HomeKarnatakaರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮಾಫಿಸಾಕ್ಷಿ ಪ್ರದೋಷ್ ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್​​

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮಾಫಿಸಾಕ್ಷಿ ಪ್ರದೋಷ್ ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್​​

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿ ಬದಲಾಗಿರುವ 14ನೇ ಆರೋಪಿ ಪ್ರದೋಷ್ ಇಂದು ಕೂಡ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

59ನೇ ಸಿಸಿಹೆಚ್‌ ಕೋರ್ಟ್​ ನಲ್ಲಿ ನ್ಯಾಯಾಧೀಶೆ ಸುಜಾತಾ ಸಾಬ್ರಾಣಿ ಅವರ ಸಮ್ಮುಖದಲ್ಲಿ ಪ್ರದೋಷ್ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಕುರಿತು ಹೇಳಿಕೆಗಳನ್ನು ದಾಖಲಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ನ್ಯಾಯಾಲಯ ಮಾಫಿಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು ನಾಳೆಗೆ ಮುಂದೂಡಿದೆ. ನಿನ್ನೆ ಸೆ.28ರಂದು ಕೂಡ ಪ್ರದೋಷ್ ಕಡೆಯಿಂದ ಒಂದಿಷ್ಟು ಹೇಳಿಕೆ ದಾಖಲಿಸಿಕೊಂಡಿತ್ತು. ಇಂದು ಸಹ ಪ್ರದೂಷ್ ಹೇಳಿಕೆ ದಾಖಲಿಸಿಕೊಂಡು ಮತ್ತಷ್ಟು ವಿಚಾರಣೆಯನ್ನು ಕೋರ್ಟ್​ ನಾಳೆಗೆ ಸೆ.30ಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಅಮಾನವೀಯವಾಗಿ ವರ್ತಿಸಿದ್ದ ದರ್ಶನ್: ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರದೋಷ್

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದಲ್ಲಿ ಕೊಲೆ ನಡೆದ ಸಂದ್ರಭದ ಬಗ್ಗೆ ಹಾಗೂ ನಟ ದರ್ಶನ್ ಅಟ್ಟಹಾಸದ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಬೆಂಗಳೂರಿನ 59ನೇ ಸೆಷನ್ಸ್‌ ನ್ಯಾಯಾಲಯದ ಮುಂದೆ ಸಾಕ್ಷಿ ದಾಖಲಿಸಿದ್ದಾರೆ. ಪ್ರದೋಶ್ ಅವರ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ಇನ್ನಿಲ್ಲದ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಿಲ್ಲ, (ಸೆಪ್ಟೆಂಬರ್ 28ರಂದು ನ್ಯಾಯಾಲಯದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಪ್ರದೋಷ್ ಸಾಕ್ಷ್ಯ ನುಡಿದಿದ್ದು, ಪ್ರಕರಣದ ಭೀಕರತೆಯನ್ನು ವಿವರಿಸಿದ್ದಾರೆ.

ರೇಣುಕಾಸ್ವಾಮಿ ವಿಚಾರವಾಗಿ ದರ್ಶನ್ ಹೇಗೆಲ್ಲ ನಡೆದುಕೊಂಡರು.ಹೇಗೆ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಅಟ್ಟಹಾಸ ಮೆರೆದರು ಎಂಬುದನ್ನು ಸಹ ವಿವರಿಸಿದ್ದಾರೆ.

ಆರ್​​ಆರ್​​ ನಗರದ ಸ್ಟೋನಿ ಬ್ರೂಕ್‌ನಲ್ಲಿ ಪ್ರದೋಶ್, ವಿನಯ್, ದರ್ಶನ್, ಚಿಕ್ಕಣ್ಣ ಇನ್ನಿತರರ ನಡುವೆ ನಡೆದ ಸಭೆಯಿಂದ ಆರಂಭಗೊಂಡು, ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳ ವರೆಗೆ ಅಂದು ನಡೆದ ಪ್ರತಿಯೊಂದು ಕೃತ್ಯವನ್ನು ಪ್ರದೋಷ್ ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಶೇಷವಾಗಿ ದರ್ಶನ್ ಹಾಗೂ ಇನ್ನೂ ಕೆಲವರು ರೇಣುಕಾಸ್ವಾಮಿ ಮೇಲೆ ಎಸಗಿದ ಅಮಾನವೀಯ ಹಲ್ಲೆ, ರೇಣುಕಾಸ್ವಾಮಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಮಾಡಿದ ಸಂದೇಶದಿಂದಾಗಿ ಸಿಟ್ಟಿನಲ್ಲಿದ್ದ ದರ್ಶನ್, ಪಟ್ಟಣಗೆರೆ ಶೆಡ್​​​ನಲ್ಲಿ ಹಲವಾರು ಬಾರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರದೋಷ್ ಹೇಳಿದ್ದಾರೆ. ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ಕೆನ್ನೆಗೆ ಹೊಡೆದ ವಿಷಯ. ರೇಣುಕಾಸ್ವಾಮಿ ಪವಿತ್ರಾ ಗೌಡ ಮತ್ತು ದರ್ಶನ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಷಯಗಳನ್ನು ಅಂದು ನಡೆದಂತೆ ಎಲವನ್ನೂ ನ್ಯಾಯಾಲಯದ ಮುಂದೆ ಪ್ರದೋಶ್ ವಿವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular