HomeKarnatakaಅಂತರ್ಜಲ ಮರುಪೂರಣದಲ್ಲಿ ಕರ್ನಾಟಕ ಮುಂಚೂಣಿ: ಸಚಿವ ಅಜಯ್ ಧರ್ಮಸಿಂಗ್

ಅಂತರ್ಜಲ ಮರುಪೂರಣದಲ್ಲಿ ಕರ್ನಾಟಕ ಮುಂಚೂಣಿ: ಸಚಿವ ಅಜಯ್ ಧರ್ಮಸಿಂಗ್

ಬೆಂಗಳೂರು- ಕರ್ನಾಟಕದಲ್ಲಿ ಬಳಕೆಯಲ್ಲಿರುವ ಜಲಮೂಲಗಳ ಪೈಕಿ ಸುಮಾರು *ಶೇ.30ರಷ್ಟು ಜಲಮೂಲಗಳು ಅಂತರ್ಜಲ ಮರುಪೂರಣಕ್ಕೆ ಪ್ರಮುಖವಾಗಿ ಬಳಕೆಯಾಗುತ್ತಿದ್ದು*, ರಾಜ್ಯದ ಜಲಸುರಕ್ಷತಾ ವ್ಯವಸ್ಥೆಯಲ್ಲಿ ಕೆರೆ, ಕಟ್ಟೆ ಮತ್ತು ಟ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ *ಡಾ. ಅಜಯ್ ಧರ್ಮಸಿಂಗ್* ತಿಳಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವಾಲಯದ *ಎರಡನೇ ಜಲಮೂಲಗಳ ಗಣತಿ* ಪ್ರಕಾರ, ಕರ್ನಾಟಕದಲ್ಲಿ ಬಳಕೆಯಲ್ಲಿರುವ *28,075 ಜಲಮೂಲಗಳ ಪೈಕಿ 8,353*, ಅಂದರೆ ಸುಮಾರು *ಶೇ.29.8ರಷ್ಟು*, ಅಂತರ್ಜಲ ಮರುಪೂರಣಕ್ಕಾಗಿ ಪ್ರಮುಖವಾಗಿ ಬಳಸಲಾಗುತ್ತಿದೆ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಮಾಣ *ತಮಿಳುನಾಡಿನಲ್ಲಿ ಶೇ.34.3, ಕರ್ನಾಟಕದಲ್ಲಿ ಶೇ.29.8, ತೆಲಂಗಾಣದಲ್ಲಿ ಶೇ.27.5, ಆಂಧ್ರಪ್ರದೇಶದಲ್ಲಿ ಶೇ.19.2 ಮತ್ತು ಕೇರಳದಲ್ಲಿ ಶೇ.15.3*ರಷ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ಭಾರತದ ರಾಜ್ಯಗಳ ಹೋಲಿಕೆ

*“ಇದು ರಾಜ್ಯಗಳ ನಡುವಿನ ಹೋಲಿಕೆಗೆ ಸೀಮಿತವಾದ ವಿಷಯವಲ್ಲ. ಮಳೆಯ ಏರುಪೇರು ಮತ್ತು ಬರ ಪರಿಸ್ಥಿತಿಯನ್ನು ಎದುರಿಸುವ ಕರ್ನಾಟಕಕ್ಕೆ ಅಂತರ್ಜಲ ಮರುಪೂರಣವೇ ದೀರ್ಘಕಾಲೀನ ಜಲಭದ್ರತೆಯ ಪ್ರಮುಖ ಆಧಾರ. ಕೆರೆ, ಕಟ್ಟೆ ಮತ್ತು ಟ್ಯಾಂಕ್‌ಗಳು ಕೇವಲ ನೀರು ಸಂಗ್ರಹಿಸುವ ಮೂಲಗಳಲ್ಲ; ಅವು ನಮ್ಮ ಭವಿಷ್ಯದ ಅಂತರ್ಜಲವನ್ನು ಉಳಿಸುವ ವ್ಯವಸ್ಥೆಗಳು,”* ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.

ರಾಜ್ಯದ ಸುಮಾರು *ಶೇ.96ರಷ್ಟು ಜಲಮೂಲಗಳು ಗ್ರಾಮೀಣ ಪ್ರದೇಶಗಳಲ್ಲಿ* ಇರುವುದರಿಂದ, ಅವುಗಳ ಸಂರಕ್ಷಣೆ ಮತ್ತು ಮರುಪೂರಣ ಸಾಮರ್ಥ್ಯ ಹೆಚ್ಚಿಸುವುದು ಕೃಷಿ, ಕುಡಿಯುವ ನೀರು, ಪಶುಸಂಗೋಪನೆ ಹಾಗೂ ಗ್ರಾಮೀಣ ಜಲಸುರಕ್ಷತೆಗೆ ನೇರವಾಗಿ ಸಂಬಂಧಿಸಿದೆ ಎಂದು ಸಚಿವರು ತಿಳಿಸಿದರು.

ಅಂತರ್ಜಲ ಮರುಪೂರಣಕ್ಕೆ ಪ್ರಮುಖವಾಗಿ ಬಳಕೆಯಾಗುತ್ತಿರುವ 8,353 ಜಲಮೂಲಗಳಲ್ಲಿ *5,302 ಜಲಮೂಲಗಳು, 1,548 ಕೆರೆಗಳು ಹಾಗೂ 1,267 ಕೊಳಗಳು* ಸೇರಿವೆ. ಇದು ಕರ್ನಾಟಕದ ಸಾಂಪ್ರದಾಯಿಕ ಜಲಮೂಲ ವ್ಯವಸ್ಥೆಗಳು ಇಂದಿಗೂ ಅಂತರ್ಜಲ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತಿರುವುದನ್ನು ತೋರಿಸುತ್ತದೆ.

ಜಲಮೂಲಗಳ ಸಂರಕ್ಷಣೆ ಮತ್ತು ಮರುಪೂರಣ ಯೋಜನೆಗಳು

*“ಮುಂದಿನ ಹಂತದಲ್ಲಿ ಜಲಾನಯನ ಪ್ರದೇಶಗಳ ಸಂರಕ್ಷಣೆ, ಹೂಳು ತೆರವು, ಕೆರೆಗಳ ಪುನಶ್ಚೇತನ ಹಾಗೂ ಮಳೆನೀರಿನ ಸಂಗ್ರಹವನ್ನು ಅಂತರ್ಜಲ ನಿರ್ವಹಣೆಯೊಂದಿಗೆ ಸಮಗ್ರವಾಗಿ ಜೋಡಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಮರುಪೂರಣ ಸಾಮರ್ಥ್ಯ ಹೆಚ್ಚಿಸುವುದು ನಮ್ಮ ಆದ್ಯತೆಯಾಗಲಿದೆ,”* ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular