ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 72 ಕೋಟಿ ರೂ. (ಮಾರುಕಟ್ಟೆ ಮೌಲ್ಯದ) 12 ಎಕರೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ಅವರ ನೇತೃತ್ವದಲ್ಲಿ ತೆರುವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಜಮೀನು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಾಡಾಗ್ರಹಾರ ಗ್ರಾಮದ ಸರ್ವೆ ನಂ 34 ರ ಹೊಸ ಸರ್ವೆ ನಂ 115 ಮತ್ತು 116 ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 12.00 ಎಕರೆಗಳಾಗಿದ್ದು, ಅಂದಾಜು ಮೌಲ್ಯ ರೂ 18 (ಮಾರ್ಗಸೂಚಿ ಮೌಲ್ಯ) ಹಾಗೂ ರೂ 72 (ಮಾರುಕಟ್ಟೆ ಮೌಲ್ಯ) ಕೋಟಿಗಳಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್, ಭೂ ದಾಖಲೆಗಳ ಉಪ ನಿರ್ದೇಶಕ ಸುಜಯ್, ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಪರಶುರಾಮ್ ಹಾಗೂ ಬೆಂಗಳೂರು ಪೂರ್ವ ತಾಲ್ಲೂಕಿನ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೇರಗುತ್ತಿಗೆ ಆಧಾರದ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
ಬೆಂಗಳೂರು: ಕೃಷಿ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು(ಸಂಖ್ಯೆ01) ,ಸಹಾಯಕ ತಾಂತ್ರಿಕ ವ್ಯವಸ್ಥಾಪಕರ(ಸಂಖ್ಯೆ-02), ಕಂಪ್ಯೂಟರ್ ಪ್ರೊಗ್ರಾಮರ್(ಸಂಖ್ಯೆ-01) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ(Resume/CV) ಮತ್ತು ಸಂಬಂದಿತ ದಾಖಲಾತಿಗಳನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಸಂಕೀರ್ಣ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಇಲ್ಲಿ ಕಛೇರಿಯ ಅವಧಿಯೊಳಗೆ ಅರ್ಜಿಯನ್ನು ಆಕ್ಟೊಬರ್ 12 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26711594 ಅಥವಾ jdablr14@gamil. Com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೀಕ್ಷಾಭೂಮಿ ಯಾತ್ರೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ರವರ ದೀಕ್ಷಾಭೂಮಿಯಲ್ಲಿ ನಡೆಯುವ ಪ್ರವರ್ತನಾ ದಿನ(ವಿಜಯದಶಮಿ ದಿನ) ಈ ಕಾರ್ಯಕ್ರಮಕ್ಕೆ ಅವರ ಅನುಯಾಯಿ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ
ಆಸಕ್ತಿಯುಳ್ಳ ಅನುಯಾಯಿ ಯಾತ್ರಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆ.ಎಸ್.ಆರ್.ಟಿ.ಸಿ ಮತ್ತು ಇತರೆ ಸಾರಿಗೆ ಬಸ್ ಮತ್ತು ರೈಲಿನ ಮೂಲಕ ಪ್ರಯಾಣಿಸಲು ಆನ್ ಲೈನ್ ಮೂಲಕ ವೆಬ್ ಸೈಟ್: https://swd.karnataka.gov.in/ ರಲ್ಲಿ ಅಕ್ಟೋಬರ್ 9 2026ರ ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, 33ನೇ ಕ್ರಾಸ್, ಜಯನಗರ 7 ನೇ ಬ್ಲಾಕ್, ಸಿಟಿ ಕಾಲೇಜು ಹತ್ತಿರ, ಜಯನಗರ, ದೂರವಾಣಿ ಸಂಖ್ಯೆ 080-26711096 ಅಥವಾ ಇಮೇಲ್ – tswobloresouth@gmail. com ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು(ಗ್ರೇಡ್-1) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

