ಚೆನ್ನೈ: ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಪ್ರಶಾಂತ್ ಬಳಿಕ ಮತ್ತೊಬ್ಬ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸಿದ್ದಾರೆ.
ಬಾಲಸುಬ್ರಮಣಿಯನ್ ಬಂಧಿತ ಆರೋಪಿ. ಚೆನ್ನೈನಲ್ಲಿ ಬಾಲಸುಬ್ರಮಣಿಯನ್ ನನ್ನು ತನಿಖಾಧಿಕಾರಿ ಅಂಜನ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.ಬಾಲಸುಬ್ರಮಣಿಯನ್ ಪ್ರಶಾಂತ್‌ನ ನಕಲಿ ಕಂಪನಿಗೆ ಮಾಲೀಕನಾಗಿದ್ದ ಎಂದು ತಿಳಿದುಬಂದಿದೆ.
ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ನಕಲಿ ಔಷಧ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತನಾಗಿದ್ದ ವೀರೇಶ್ ಜೈನ್ ನೀಡಿದ ಮಾಹಿತಿ ಆಧಾರದ ಮೇಲೆ ಕಿಂಗ್‌ಪಿನ್ ಪ್ರಶಾಂತ್ ನ ಬಂಧನವಾಗಿತ್ತು.
ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಿಂಗ್ ಪಿನ್ ಪ್ರಶಾಂತ್‌ನನ್ನ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ನಕಲಿ ಔಷಧ ಜಾಲ ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿದ್ದವು. ವಿದೇಶದಿಂದ ವಾಪಸ್ ಬಂದ ಸಂದರ್ಭದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ.
ಮಟನ್ ಶಾಪ್ ನಲ್ಲಿ ಡ್ರಗ್ಸ್ ಡೀಲಿಂಗ್: ಇಬ್ಬರು ಅರೆಸ್ಟ್
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮಟನ್ ಶಾಪ್‌ವೊಂದರಲ್ಲಿ ಡ್ರಗ್ಸ್ ಡೀಲಿಂಗ್ ನಡೆಯುತ್ತಿದ್ದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಡ್ರಗ್ಸ್ ಡೀಲಿಂಗ್ ಹಾಗೂ ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮಟನ್ ಶಾಪ್ ವೊಂದರಲ್ಲಿ ಅಕ್ರಮವಾಗಿ ಡ್ರಗ್ಸ್ ದಂಧೆ ನಡೆಯುತ್ತಿತ್ತು. ಎಂಡಿಎಂಎ ಮಾದಕ ವಸ್ತುವಿನ ಮಾರಾಟ ಮಾಡುತ್ತಿದ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ.
ಜುನೈದ್ ಪಾಷಾ ಮತ್ತು ರಿಜ್ವಾನ್ ಬೇಗ್ ಬಂಧಿತ ಆರೋಪಿಗಳು. ಪೊಲೀಸರ ತನಿಖೆಯ ಪ್ರಕಾರ, ಈ ಆರೋಪಿಗಳು ನೈಜೀರಿಯಾ ಪ್ರಜೆಯೊಬ್ಬರಿಂದ ಡ್ರಗ್ಸ್ ಅನ್ನು ತರಿಸಿಕೊಂಡು ಮಟನ್ ಶಾಪ್ ಅನ್ನು ಮಾರಾಟದ ತಾಣವನ್ನಾಗಿ ಮಾಡಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವಿದ್ಯಾರಣ್ಯಪುರ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 10 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ 106 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ, ಎರಡು ಮೊಬೈಲ್ ಫೋನ್‌ಗಳು, 2,590 ರೂಪಾಯಿ ನಗದು ಮತ್ತು ಒಂದು ದ್ವಿಚಕ್ರ ವಾಹನವನ್ನು ಸಹ ಜಪ್ತಿ ಮಾಡಲಾಗಿದೆ.
ಡ್ರಗ್ಸ್ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆ, ಸಣ್ಣ ಅಂಗಡಿಗಳನ್ನೂ ಸಹ ಮಾದಕ ವಸ್ತು ಮಾರಾಟಕ್ಕೆ ಬಳಸಿಕೊಳ್ಳುತ್ತಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಆತಂಕ ಮೂಡಿಸಿದೆ.

