ಬಾಲಿವುಡ್ ಸ್ಟಾರ್ ಅಜಯ್ ದೇವಗನ್, ಶ್ರಿಯಾ ಶರಣ್, ಟಬು, ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ: ದಿ ಕನ್‌ಕ್ಲೂಷನ್’ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಮುಂದುವರಿಸಿದೆ. ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಅತ್ಯಂತ ವಿಜೃಂಭಣೆಯಿಂದ ತೆರೆಕಂಡ ಈ ಸಿನಿಮಾ, ಮೊದಲ ವೀಕೆಂಡ್‌ನಲ್ಲಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಪ್ರದರ್ಶನಗೊಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಸಾಮಾನ್ಯವಾಗಿ ವೀಕೆಂಡ್ ಮುಗಿದು ಸೋಮವಾರ ಬಂದಾಗ ಸಿನಿಮಾಗಳ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಾಣುವುದು ಸಹಜ. ಅಂತೆಯೇ, ಬಿಡುಗಡೆಯಾದ ೪ನೇ ದಿನವಾದ ಸೋಮವಾರ ‘ದೃಶ್ಯಂ ೩’ ಕಲೆಕ್ಷನ್‌ನಲ್ಲಿ ಶೇ. 65.6 ರಷ್ಟು ಕುಸಿತ ಕಂಡುಬಂದಿದ್ದರೂ ಸಹ, ದೇಶಾದ್ಯಂತ 16,274 ಪ್ರದರ್ಶನಗಳಿಂದ ಬರೋಬ್ಬರಿ ₹21 ಕೋಟಿ ನೆಟ್ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಭಾನುವಾರದ ₹೬೧ ಕೋಟಿ ಗಳಿಕೆಗೆ ಹೋಲಿಸಿದರೆ ಇದು ಕಡಿಮೆಯಾದರೂ, ಸೋಮವಾರದ ಮಟ್ಟಿಗೆ ಇದು ಅತ್ಯುತ್ತಮ ಗಳಿಕೆ ಎಂದೇ ವಿಶ್ಲೇಷಿಸಲಾಗಿದೆ.
ಇದರೊಂದಿಗೆ ಚಿತ್ರದ ಭಾರತದ ಒಟ್ಟು ನೆಟ್ ಕಲೆಕ್ಷನ್ ಅಂದಾಜು ₹೧೯೭.೫೦ ಕೋಟಿಗೆ ತಲುಪಿದ್ದು, ಭಾರತದ ಗ್ರೋಸ್ ಕಲೆಕ್ಷನ್ ಬರೋಬ್ಬರಿ ₹237ಕೋಟಿ ಗಡಿ ದಾಟಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಸದ್ದು ಮಾಡುತ್ತಿರುವ ಈ ಸಿನಿಮಾ ಸೋಮವಾರ ಒಂದೇ ದಿನ ₹5 ಕೋಟಿ ಗಳಿಸಿದ್ದು, ವಿದೇಶಿ ಗ್ರೋಸ್ ಕಲೆಕ್ಷನ್ ₹66 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಬಿಡುಗಡೆಯಾದ ಕೇವಲ 4 ದಿನಗಳಲ್ಲೇ ₹303 ಕೋಟಿ ಗ್ರೋಸ್ ಕಲೆಕ್ಷನ್ ಮಾಡುವ ಮೂಲಕ ₹೩೦೦ ಕೋಟಿ ಕ್ಲಬ್ ಸೇರಿದೆ.
ಸುಮಾರು ₹110 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಿರ್ಮಾಪಕರಿಗೆ ಭಾರಿ ಲಾಭ ತಂದುಕೊಟ್ಟಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳು ವ್ಯಕ್ತವಾಗುತ್ತಿದ್ದು, ಚಿತ್ರಕಥೆ ಹಾಗೂ ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗಳಿಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ವಾರದ ದಿನಗಳಲ್ಲೂ (Weekdays) ಇದೇ ಟ್ರೆಂಡ್ ಮುಂದುವರಿದರೆ, ಈ ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಸಿನಿಮಾಗಳ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

