HomeKarnatakaಸಹಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ ಮಾಡಬೇಕು: ಆರ್.ಎಂ. ಮಂಜುನಾಥಗೌಡ

ಸಹಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ ಮಾಡಬೇಕು: ಆರ್.ಎಂ. ಮಂಜುನಾಥಗೌಡ

ಶಿವಮೊಗ್ಗ: ಒಬ್ಬ ಸಿಬ್ಬಂದಿ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಅದರ ಪರಿಣಾಮ ಕೇವಲ ಒಂದು ಕಡತ ಅಥವಾ ಒಂದು ವ್ಯವಹಾರದ ಮಟ್ಟಿಗೆ ಸೀಮಿತವಾಗುವುದಿಲ್ಲ. ಅದು ಸದಸ್ಯರ ಸೇವೆ ಹಾಗೂ ಸಂಸ್ಥೆಯ ಕಾರ್ಯಕ್ಷಮತೆಗೆ ಮತ್ತು ಒಟ್ಟಾರೆ ಸಹಕಾರ ಚಳವಳಿಯ ಬಲವರ್ಧನೆಗೆ ಸಂಬಂಧಿಸುತ್ತದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಾಜನೂರು ಅಗ್ರಹಾರದ ತುಂತೂರು ಫಾರಂನಲ್ಲಿ ನೂತನ ನೌಕರರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು

ಸಹಕಾರ ತತ್ವವನ್ನು ನಾವು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಿದೆ. ಸಹಕಾರ ಸಂಸ್ಥೆಗಳು ಖಾಸಗಿ ಸಂಸ್ಥೆಗಳಲ್ಲ. ಖಾಸಗಿ ಸಂಸ್ಥೆಯಲ್ಲಿ ಲಾಭ ಮಾಲೀಕರಿಗೆ ಮಾತ್ರ ಸೀಮಿತ. ಆದರೆ ಸಹಕಾರ ಸಂಸ್ಥೆಯಲ್ಲಿ ಬಂದ ಲಾಭದಲ್ಲೂ ನೌಕರರಿಗೆ ಪಾಲು ಹಂಚಿಕೆಯಾಗಲಿದೆ. ಸಂಸ್ಥೆ ಬೆಳೆದರೆ ನೌಕರ ಬೆಳೆಯುತ್ತಾನೆ. ಆದುದರಿಂದ ಪ್ರತಿಯೊಬ್ಬ ನೌಕರನು ಸ್ವಹಿತಾಸಕ್ತಿಯನ್ನು ಬಿಟ್ಟು ಸಂಸ್ಥೆಯ ಹಿತಾಸಕ್ತಿಯನ್ನು ಕಾಪಾಡಬೇಕು. ಸಾರ್ವಜನಿಕರ ಹಣ, ರೈತರ ಹಣ ನಮ್ಮಲ್ಲಿದೆ. ಬಹಳ ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸದಸ್ಯರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಸಂಸ್ಥೆ ಆರ್ಥಿಕವಾಗಿ ಸದೃಢವಾಗುತ್ತದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಯಕ್ರಮದಲ್ಲಿ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್ ಮಾತನಾಡಿ, ಶಿಕ್ಷಣ, ತರಬೇತಿ ಎನ್ನುವುದು ನಿರಂತರ ಬದುಕಿನ ಕೊನೆಯ ಉಸಿರು ಇರುವವರೆಗೂ ಕಲಿಕೆ ಎಂಬುದು ಇರುತ್ತದೆ. ಈ ನಿಟ್ಟಿನಲ್ಲಿ ಎರಡು ದಿನದ ತರಬೇತಿ ಶಿಬಿರ ನೂತನ ನೌಕರರಿಗೆ ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಎಲ್. ಜಗದೀಶ್ವರ್ ಕುಂಚೇನಹಳ್ಳಿ ಮಾತನಾಡಿ, ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ನೌಕರರು ಈ ಸಂಸ್ಥೆ ನನ್ನದು ಎಂಬ ಮನೋಭಾವನೆಯಿಂದ ಕೆಲಸ ಮಾಡಿದರೆ ಸಂಸ್ಥೆ ಆರ್ಥಿಕವಾಗಿ ಬೆಳೆಯಲು ಸಾಧ್ಯ. ನಿಷ್ಠೆ, ಸಹನೆ, ಪ್ರಬುದ್ಧತೆ ಮತ್ತು ನಾಯಕತ್ವದ ಗುಣ ಹೊಂದಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಸಹಕಾರ ಯೂನಿಯನ್ ಅಧ್ಯಕ್ಷ ಸಿ. ಹನುಮಂತಪ್ಪ ಅಗರದಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಿ.ಎಂ. ಅಮೃತೇಶ್ವರ, ಹೆಚ್.ಬಿ. ದಿನೇಶ್ ಬಳ್ಳಾಪುರ, ಎಂ.ಹೆಚ್. ಲಕ್ಷ್ಮಣ್, ತೇಜೋಮೂರ್ತಿ ಆರ್. ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ್ ಕುಮಾರ್ ಹೆಚ್. ಸ್ವಾಗತಿಸಿ, ವಂದಿಸಿದರು.

ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿಯ ವತಿಯಿಂದ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗಾಗಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 01 ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ‘ವೀರಶೈವ ಕಲ್ಯಾಣ ಮಂದಿರ’ದಲ್ಲಿ ಮಹಿಳಾ ದಸರಾ, ಆಟೋಟ ಹಾಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗಳ ವಿವರಗಳು:

ದಿನಾಂಕ 30-09-2026: ಸಾಕ್ಷಾತ್ ದೇವಿ ಅಲಂಕಾರ ಸ್ಪರ್ಧೆ (ನಿಯಮಗಳೊಂದಿಗೆ), ವಿವಿಧ ವೈಯಕ್ತಿಕ ಆಟೋಟ ಸ್ಪರ್ಧೆಗಳು, ಅಂತ್ಯಾಕ್ಷರಿ ಹಾಗೂ ಮೆಹಂದಿ ಸ್ಪರ್ಧೆ.

ದಿನಾಂಕ 01-10-2026: ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ ಹಾಗೂ “ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆ ನಡೆಯಲಿವೆ.

“ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 28-09-2026 ರೊಳಗಾಗಿ ತಮ್ಮ ಹೆಸರುಗಳನ್ನು ಮೊಬೈಲ್ ಸಂಖ್ಯೆಗಳಾದ 9738710364, 8495820268, 9480113313 ಗಳಿಗೆ ನೊಂದಾಯಿಸಿಕೊಳ್ಳಬೇಕಾಗಿ ಕೋರಲಾಗಿದೆ. 

ಈ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮಹಿಳಾ ದಸರಾ ಸಮಿತಿ-2026ರ ಸದಸ್ಯ ಕಾರ್ಯದರ್ಶಿಗಳು ವಿನಂತಿಸಿದ್ದಾರೆ. 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular