HomeLatest Newsಬೆಳಿಗ್ಗೆ 5 ಗಂಟೆಗೆ ಶಿಸ್ತಿನ ಕಠಿಣ ಅಭ್ಯಾಸ, ಬಿಗಿ ಡಯಟ್: ಲವ್ಲಿನಾ ಬೊರ್ಗೊಹೈನ್ ಐತಿಹಾಸಿಕ ಚಿನ್ನದ...

ಬೆಳಿಗ್ಗೆ 5 ಗಂಟೆಗೆ ಶಿಸ್ತಿನ ಕಠಿಣ ಅಭ್ಯಾಸ, ಬಿಗಿ ಡಯಟ್: ಲವ್ಲಿನಾ ಬೊರ್ಗೊಹೈನ್ ಐತಿಹಾಸಿಕ ಚಿನ್ನದ ಹಿಂದಿದೆ ರೋಚಕ ಕಥೆ!

ತಮ್ಮ 29ನೇ ಜನ್ಮದಿನದ ದಿನವೇ ಭಾರತದ ಬಾಕ್ಸಿಂಗ್ ತಾರೆ ಲವ್ಲಿನಾ ಬೊರ್ಗೊಹೈನ್ ದೇಶಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 75 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್‌ನಲ್ಲಿ ಚೀನಾದ ಬಾವೊ ಝಿಯಿ ಅವರನ್ನು 5-0 ಅಂತರದಿಂದ ಪರಾಭವಗೊಳಿಸುವ ಮೂಲಕ ಅವರು ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬಾರಮುಖಿಯಾ ಗ್ರಾಮದವರಾದ ಲವ್ಲಿನಾ, 2022ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಪದಕದ ಬಣ್ಣ ಬದಲಾಯಿಸಿ ಚಿನ್ನ ಗೆಲ್ಲುವ ಅವರ ಕನಸು ನನಸಾಗಿದೆ. ಮಗಳ ಈ ಐತಿಹಾಸಿಕ ಗೆಲುವಿನ ಬಳಿಕ ಪೋಷಕರೊಂದಿಗೆ ವೀಡಿಯೊ ಕರೆ ಮೂಲಕ ಸಂಭ್ರಮ ಹಂಚಿಕೊಂಡಿದ್ದು, ಅವರ ತಂದೆ ಟಿಕೆನ್ ಬೊರ್ಗೊಹೈನ್ ಮಗಳ ಶ್ರಮ ಮತ್ತು ಕಠಿಣ ದಿನಚರಿಯನ್ನು ಸ್ಮರಿಸಿದ್ದಾರೆ.

ಬಾಕ್ಸಿಂಗ್ ತರಬೇತುದಾರ ಪದುಮ್ ಬೋರೊ ಅವರ ಪ್ರಕಾರ, ಲವ್ಲಿನಾ ಅವರ ಸಫಲತೆಗೆ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಜೀವನಶೈಲಿಯೇ ಮುಖ್ಯ ಕಾರಣ. ಪ್ರತಿದಿನ ಮುಂಜಾನೆ 5 ಗಂಟೆಗೆ ಏಳುವ ಅವರು, ಬೆಳಿಗ್ಗೆ 2 ಗಂಟೆ ಮತ್ತು ಮಧ್ಯಾಹ್ನ 3 ಗಂಟೆಗಳ ಕಾಲ ಕಠಿಣ ಅಭ್ಯಾಸ ನಡೆಸುತ್ತಿದ್ದರು. ದೇಹದ ತೂಕವನ್ನು ನಿಖರವಾಗಿ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಿದ್ದು, ಪ್ರೋಟೀನ್ ಸಪ್ಲಿಮೆಂಟ್ ಜೊತೆಗೆ ನಿತ್ಯ ಮೊಟ್ಟೆ ಹಾಗೂ ಚಿಕನ್ ಸೇವನೆಯೊಂದಿಗೆ ಶರೀರವನ್ನು ದಂಡಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಎರಡು ಪಂದ್ಯಗಳಲ್ಲಿ ಸ್ವಲ್ಪ ಅನಾರೋಗ್ಯದ ನಡುವೆಯೂ ಕಣಕ್ಕಿಳಿದಿದ್ದ ಲವ್ಲಿನಾ, ದೇಶಕ್ಕೆ 12ನೇ ಚಿನ್ನದ ಪದಕ ತಂದುಕೊಡುವ ಮೂಲಕ ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಚರಿತ್ರೆ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular