೆದಿದ್ದಾರೆ.

ನೇರ ನೇಮಕಾತಿ ಹಾಗೂ ಕ್ರೀಡಾಪಟುಗಳಿಗೆ 2% ಮೀಸಲಾತಿ ಜಾರಿ

*​ನೇರ ನೇಮಕಾತಿ ಹಾಗೂ ಕ್ರೀಡಾಪಟುಗಳಿಗೆ 2% ಮೀಸಲಾತಿ ಜಾರಿ*:

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಅರ್ಹ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ‘ಗುಂಪು-ಬಿ’ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ, ದಿನಾಂಕ 03-10-2026 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಹಂತದ (ಗುಂಪು-ಎ, ಬಿ, ಸಿ ಮತ್ತು ಡಿ) ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇಕಡಾ 2% ಮೀಸಲಾತಿಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.

‘ಗುರಿ: ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆ

*​’ಗುರಿ: ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆ*:

ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ ‘ಗುರಿ ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಪೂರ್ವ ತರಬೇತಿ ಮತ್ತು ಸಿದ್ಧತೆಗಾಗಿ ಪ್ರಸ್ತುತ ಸಾಲಿನಲ್ಲಿ ತಲಾ ರೂ. 10.00 ಲಕ್ಷ ನಗದು ಪ್ರೋತ್ಸಾಹ ಧನ ನೀಡಲಾಗುವುದು‌ ಎಂದು ಪ್ರಕಟಣೆಯಲ್ಲಿ ತಿಳಿಸಿದೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular