ಗದಗ: ಸರ್ಕಾರದಿಂದ ಅನುದಾನ ಬಂದಿಲ್ಲ ಗುತ್ತಿಗೆದಾರರು ಕಿರುಕುಳ ಕೊಡುತ್ತಿದ್ದಾರೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಇಲಾಖೆ ಎಇಇ ಪತ್ತೆಗಾಗಿ ಗದಗ ಎಸ್ ಪಿ ಮಿಥುನ್ ಎಚ್.ಎನ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ 5 ತಂಡ ರಚನೆಯಾಅಗಿದೆ.
ಎಇಇ ಫರ್ವೇಜ್ ಧಾರವಾಡ ಅವರು ಪತ್ರ ಬರೆದಿಟ್ಟು ಸೆಪ್ಟೆಂಬರ್ 13ರಿಂದ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ರಾಜ್ಯ ಮಾತ್ರವಲ್ಲ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಯುತ್ತಿದೆ. ಅಧಿಕಾರಿ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ಐದು ತಂಡ ರಚಿಸಲಾಗಿದೆ.
ಎಇಇಯೊಬ್ಬರು ಸರ್ಕಾರದಿಂದ ಅನುದಾನ ಬಂದಿಲ್ಲ ಗುತ್ತಿಗೆದಾರರು ಕಿರುಕುಳ ಕೊಡ್ತಿದ್ದಾರೆ ಎಂದು ನೊಂದು ಇಲಾಖೆ ಎಂಡಿಗೆ ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗುತ್ತಿದೆ. ಸೆ.13ರಂದು ಬೆಂಗಳೂರು ಇಲಾಖೆ ಮೀಟಿಂಗ್ ಹೋಗುವುದಾಗಿ ಮನೆಯಿಂದ ಹೋಗಿದ್ದಾರೆ. ಬಳಿಕ ಫೋನ್ ಸ್ವಿಚ್ ಆಫ್ ಆಗಿದ್ದು, ಮರಳಿ ಬಾರದಿದ್ದಕ್ಕೆ ಕಳೆದ 16ರಂದು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಗದಗದಿಂದ ಬೆಂಗಳೂರಿಗೆ ಬಂದಿದ್ದ ಫರ್ವೇಜ್ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡದತ್ತ ತೆರಳಿದ್ದಾರೆ ಎಂಬ ಮಾಅಹಿತಿ ಲಭ್ಯವಾಗಿದೆ. ಕಾರಣ ಅವರ ಫೋನ್ ಕೊನೆಯ ಲೊಕೇಷನ್ ವಿಜಯವಾಡ ಎಂದು ಗೊತ್ತಾಗಿದೆ.
ಫರ್ವೇಜ್ ಮನೆಯಿಂದ ಹೋಗುವಾಗ 40 ಸಾವಿರ ನಗದು ಹಣ ತೆಗೆದುಕೊಂಡು ಹೋಗಿದ್ದಾಅರೆ. ಈವರೆಗೆ ಫರ್ವೇಜ್ ಎಟಿಎಂ ಕಾರ್ಡ್, ಮೊಬೈಲ್ ಎಲ್ಲೂ ಬಳಕೆ ಮಾಡಿಲ್ಲ. ಟೆಕ್ನಿಕಲ್ ಸುಳಿವಿನಿಂದ ಗದಗ ಪೊಲೀಸರು ಆಂಧ್ರದತ್ತ ಪತ್ತೆ ಕಾರ್ಯಕ್ಕೆ ಹೋಗಿದ್ದಾರೆ. ಎಸ್ಪಿ ಮಿಥುನ್ ಎಚ್.ಎನ್ ಮಾರ್ಗದರ್ಶನ, ಡಿವೈಎಸ್ಪಿ ಮೇಲ್ವಿಚಾರಣೆಯಲ್ಲಿ ಅಧಿಕಾರಿ ಪತ್ತೆಗಾಗಿ 5 ತಂಡಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈ ನಡುವೆ ಎಇಇ ಫರ್ವೇಜ್ ಈ ಹಿಂದೆಯೂ ಇದೇ ರೀತಿ ನಾಪತ್ತೆಯಾಅಗಿದ್ದರು. ಬಳಿಕ ಅವರಾಗಿಯೇ ಮನೆಗೆ ವಾಅಪಸ್ ಆಗಿದ್ದರು ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
2024 ಫೆಬ್ರವರಿನಲ್ಲೂ ಅಧಿಕಾರಿ ಫರ್ವೇಜ್ ಎಸ್ಕೇಪ್ ಆಗಿದ್ದರು. ಆಗ ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳ ಎಂದು ಆರೋಪಿಸಿ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ರಾಜಸ್ಥಾನದ ಅಜ್ಮಿರ್‌ನಲ್ಲಿ ಅವರು ಪತ್ತೆಯಾಗಿದ್ದರು. ಈಗ 2ನೇ ಬಾರಿ ನಾಪತ್ತೆಯಾಗಿದ್ದಾರೆ.

