ಕಲಬುರಗಿ: ಕಾರ್ಯಕ್ರಮಗಳಲ್ಲಿ ಮಠಾಧೀಶರಿಗಿಂತ ಕೆಳಗೆ ಮುಖ್ಯಮಂತ್ರಿಯನ್ನು ಕೂರಿಸುವ ಪದ್ಧತಿಯೂ ನಿಲ್ಲಬೇಕು ಎಂದು ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ನಗರದ ಸುಲಫಲ ಮಠದಲ್ಲಿ ನಡೆದ ಶ್ರೀಶೈಲ ಸಾರಂಗಮಠದ ಡಾ. ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರ 12ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ 60ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ಸಾಂವಿಧಾನಿಕ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿಯನ್ನು ವೀರಶೈವ ಲಿಂಗಾಯಿತ ಧರ್ಮ ಸಂರಕ್ಷಣಾ ಸಮ್ಮೇಳನದ ವೇದಿಕೆಯಲ್ಲಿ ಸ್ವಾಮೀಜಿಗಳಿಗಿಂತ ಕಡಿಮೆ ಎತ್ತರದಲ್ಲಿ ಕೂಡಿಸಿರುವುದು ಸರಿಯಲ್ಲ. ಇಂತಹ ಪದ್ಧತಿ ನಿಲ್ಲಬೇಕು. ಮಠಾಧೀಶರಾದವರು ನಾಡಿನ ಮುಖ್ಯಮಂತ್ರಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಮೊದಲು ತಿಳಿಯಬೇಕು ಎಂದು ಹೇಳಿದ್ದಾರೆ.
ಮಠಾಧೀಶರು ಸರ್ಕಾರದ ರಾಯಭಾರಿಗಳಾಗಿ, ಸೇವಕರಾಗಿ ಕೆಲಸ ಮಾಡಿದರೆ ಮಾತ್ರ ಮುಕ್ತಿ ದೊರೆಯುತ್ತದೆ ಎಂಬ ರೀತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ನೋವುಂಟು ಮಾಡಿದೆ ಎಂದು ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಮಠಾಧಿಪತಿಗಳು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದ ಸೇವೆ ಮಾಡಲು ಇರುವವರಲ್ಲ. ಅವರು ಸಮಾಜ ಮತ್ತು ಸಾರ್ವಜನಿಕರ ಸೇವೆ, ಮಾರ್ಗದರ್ಶನಕ್ಕಾಗಿ ಇರುವವರು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಪರವಾಗಿ ಇರಬೇಕು ಎಂಬ ವಿಚಾರದಲ್ಲಿ ತಪ್ಪಿಲ್ಲ. ಆದರೆ ಮಠಾಧೀಶರು ಸರ್ಕಾರದ ರಾಯಭಾರಿಗಳು ಅಥವಾ ಸೇವಕರಾಗಿ ಕಾರ್ಯನಿರ್ವಹಿಸಬೇಕು ಎಂಬ ರೀತಿಯ ಹೇಳಿಕೆ ಸೂಕ್ತವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಠಾಧೀಶರು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದ ಸೇವೆ ಮಾಡಲು ಇರುವವರಲ್ಲ. ಅವರು ಸಮಾಜ ಮತ್ತು ಸಾರ್ವಜನಿಕರ ಸೇವೆ ಹಾಗೂ ಮಾರ್ಗದರ್ಶನಕ್ಕಾಗಿ ಇರುವವರು. ಮುಖ್ಯಮಂತ್ರಿಯಾದವರು ಸಂಯಮ ಹಾಗೂ ಔಚಿತ್ಯದ ಎಲ್ಲೆಯನ್ನು ಮೀರಿ ಮಾತನಾಡಬಾರದು. ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ಸಮಭಾವದಿಂದ ಕಾಣುವ ಸಂಪ್ರದಾಯ ಬೆಳೆಸಬೇಕು ಎಂದರು.
ಹಿಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರಿಂದ ಗುರುವೃಂದವನ್ನು ಲಘುವಾಗಿ ಮಾತನಾಡುವ ಇಂತಹ ಹೇಳಿಕೆಗಳನ್ನು ಕೇಳಿಲ್ಲ. ಮುಖ್ಯಮಂತ್ರಿ ಹಿರಿಯರನ್ನು ನೋಡಿ ಕಲಿಯಬೇಕು ಎಂದು ನಿಡುಮಾಮಿಡಿ ಶ್ರೀ ಹೇಳಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ
ಬೆಂಗಳೂರು: ಪೌರಾಡಳಿತ ನಿರ್ದೇಶನಾಲಯ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ – ಸಿ (ನೀರು ಸರಬರಾಜು ಆಪರೇಟರ್, ಸಹಾಯಕ ನೀರು ಸರಬರಾಜು ಆಪರೇಟರ್, ಎಲೆಕ್ಟ್ರೀಷಿಯನ್ ಗ್ರೇಡ್- l) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಶುಲ್ಕ ಪಾವತಿಗೆ ಅ.8ರವರೆಗೆ ಸಮಯ ನೀಡಲಾಗಿದೆ. ಅಭ್ಯರ್ಥಿಗಳು ಇದರ ಉಪಯೋಗ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಯಶಸ್ವಿಯಾಗಿ ನಡೆದ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಪರೀಕ್ಷೆ
ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.
ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ- ಪತ್ರಿಕೆ- 1ರ ಪರೀಕ್ಷೆ ನಡೆಯಿತು.
ಒಟ್ಟು 4,487 ಅಭ್ಯರ್ಥಿಗಳ ಪೈಕಿ 3,679 ( 82%) ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
#KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಕಮಾಂಡ್ ಸೆಂಟರ್ ನಲ್ಲಿ ಖುದ್ದು ಇದ್ದು ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು.
ಸೆ.30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ.
ನರ್ಸಿಂಗ್ ಕೋರ್ಸ್ ಪ್ರವೇಶ
PB.BSc, #Nursing/BSc-AHS (Lateral Entry): ಈ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅ.4ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೇ ಶುಲ್ಕ ಪಾವತಿಸಬೇಕು. ಇದುವರೆಗೂ ಅರ್ಜಿ ಸಲ್ಲಿಸದೇ ಇರುವವರು ಇದರ ಉಪಯೋಗ ಪಡೆದುಕೊಳ್ಳಬಹುದು.

