ನವದೆಹಲಿ: ಎಸ್ಐಆರ್ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಚುನಾವಣಾ ಆಯೋಗಕ್ಕೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಎಸ್ ಐ ಆರ್ ಪ್ರಕ್ರಿಯೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಜ್ಞಾನೇಶ್ ಕುಮಾರ್ ಹಾಗೂ ಇಬ್ಬರು ಆಯುಕ್ತರಿಗೂ ನೋಟಿಸ್ ಜಾರಿ ಮಾಡಿದ್ದು, ಚುನಾವಣಾ ಆಯೋಗ ಕಾನೂನು ಪಾಲಿಸಬೇಕು ಎಂದು ಸೂಚಿಸಿದೆ. ಇದೇ ವೇಳೆ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬಿಜೆಪಿಯವರು ಫಾರ್ಮ್-7 ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ನಾವೇನು ಅವರಿಗೆ ‘ಭಾರತ ರತ್ನ’ ನೀಡಬೇಕೇ?: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬೆಂಗಳೂರು: ‘ಫಾರ್ಮ್-7’ ಅರ್ಜಿಗಳಿಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವುದನ್ನು ಹಾಗೂ ಪರಿಶೀಲನೆಯನ್ನು ನಿಲ್ಲಿಸುವಂತೆ ಕೋರಿ ಕರ್ನಾಟಕ ಬಿಜೆಪಿಯ ಉನ್ನತ ಮಟ್ಟದ ನಿಯೋಗವು ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಅವರು ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ನಾವೇನು ಅವರಿಗೆ ‘ಭಾರತ ರತ್ನ’ ನೀಡಬೇಕೇ?… ಎಂದು ಗರಂ ಆಗಿದ್ದಾರೆ.
ಈ ರೀತಿಯ ಬೃಹತ್ ಪ್ರಮಾಣದ ಮತ್ತು ಮೊದಲೇ ಮುದ್ರಿತವಾದ (pre-printed) ಫಾರ್ಮ್-7 ಅರ್ಜಿಗಳು ಕೇವಲ ಬಿಜೆಪಿಯಿಂದಲೇ ಏಕೆ ಬರುತ್ತಿವೆ?… ನೀವು ದೇಶದ ಕಾನೂನನ್ನು ಪಾಲಿಸದಿದ್ದರೆ, ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದರು.
ಇದು ಗುಜರಾತ್, ದೆಹಲಿ ಅಥವಾ ಉತ್ತರ ಪ್ರದೇಶವಲ್ಲ, ಅಥವಾ ಇಂತಹ ಕೃತ್ಯಗಳನ್ನು ಎಸಗಿದರೂ ಸುಲಭವಾಗಿ ಪಾರಾಗಬಹುದು ಎಂದುಕೊಳ್ಳಲು ಬೇರೆ ರಾಜ್ಯವಲ್ಲ. ಮತದಾರರ ಗುರುತಿನ ಚೀಟಿ ಸಂಖ್ಯೆಗಳು (EPIC numbers), ಹೆಸರುಗಳು, ವಿಳಾಸಗಳು ಮತ್ತು ಲೋಪದೋಷಗಳ ವಿವರಗಳನ್ನು ಒಳಗೊಂಡಿರುವ 1,000 ಮೊದಲೇ ಮುದ್ರಿತ ಅರ್ಜಿಗಳು ಅವರಿಗೆ ಹೇಗೆ ಸಿಗುತ್ತಿವೆ? ಅವರು ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುತ್ತಿದ್ದಾರೆ. ಅಂದರೆ ಬಿಜೆಪಿಯವರು ಈಗ ಚುನಾವಣಾ ಆಯೋಗದ ಕೆಲಸವನ್ನು ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಹಾಗಾದರೆ ಎಸ್‌ಐಆರ್ (SIR)ನ ಉದ್ದೇಶವೇನಿತ್ತು? ಫಾರ್ಮ್ -7 ದುರುಪಯೋಗಪಡಿಸಿಕೊಳ್ಳುತ್ತಿದ್ದರು ಸುಮ್ಮನೇ ಬಿಟ್ಟು ಬಿಡಲು ಎಸ್ಐಆರ್ ಆರಂಭಿಸಿದ್ದದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.

