HomeKarnatakaಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಪಾರದರ್ಶಕತೆ, ಬಿಗಿ ಭದ್ರತೆಯೊಂದಿಗೆ ಎಕ್ಸಾಂ ನಡೆಸಲು ಕಟ್ಟುನಿಟ್ಟಿನ ಸೂಚನೆ

ಕಂದಾಯ ಇಲಾಖೆ ನೇಮಕಾತಿ ಪರೀಕ್ಷೆ: ಪಾರದರ್ಶಕತೆ, ಬಿಗಿ ಭದ್ರತೆಯೊಂದಿಗೆ ಎಕ್ಸಾಂ ನಡೆಸಲು ಕಟ್ಟುನಿಟ್ಟಿನ ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವತಿಯಿಂದ ಅಕ್ಟೋಬರ್ 2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಹಾಗೂ ಅಕ್ಟೋಬರ್ 4 ರಂದು ನಡೆಸುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕ, ಸೂಕ್ಷ್ಮ ಹಾಗೂ ಬಿಗಿ ಭದ್ರತೆಯೊಂದಿಗೆ ನಡೆಸಲು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು  ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅವರು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭೂಮಾಪಕರ ಹುದ್ದೆ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಗಳ ನೇಮಕಾತಿ ಪರೀಕ್ಷೆ ಕುರಿತಂತೆ ನಡೆಸಿದ ಪೂರ್ವಭಾವಿ  ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಟೋಬರ್ 2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯು  ನಗರದ 6 ಕೇಂದ್ರಗಳಲ್ಲಿ ನಡೆಯಲಿದೆ 3773 ಅಭ್ಯರ್ಥಿಗಳು  ಪರೀಕ್ಷೆಯನ್ನು ಬರೆಯುವರು,  ಹಾಗೂ ಅಕ್ಟೋಬರ್ 4 ರಂದು ನಡೆಸುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಗಳ ನೇರ ನೇಮಕಾತಿ ಪರೀಕ್ಷೆಯು 22 ದಾವಣಗೆರೆ ಕೇಂದ್ರಗಳಲ್ಲಿ ಹಾಗೂ 2 ಹರಿಹರ ಕೇಂದ್ರಗಳಲ್ಲಿ   13344 ಅಭ್ಯರ್ಥಿಗಳು  ಪರೀಕ್ಷೆಯನ್ನು ಬರೆಯುವರು ಎರಡು ಪರೀಕ್ಷೆಯು 2 ಅವಧಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಟ್ಟುನಿಟ್ಟಿನ ತಪಾಸಣೆ (Frisking) ನಡೆಸಬೇಕು. ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಸಂಪೂರ್ಣ ತಡೆ ಒಡ್ಡಬೇಕು. ಅಭ್ಯರ್ಥಿಗಳನ್ನು ತಪಾಸಣೆ ಮಾಡುವಾಗ ಜನಿವಾರ, ಶಿವಲಿಂಗ, ತಾಳಿ ಮುಂತಾದ ಧಾರ್ಮಿಕ ಸಂಕೇತಗಳ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಗೌರವಯುತವಾಗಿ ತಪಾಸಣೆ ನಡೆಸಬೇಕು ಎಂದರು.

ಪರೀಕ್ಷೆಯ ಹಿಂದಿನ ದಿನವೇ ಪರೀಕ್ಷಾ ಕೊಠಡಿಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಗೋಡೆ ಗಡಿಯಾರಗಳನ್ನು ಪರಿಶೀಲಿಸಬೇಕು. ಕೊಠಡಿಗಳನ್ನು ಸರಿಯಾಗಿ ಸೀಲ್ ಮಾಡಿ, ಕೀಲಿ ಕೈಗಳನ್ನು ಜವಾಬ್ದಾರಿಯುತ ಅಧಿಕಾರಿಗಳ ವಶದಲ್ಲೇ ಇಟ್ಟುಕೊಳ್ಳಬೇಕು ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಪರೀಕ್ಷಾರ್ಥಿಗಳ ತಪಾಸಣೆ ವೇಳೆಯಲ್ಲಿ ವಿನಾಕಾರಣ ವಿಳಂಬ ಮಾಡದೆ, ಸಮಯಪ್ರಜ್ಞೆ ಹಾಗೂ ಸೌಜನ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ನಿಷೇದಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೊಠಡಿ ಮೇಲ್ವಿಚಾರಕರು  ಎಲ್ಲ ಮಾರ್ಗಸೂಚಿಗಳನ್ನು ಅರಿತು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.ಪರೀಕ್ಷೆ ಗಳಲ್ಲಿ ಕೈಗಡಿಯಾರ, ಕ್ಯಾಲ್ಕುಲೇಟರ್, ಬ್ಲುಟೂಥ್ ಡಿವೈಸ್, ಮೋಬೈಲ್, ಇಯರ್ ಫೋನ್,ಮೈಕ್ರೋಫೋನ್ ಸಾಧನಗಳನ್ನು ಬಳಸುವುದಕ್ಕೆ ನಿಷೇಧವಿದೆ  ಈ ಕುರಿತು ತೀವ್ರ ನಿಗಾ ಇಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭೂಮಾಪಕರ ಹುದ್ದೆ- ಪರೀಕ್ಷಾ ಕೇಂದ್ರಗಳು (6-ದಾವಣಗೆರೆ ) : 1. ಎ. ವಿ. ಕಮಲಮ್ಮ ಪದವಿ ಪೂರ್ವ ಕಾಲೇಜು , ಅಕ್ಕಮಹಾದೇವಿ ರಸ್ತೆ, ಪಿ. ಜೆ. ಬಡಾವಣೆ 2. ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ 3. ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ 4. ಸರ್ಕಾರಿ ಗಂಡುಮಕ್ಕಳ ಪದವಿ ಪೂರ್ವ ಕಾಲೇಜು, ಪಿ. ಜೆ. ಬಡಾವಣೆ, ರೈಲ್ವೆ ನಿಲ್ದಾಣದ ಹತ್ತಿರ 5. ಡಾ. ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜು, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗ, ಎಂ.ಬಿ.ಎ. ಮೈದಾನ, ಎಸ್. ಎಸ್. ಬಡಾವಣೆ ಹಾಗೂ 6. ಸರ್ಕಾರಿ ಎಕ್ಸ್ ಮುನಿಸಿಪಲ್ ಪದವಿ ಪೂರ್ವ ಕಾಲೇಜು, ಕೆ. ಆರ್‌. ರಸ್ತೆ, ಸಿ. ಎಸ್. ಐ. ಜಿಯಾನ್ ಚರ್ಚ್.

ಗ್ರಾಮ ಆಡಳಿತ ಅಧಿಕಾರಿ – 24 ಪರೀಕ್ಷಾ ಕೇಂದ್ರಗಳು (22-ದಾವಣಗೆರೆ, 2-ಹರಿಹರ) : 1. ದಾವಣಗೆರೆಯ ಹಡಡಿ ಮುಖ್ಯ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಡಿ.ಆರ್.ಎಂ. ವಿಜ್ಞಾನ ಪದವಿ ಪೂರ್ವ ಕಾಲೇಜು, 2.  ಪಿ. ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿರುವ ಎ. ವಿ. ಕಮಲಮ್ಮ ಪದವಿ ಪೂರ್ವ ಕಾಲೇಜು, 3. ಪಿ. ಜೆ. ಬಡಾವಣೆಯಲ್ಲಿರುವ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, 4. ಕೆ.ಆರ್. ರಸ್ತೆಯ ಸಿ.ಎಸ್.ಐ. ಜಿಯಾನ್ ಚರ್ಚ್ ಹತ್ತಿರವಿರುವ ಸರ್ಕಾರಿ ಎಕ್ಸ್ ಮುನಿಸಿಪಲ್ ಪದವಿ ಪೂರ್ವ ಕಾಲೇಜು, 5. ಪಿ. ಜೆ. ಬಡಾವಣೆಯಲ್ಲಿರುವ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು, 6. ಪಿ. ಜೆ. ಬಡಾವಣೆಯಲ್ಲೇ ಇರುವ ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು. 7. ನಿಜಲಿಂಗಪ್ಪ ಬಡಾವಣೆಯ ಶ್ರೀ ಗುರುಬಕ್ಕೇಶ್ವರ ಛತ್ರದ ಬಳಿಯಿರುವ ಎಸ್.ಎಲ್. ಪದವಿ ಪೂರ್ವ ಕಾಲೇಜು, 8. ಹಡಡಿ ವಿದ್ಯಾನಗರ ರಸ್ತೆಯ ಅನುಭವ ಮಂಟಪದ ಹತ್ತಿರದ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, 9. ಪಿ. ಜೆ. ಬಡಾವಣೆಯ ಸಾಯಿ ರಾಮ ಪಾರ್ಕ್ ಹತ್ತಿರದ 2ನೇ ಮುಖ್ಯ ರಸ್ತೆ, 2ನೇ ಕ್ರಾಸ್‌ನಲ್ಲಿರುವ ಎಸ್.ಎ.ಜಿ.ಬಿ. ಸಂಯುಕ್ತ ಪದವಿ ಪೂರ್ವ ಕಾಲೇಜು, 10. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, 11. ವಿಶ್ವವಿದ್ಯಾನಿಲಯದ ಪಕ್ಕದ ತೊಳಹುಣಸೆ ಶಿವಗಂಗೋತ್ರಿಯಲ್ಲಿರುವ ಬಾಪೂಜಿ ಎಸ್‌ಪಿಎಸ್ಎಸ್ ಪದವಿ ಪೂರ್ವ ಕಾಲೇಜು, 12. ಪಿ. ಜೆ. ಬಡಾವಣೆಯ ರೈಲ್ವೆ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳು 13. ವಿದ್ಯಾನಗರದ ಈಶ್ವರ ಪಾರ್ವತಿ ದೇವಾಲಯದ ಎದುರಿಗಿರುವ ಮಗನೂರು ಬಸಪ್ಪ ಪದವಿ ಪೂರ್ವ ಕಾಲೇಜು, 14. ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಸೆಂಟ್ ಜಾನ್ಸ್ ವಿಜ್ಞಾನ ಪದವಿ ಪೂರ್ವ ಕಾಲೇಜು, 15. ಸಿದ್ಧಲಿಂಗೇಶ್ವರ ನಗರದ ಡಂಗಿ ಪಾರ್ಕ್ ಹತ್ತಿರವಿರುವ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು, 16. ಎಸ್. ನಿಜಲಿಂಗಪ್ಪ ಬಡಾವಣೆಯ ಅಮೃತ ಪದವಿ ಪೂರ್ವ ಕಾಲೇಜು, 17. ಎಸ್. ಎಸ್. ಬಡಾವಣೆಯ ಎಂ.ಬಿ.ಎ. ಮೈದಾನದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದಲ್ಲಿರುವ ಡಾ. ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜು. 18. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಎಸ್. ಬಿ. ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು, 19. ಎಂ.ಸಿ.ಸಿ. ‘ಬಿ’ ಬ್ಲಾಕ್‌ನ ಯು.ಬಿ.ಡಿ.ಟಿ. ಬಾಲಕರ ವಸತಿನಿಲಯದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, 20. ಎಸ್. ಎಸ್. ಬಡಾವಣೆ ‘ಎ’ ಬ್ಲಾಕ್‌ನ ಒಳಾಂಗಣ ಕ್ರೀಡಾಂಗಣದ ಹತ್ತಿರವಿರುವ ಬಿ. ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು,21. ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (BIET), 22. ಬಾಡ ಕ್ರಾಸ್‌ನ ವೀರೇಶ್ವರ ಪುಣ್ಯಾಶ್ರಮದ ಹತ್ತಿರವಿರುವ ಜೈನ್ ಪಾಲಿಟೆಕ್ನಿಕ್ ಕಾಲೇಜು 23. ಹರಿಹರ ತಾಲೂಕಿನಲ್ಲಿ, ವಾಗೀಶ ನಗರದಲ್ಲಿರುವ ಎಸ್.ಜೆ.ವಿ.ಪಿ. ಪದವಿ ಪೂರ್ವ ಕಾಲೇಜು ಹಾಗೂ 24. ಹರಿಹರ ,ಜೆ. ಸಿ. ಬಡಾವಣೆಯ ನೀರಿನ ಟ್ಯಾಂಕ್ ಹತ್ತಿರವಿರುವ ಡಿ.ಆರ್.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಡಿಡಿಪಿಯು ಪಳನಿಸ್ವಾಮಿ ಬಿಸಿಎಂ ಅಧಿಕಾರಿ ರೇಣುಕಮ್ಮ, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ , ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್‌ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ  ನವೀನ್‌ ಮಠದ್‌ ಹಾಗೂ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಸಿಬ್ಬಂದಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular