HomeKarnatakaರಾಹುಲ್​ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್

ರಾಹುಲ್​ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್

ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಅವರಿಗೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಪತ್ರ ಬರೆದಿದ್ದಾರೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯುವ ಬಗ್ಗೆ ಚುನಾವಣೆ ವೇಳೆ ಈ ಬಗ್ಗೆ ಭರವಸೆ ನೀಡಲಾಗಿದ್ದ ಹಿನ್ನೆಲೆ ಪತ್ರದ ಜೊತೆ ಪ್ರಣಾಳಿಕೆಯ ಕಾಪಿ ಲಗತ್ತಿಸಿ ಆಗ್ರಹಿಸಿದ್ದಾರೆ.

ಕಾಯ್ದೆಯ 79A, 79B, 79C ಮರುಜಾರಿಗೆ ಪಾಟೀಲ್ ಒತ್ತಾಯಿಸಿದ್ದು, ರೈತ ವಿರೋಧಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಸರ್ಕಾರ ವಿಫಲವಾಗಿದೆ. 2021ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 19.92 ಲಕ್ಷ ಎಕರೆ ಕೃಷಿ ಭೂಮಿ ಮಾರಾಟ‌‌ವಾಗಿದೆ. ಮಾರಾಟವಾದ ಶೇ.60ರಷ್ಟು ಭಾಗ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಆ ಪೈಕಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಕಾಯ್ದೆಯ 79ಎ, ಬಿ ಮತ್ತು ಸಿ ಸೆಕ್ಷನ್‌ಗಳನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಡಿಸಿಎಂ ಪರಮೇಶ್ವರ್ ಲಿಖಿತ ಉತ್ತರ ನೀಡಿದ್ದಾರೆ ಎಂದು ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದಾರೆ; ನಾನು ಪಿ ಹೆಚ್ ಡಿ ಮಾಡಿದ್ದೇನೆ: ಕಿಡಿಗೇಡಿಗಳಂತೆ ವರ್ತಿಸುವುದು ಸರಿಯಲ್ಲ: ಬಿ.ಕೆಹರಿಪ್ರಸಾದ್ ವಾಗ್ದಾಳಿ

ಶಿವಮೊಗ್ಗ: 2028ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಭರತ್ ಜೋಡೋ-೨ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿದೆ.

ಕಮಲ ಕೋಟೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಿಂದಲೇ ಭಾರತ್ ಜೋಡೋ-೨ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಸೇವಾದಳದ ಬಾವುಟ ಹಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಮ್ಮ ಬಾವುಟ, ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ. ಕಿಡಿಗೇಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ಎಲ್ ಕೆಜಿಯಲ್ಲಿದ್ದಾರೆ. ನಾನು ಪಿಹೆಚ್ ಡಿ ಮಾಡಿದ್ದೇನೆ. ವಿಜಯೇಂದ್ರ ಬಹಳ ವೀರರು ಶೂರರು ಹಾಗಾಗಿ ನಮ್ಮ ಪಕ್ಷದ ಬಾವುಟ ಹಾರುದು ಹಾಕಿದ್ದಾರೆ. ನಮಗೆ ಕೂತ ಜಾಗದಲ್ಲೇ ಬಾವುಟ ಹಾಅಕಿಸುವ, ಬ್ಯಾನರ್ ಹಾಕಿಸುವ ಶಕ್ತಿ ಇದೆ. ಆದರೆ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಈ ರೀತಿ ಬಾವುಟ, ಬ್ಯಾನರ್ ಹರಿದು ಹಾಕಿ ಕಿಡಿಗೇಡಿಗಳಂತೆ ವರ್ತಿಸಬಾರದು ಎಂದು ವಾಗ್ದಾಳಿ ನಡೆಸಿದರು.

17 ಕೋಟಿ ಆರ್ ಟಿ ಜಿಎಸ್ ಮಾಡಿಸಿಕೊಂಡು ಅಪ್ಪನನ್ನೇ ಜೈಲಿಗೆ ಕಳುಹಿಸಿದವರು. ಭ್ರಷ್ಟಾಚಾರದಲ್ಲಿ ಪ್ರಪಂಚಕ್ಕೆ ಮಾದರಿಯಾದವರು. ಇಂತವರಿಂದ ನಾವು ಕಲಿಯಬೇಕಿಲ್ಲ. ಬಿಜೆಪಿ ಕ್ಷೇತ್ರದಿಂದ ಪಾದಯಾತ್ರೆ ಮಾಡಬಾರದು ಎಂಬುದು ಇಲ್ಲ. ಸಂವಿಧಾನದಲ್ಲಿ ಯಾರು ಎಲ್ಲಿಂದ ಬೇಕಾದರೂ ಪಾದಯಾತ್ರೆ ಮಾಡಬಹುದು ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular