ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಬಿಟ್ಟು ಆಚೆ ಬರ್ತಿಲ್ಲ; ಆರ್.ಎಸ್.ಎಸ್ ಮುಗಿಸಲು ಅವರ ಅಪ್ಪನಿಂದಲೂ ಸಾಧ್ಯವಿಲ್ಲ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಬಿಟ್ಟು ಆಚೆ ಬರುತ್ತಿಲ್ಲ. ಬರೀ ಆರ್ಎಸ್ಎಸ್ ಬಗ್ಗೆ ಬೈಯ್ಯುವುದು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಗೃಹ ಸಚಿವನಂತೆ ನಡೆದುಕೊಳ್ಳುತ್ತಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಗೃಹ ಸಚಿವತ್ರು ಆರ್.ಎಸ್.ಎಸ್ ಚಡ್ಡಿ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ, ನಿಮ್ದು ನೋಡ್ಕೊಳ್ಳಿ ಎಂದು ಕಿಡಿಕರೈದರು.
ಆರ್.ಎಸ್.ಎಸ್ ನವರು ಯಾರನ್ನಾದ್ದರೂ ಥಳಿಸಲಿಕ್ಕೆ ಲಾಠಿ ಬಳಸಿದ್ದಾರಾ? ಆರ್.ಎಸ್.ಎಸ್ ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ. ಆರ್.ಎಸ್.ಎಸ್ ಮೇಲೆ ಕ್ರಿಮಿನಲ್ ಕೇಸ್ ಇಲ್ಲ ಅಂತ ನೀವೇ ಹೇಳಿದ್ದೀರಿ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನೀವೆಲ್ಲೂ ಮಾತಾಡಿಲ್ಲ. ಆದರೆ ರಾಜ್ಯದ ಗೃಹ ಸಚಿವರಿಗೆ ಬರೀ ಆರ್.ಎಸ್.ಎಸ್ ಚಿಂತೆ ಎಂದರು.
ದಲಿತರ ಉದ್ಧಾರದ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರ ಹೆಸರು ಬಳಸಿಕೊಂಡು ಆಸ್ತಿ ಮಾಡಿದ್ದಾರೆ ಅಷ್ಟೇ. ಗೃಹ ಸಚಿವರ ಭಾಗದಲ್ಲೇ 13 ಅಟ್ರಾಸಿಟಿ ಕೇಸ್ ದಾಖಲಾಗಿವೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇವ್ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್ಮೆಂಟ್ ಕೊಟ್ಟಿಲ್ಲ. ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿದರುರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.
ಸೋಲಿನ ಭಯದಿಂದ ಲೂಟಿ ಮಾಡುವುದಕ್ಕೆ ಕಾಂಗ್ರೆಸ್ ಇಳಿದಿದ್ದು, ಈ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. SCSP-TSP ಹಣ ದುರ್ಬಳಕೆ ಮಾಡಲಾಗಿದೆ ಎಂದವರು ದೂರಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ವಿಚಾರ ಸಂಬಂಧವಾಗಿಯೂ ಪ್ರತಿಕ್ರಿಯಿಸಿದ ಅವರು, ಎಸ್ಐಆರ್ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಟ್ಟಿದ್ದಲ್ಲ. ಅದು ಚುನಾವಣಾ ಆಯೋಗದ ಕೆಲಸ. ಹೀಗಿದ್ದರೂ SIR ವಿಚಾರವಾಗಿ ಕಾಂಗ್ರೆಸ್ ಸಮಸ್ಯೆ ಉಂಟು ಮಾಡಲು ಹೊರಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ SIR ನಡೆದಿದೆ, ಆಗ ವಿವಾದ ಆಗಿರಲಿಲ್ಲ ಎಂದವರು ಹೇಳಿದ್ದಾರೆ. ಪ್ರಧಾನಿ ಆಗಬೇಕು ಅಂತಾ ರಾಹುಲ್ ಗಾಂಧಿ ಅಭಿಜಿತ್ ದಿಪ್ಕೆ ಫಾಲೋವರ್ ಆಗಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದವರನ್ನು ನಾವು ಹಾಗೆ ಬಿಡಬೇಕಾ? ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗದ ಕಡೆ ವೋಟ್ ಚೋರಿ ಅಂತಾರೆ. ಮತ ಕಳ್ಳತನ ಆಗ್ತಿಲ್ಲ, ಆಗೋದು ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

