HomeKarnatakaಎಐ ಕ್ಯಾಮೆರಾ ಎಡವಟ್ಟು: ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಪಾವತಿಸಲು ಸೂಚನೆ: ಸಂದೇಶ...

ಎಐ ಕ್ಯಾಮೆರಾ ಎಡವಟ್ಟು: ಗಿಟಾರ್ ಗೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಪಾವತಿಸಲು ಸೂಚನೆ: ಸಂದೇಶ ನೋಡಿ ಶಾಕ್ ಆದ ಬೈಕ್ ಸವಾರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮ ನಿರ್ವಹಣೆಯ ಎಐ ಕ್ಯಾಮೆರಾ ಮಾಡಿರುವ ಎಡವಟ್ಟಿನಿಂದಾಗಿ ಬೈಕ್ ಸವಾರನೊಬ್ಬ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

ಕೃತಕ ಬುದ್ಧಿಮತ್ತೆ (ಎಐ) ಮಾಡುವ ಯಡವಟ್ಟುಗಳು ಒಮ್ಮೊಮ್ಮೆ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಬೆಂಗಳೂರಿನಲ್ಲಿ ಇಂತದ್ದೇ ಒಂದು ವಿಚಿತ್ರ ಘಟನೆ ನಡೆದಿದೆ. ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡು ಸ್ಕೂಟರ್ ಚಲಾಯಿಸುತ್ತಿದ್ದ ಸವಾರನಿಗೆ ಎಐ ಕ್ಯಾಮೆರಾ 500 ರೂ. ದಂಡ ವಿಧಿಸಿದೆ! ಮೊಬೈಲ್ ಗೆ ಬಂದ ಸಂದೇಶ ನೋಡಿ ಬೈಕ್ ಸವಾರ ಶಾಕ್ ಆಗಿದ್ದಾನೆ.

ಗಿಟಾರ್ ಬ್ಯಾಗ್ ಅನ್ನು ‘ಹಿಂಬದಿ ಸವಾರ’ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ, ಆ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಚಲನ್ ಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಕೂಟರ್ ಸವಾರ ಸೌವಿಕ್ ದತ್ತಾ ಎಂಬುವವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ತಮ್ಮ ಹೆಂಡತಿಯ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡಿದ್ದರು. ಔಟರ್ ರಿಂಗ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಎಐ ಆಧಾರಿತ ಟ್ರಾಫಿಕ್ ಕ್ಯಾಮೆರಾ, ಗಿಟಾರ್ ಬ್ಯಾಗ್ ಅನ್ನು ಮನುಷ್ಯನೆಂದು ಭಾವಿಸಿ ಹೆಲ್ಮೆಟ್ ರಹಿತ ಪ್ರಯಾಣದ ವಿಭಾಗದಡಿ ಫೈನ್ ಹಾಕಿದೆ. ಮರುದಿನ ಸೌವಿಕ್ ಅವರ ಪತ್ನಿಯ ಮೊಬೈಲ್‌ಗೆ ಬಂದ ದಂಡದ ಮೆಸೇಜ್ ಮತ್ತು ಫೋಟೋ ನೋಡಿ ದಂಪತಿ ಬೆಚ್ಚಿಬಿದ್ದಿದ್ದಾರೆ.

ತಮಗೆ ವಿಧಿಸಲಾದ ತಪ್ಪು ಚಲನ್ ಮತ್ತು ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಸೌವಿಕ್ ದತ್ತಾ, “ನಾನು ಒಬ್ಬನೇ ಗಿಟಾರ್ ಬೆನ್ನಿಗೆ ಹಾಕಿ ಸ್ಕೂಟರ್ ಚಲಾಯಿಸುತ್ತಿದ್ದೆ. ಆದರೆ ಬೆಂಗಳೂರು ಸಂಚಾರ ಪೊಲೀಸರಿಂದ ‘ಹಿಂಬದಿ ಸವಾರ ಹೆಲ್ಮೆಟ್ ಹಾಕಿಲ್ಲ’ ಎಂದು 500 ರೂ. ದಂಡ ಬಂದಿದೆ. ಎಐ ಟ್ರಾಫಿಕ್ ಸಿಸ್ಟಮ್‌ ನೈಜತೆ ಇಲ್ಲಿದೆ!” ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ಘಟನೆ ವೈರಲ್ ಆಗುತ್ತಿದ್ದಂತೆ ಸ್ಪಂದಿಸಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಪ್ರಕರಣವನ್ನು ಪರಿಶೀಲಿಸಿ ತಪ್ಪು ಚಲನ್ ಆಗಿದ್ದರೆ ತಕ್ಷಣವೇ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. 2022ರಿಂದ ನಗರದಲ್ಲಿ ಜಾರಿಯಲ್ಲಿರುವ ಎಐ ಕ್ಯಾಮೆರಾಗಳು ಕೆಲವೊಮ್ಮೆ ಇಂತಹ ತಾಂತ್ರಿಕ ದೋಷಗಳನ್ನು ಮಾಡುತ್ತವೆ. ಸಾರ್ವಜನಿಕರು ದೂರು ನೀಡಿದರೆ ಪರಿಶೀಲಿಸಿ ರದ್ದುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular