HomeKarnatakaಮಂಗಳೂರು MRPL ಸ್ಫೋಟಕ್ಕೆ ದೈವದ ಮುನಿಸು ಕಾರಣವೇ? ಅಂದು ದೈವ ನುಡಿದ್ದೇನು?

ಮಂಗಳೂರು MRPL ಸ್ಫೋಟಕ್ಕೆ ದೈವದ ಮುನಿಸು ಕಾರಣವೇ? ಅಂದು ದೈವ ನುಡಿದ್ದೇನು?

ಮಂಗಳೂರು: ಮಂಗಳೂರು MRPL ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, 9 ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಈ ದುರಂತಕ್ಕೆ ದೈವದ ಮುನಿಸು ಕಾರಣವೇ? ಎಂಆರ್ ಪಿಎಲ್ ಪ್ರದೇಶದಲ್ಲಿ ದೈವಸ್ಥಾನವಿದ್ದು, ಅಲ್ಲಿ ದೈವಾರಾಧನೆಗೆ ತಡೆಯೊಡ್ಡಿದ್ದೇ ಅನಾಹುತಕ್ಕೆ ಕಾರಣವಾಯಿತೇ? ಎಂಬ ಚರ್ಚೆ ಮಂಗಳೂರು ಭಾಗದಲ್ಲಿ ಆರಂಭವಾಗಿದೆ.

ಎಂ ಆರ್ ಪಿ ಎಲ್ ದುರಂತಕ್ಕೆ ನೆಲ್ಲಿದಡಿ ಗುತ್ತಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಕಾರಣವೆಂದು ಕರಾವಳಿ ಭಾಗದಲ್ಲಿ ಚರ್ಚೆಯಾಗುತ್ತಿದೆ. MSEZ ಭೂ ಸ್ವಾಧೀನದ ವೇಳೆ ದೈವದ ಸ್ಥಾನಕ್ಕೆ ಅಡ್ಡಿಪಡಿಸಿದಾಗ, “ಬೆಂಕಿ ಸುರಿಸುತ್ತೇನೆ” ಎಂದು ದೈವ ಎಚ್ಚರಿಸಿತ್ತು. 800 ವರ್ಷಗಳ ಇತಿಹಾಸವಿರುವ ದೈವಸ್ಥಾನದ ಭೂ ವಿವಾದ ಮತ್ತು ಹಿಂದಿನ ಅಗ್ನಿ ಅವಘಡಗಳನ್ನು ಸ್ಥಳೀಯರು ದೈವದ ಶಾಪವೆಂದು ನಂಬಿದ್ದಾರೆ. ಸರ್ಕಾರ ಮತ್ತು ಕಂಪನಿ ದೈವದ ಜಾಗವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಲ್ಲಿದಡಿ ಗುತ್ತು, ಇದು ದೈವಗಳ ಕಾರ್ಣಿಕ ಕ್ಷೇತ್ರ, ಧರ್ಮ, ನಿಷ್ಠೆಗೆ ಹಾಗೂ ಕಾರ್ಣಿಕಕ್ಕೆ ಹೆಸರುವಾಸಿ, ನೀಡಿದ ನುಡಿಯಂತೆ ನಡೆದುಕೊಳ್ಳುವುದು ಇಲ್ಲಿನ ದೈವಗಳು, ನೆನ್ನೆ ಮಂಗಳೂರಿ MRPL ಸ್ಫೋಟದ ಘಟನೆಗೂ ಈ ಕ್ಷೇತ್ರದ ದೈವ ನೀಡಿದ ನುಡಿಗೂ ಸಂಬಂಧವಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಲ್ಲಿ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ಅವಘಡಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಮೂಡಿದೆ.

ದೈವಾರಾಧನೆಗೆ ಅಧಿಕಾರಿಗಳು ತಡೆ ಒಡ್ಡಿದ ಸಂದರ್ಭದಲ್ಲಿ, “ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ನನ್ನ ಮಣ್ಣು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ” ಎಂದು ದೈವ ನುಡಿದಿದ್ದ ಕಾರಣ, ಈ ಸ್ಫೋಟಕ್ಕೂ ದೈವದ ಎಚ್ಚರಿಕೆಗೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಹೇಳುತ್ತಿದ್ದಾರೆ.

2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಈ ವೇಳೆ ಸಮೃದ್ಧ ಗದ್ದೆಗಳು, ಶಾಲೆ, ಚರ್ಚ್, ಮಸೀದಿಗಳು, ಸಾವಿರಾರು ಮನೆಗಳು, ನಾಗಬನ ಹಾಗೂ ದೈವಸ್ಥಾನಗಳು ನೆಲಸಮಗೊಂಡವು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವನ್ನು ಕಂಪನಿಯಿಂದ ಮುಟ್ಟಲು ಸಾಧ್ಯವಾಗಲಿಲ್ಲ. ಜಾಗವನ್ನು ಬಲವಂತವಾಗಿ ಕಂಪನಿ ತನ್ನ ಹೆಸರಿಗೆ ಬರೆಸಿಕೊಂಡಿದ್ದರೂ, “ಯಾವ ಕಾರಣಕ್ಕೂ ಈ ಮಣ್ಣನ್ನು ಬಿಡುವುದಿಲ್ಲ” ಎಂದು ದೈವ ನುಡಿದಿತ್ತು.

2016ರಲ್ಲಿ ಈ ಜಾಗವನ್ನು ನೆಲಸಮ ಮಾಡಲು ಮತ್ತೊಮ್ಮೆ ಯತ್ನಿಸಿದಾಗಲೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ದೈವಸ್ಥಾನವನ್ನು ಸ್ಮಾರಕದಂತೆ ಉಳಿಸಿಕೊಂಡು, ನಿತ್ಯ ಪೂಜೆಗೆ ಅವಕಾಶ ನೀಡಿದ್ದರು.

ಕಳೆದ 2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯ ಅಧಿಕಾರಿಗಳು ಮತ್ತೆ ತಗಾದೆ ತೆಗೆದು, ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು-ನೀರು ಇಡಲು ಹಾಗೂ ಸಂಕ್ರಮಣದ ನಿತ್ಯ ಪೂಜೆಗೆ ಗೇಟ್‌ನಲ್ಲೇ ತಡೆ ಒಡ್ಡಿದ್ದರು. ಪ್ರಸಿದ್ಧ ದೈವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಿದ್ದು ಸಾರ್ವಜನಿಕವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ‘ನೆಲ್ಲಿದಡಿ ಗುತ್ತು ಉಳಿಸಿ’ ಅಭಿಯಾನದ ಬಳಿಕ ಪಾಸ್ ನೀಡಿ ದೈವಾರಾಧನೆಗೆ ಸೀಮಿತ ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ದರ್ಶನ ಸೇವೆಯ ವೇಳೆ ಜುಮಾದಿ ದೈವವು ನೆಲ್ಲಿದಡಿ ಗುತ್ತುವಿನ ಮುಖ್ಯಸ್ಥ ಚೌಟರಿಗೆ ಅಭಯ ನೀಡುತ್ತಾ, ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. “ನನ್ನ ಸ್ಥಾನ ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ಬರೆದುಕೊಡದಿದ್ದರೆ ಬೆಂಕಿ ಸುರಿಸುತ್ತೇನೆ!” ಎಂದು ನಾಲ್ಕು ತಿಂಗಳ ಹಿಂದೆಯಷ್ಟೇ ದೈವ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

2021ರಲ್ಲೂ ಎಂಎಸ್‌ಇಝಡ್ ಆವರಣದೊಳಗಿದ್ದ ಮುಂಬೈ ಮೂಲದ ‘ಕ್ಯಾಟಸಿಂಥ್’ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಇಡೀ ಕಾರ್ಖಾನೆ ಹೊತ್ತಿ ಉರಿದಿತ್ತು. ಇದೀಗ ಸಾಲು ಸಾಲು ಅಗ್ನಿ ದುರಂತಗಳು ಸಂಭವಿಸುತ್ತಿರುವುದು ದೈವದ ಮುನಿಸೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಸರ್ಕಾರ ಹಾಗೂ ಕಂಪನಿ ಆಡಳಿತ ಮಂಡಳಿ ದೈವದ ಜಾಗವನ್ನು ದೈವಸ್ಥಾನಕ್ಕೇ ಹಸ್ತಾಂತರಿಸಬೇಕು ಎಂದು ದೈವಾರಾಧಕರು ಒತ್ತಾಯಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular