HomeEntertainmentಓಟಿಟಿಗೆ ಕಾಲಿಟ್ಟ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’: ಭಾರತದಲ್ಲೂ ಡಿಜಿಟಲ್ ಸ್ಟ್ರೀಮಿಂಗ್ ಆರಂಭ!

ಓಟಿಟಿಗೆ ಕಾಲಿಟ್ಟ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’: ಭಾರತದಲ್ಲೂ ಡಿಜಿಟಲ್ ಸ್ಟ್ರೀಮಿಂಗ್ ಆರಂಭ!

ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದು, ‘ಅವತಾರ್’ ಮತ್ತು ‘ಅವೆಂಜರ್ಸ್: ಎಂಡ್‌ಗೇಮ್’ ಸಿನಿಮಾಗಳ ನಂತರ ಸಾರ್ವಕಾಲಿಕ ಅತ್ಯಂತ ಹೆಚ್ಚು ಗಳಿಕೆ ಕಂಡ ಮೂರನೇ ಬೃಹತ್ ಚಿತ್ರ ಎನಿಸಿಕೊಂಡಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಲೂ ಡೇ’ ಕೊನೆಗೂ ಭಾರತದಲ್ಲಿ ಡಿಜಿಟಲ್ ರಂಗಕ್ಕೆ ಕಾಲಿಟ್ಟಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಮಾರ್ವೆಲ್ ಬ್ಲಾಕ್‌ಬಸ್ಟರ್ ಸಿನಿಮಾ ಈಗ ಪ್ರೈಮ್ ವೀಡಿಯೋದಲ್ಲಿ ಆರಂಭಿಕ ವೀಕ್ಷಣೆಯ ಬಾಡಿಗೆ (Early-access rental) ರೂಪದಲ್ಲಿ ಲಭ್ಯವಿದ್ದು, ವೀಕ್ಷಕರು 299 ರೂಪಾಯಿ ಪಾವತಿಸಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಈ ಮಾರ್ವೆಲ್ ಸಾಹಸಮಯ ಚಿತ್ರವು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಇದರ ಜೊತೆಗೆ ಆಪಲ್ ಟಿವಿ ಆ್ಯಪ್‌ನಲ್ಲೂ ಸಹ ಈ ಸಿನಿಮಾ ಲಭ್ಯವಿದ್ದು, ಅಲ್ಲಿ ವೀಕ್ಷಕರು 399 ರೂಪಾಯಿಗೆ ಬಾಡಿಗೆಗೆ ಪಡೆಯಬಹುದು ಅಥವಾ 599 ರೂಪಾಯಿ ನೀಡಿ ಪೂರ್ತಿಯಾಗಿ ಖರೀದಿಸಬಹುದಾಗಿದೆ. ಇದರಿಂದಾಗಿ ಮನೆಬಾಗಿಲಲ್ಲೇ ಕುಳಿತು ಮಾರ್ವೆಲ್ ಜಗತ್ತಿನ ಕಂಟೆಂಟ್ ಅನುಭವಿಸಲು ಅಭಿಮಾನಿಗಳಿಗೆ ಸುವರ್ಣಾವಕಾಶ ಸಿಕ್ಕಂತಾಗಿದೆ.

‘ಶಾಂಗ್-ಚಿ ಅಂಡ್ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್’ ಸಿನಿಮಾ ನಿರ್ದೇಶಿಸಿದ್ದ ಡೆಸ್ಟಿನ್ ಡೇನಿಯಲ್ ಕ್ರೆಟನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಸೂಪರ್ ಸ್ಟಾರ್ ಟಾಮ್ ಹಾಲೆಂಡ್ ಮತ್ತೊಮ್ಮೆ ಸ್ಪೈಡರ್ ಮ್ಯಾನ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರೊಂದಿಗೆ ಜಾಗತಿಕ ಫ್ಯಾಷನ್ ಐಕಾನ್ ಝೆಂಡಾಯಾ, ಸ್ಯಾಡಿ ಸಿಂಕ್ ಹಾಗೂ ಆಕ್ಷನ್ ನಟ ಜಾನ್ ಬರ್ನ್‌ಥಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆವಿನ್ ಫೈಗಿ ಮತ್ತು ಆಮಿ ಪಾಸ್ಕಲ್ ನಿರ್ಮಿಸಿರುವ ಈ ಚಿತ್ರವನ್ನು ಪ್ರದರ್ಶನ ಕಾಣಲು ಕಾತುರದಿಂದ ಕಾಯುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಈ ಓಟಿಟಿ ಬಿಡುಗಡೆ ಭಾರಿ ಖುಷಿ ತಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular