HomeKarnatakaರೈಲ್ವೆ ಪ್ರಯಾಣದ ವೇಳೆ ತಮಗಾದ ಕೆಟ್ಟ ಅನುಭವ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

ರೈಲ್ವೆ ಪ್ರಯಾಣದ ವೇಳೆ ತಮಗಾದ ಕೆಟ್ಟ ಅನುಭವ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

ಬೆಂಗಳೂರು: ಖ್ಯಾತ ಗಾಯಕಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್​ ಅವರು​ ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ರೈಲಿನಲ್ಲಿ ತನಗಾದ ಆ ಅನುಭವ ನಿಜಕ್ಕೂ ಆಘಾತಕಾರಿಯಾಗಿತ್ತು ಮತ್ತು ಬಹಳ ಬೇಸರ ಮೂಡಿಸುವಂತಿತ್ತು. ಸಾರ್ವಜನಿಕ ಸ್ಥಳಗಳ ಬಗ್ಗೆ ಜನರು ಎಷ್ಟು ಕಡಿಮೆ ಕಾಳಜಿ ವಹಿಸುತ್ತಾರೆ ಎಂಬುದನ್ನು ನೋಡಿ ತುಂಬಾ ಬೇಸರವಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನರು ಸರವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಯಾವರೀತಿ ನಡೆದುಕೊಳ್ಳುತ್ತಾರೆ. ಬೇರೆಯವರ ಬಗ್ಗೆ ಎಷ್ಟು ನಿರ್ಲಕ್ಷದಿಂದ ವರ್ತಿಸುತ್ತಾರೆ ಎಂಬುದನ್ನು ಶಿವಶ್ರೀ ಸ್ಕಂದಪ್ರಸಾದ್ ಬರೆದುಕೊಂಡಿದ್ದಾರೆ. ನಾವು ಸಾರ್ವಜನಿಕ ಸ್ಥಳದಲ್ಲಿರುವಾಗ ಜೋರಾಗಿ ಮಾತನಾಡಬಾರದು, ಕೂಗಾಡಬಾರದು ಹಾಗೂ ಪ್ರತಿಯೊಬ್ಬರ ವೈಯಕ್ತಿಕ ಸ್ಥಳ ಮತ್ತು ನೆಮ್ಮದಿಗೆ ಗೌರವ ನೀಡಬೇಕು. ಕಲಾವಿದರಾದ ನಮಗೆ ಮನಸ್ಸಿನಲ್ಲಿ ಒಂದೇ ಸಮಯದಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ನಾವು ಮೌನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ದೊಡ್ಡ ಗುಂಪಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಆರಂಭದಲ್ಲಿ ಉಂಟಾಗುವ ಉತ್ಸಾಹವನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದು. ಆದರೆ 56 ಸೀಟುಗಳ ಕೋಚ್‌ನಲ್ಲಿ ಸುಮಾರು 40 ಮಧ್ಯವಯಸ್ಕರು ಐದು ಗಂಟೆಗಳ ಕಾಲ ನಿರಂತರವಾಗಿ ಎಲ್ಲರೊಂದಿಗೆ ಜೋರಾಗಿ ಮಾತನಾಡುತ್ತಾ, ಗದ್ದಲ ಮಾಡುತ್ತಾ ಇದ್ದರೆ ಹೇಗಿರಬಹುದು ಎಂದು ಊಹಿಸಿ.

ಭಾರತದಲ್ಲಿ ಸಮಸ್ಯೆ ಏನೆಂದರೆ, ಇಂತಹವರನ್ನು ಯಾರೂ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ, ಆ ಗುಂಪಿನ ಭಾಗವಾಗಿರದ ನಮ್ಮಂತಹ ಉಳಿದ 16 ಜನರು ಅದನ್ನೆಲ್ಲ ಸಹಿಸಿಕೊಂಡು ಸುಮ್ಮನಿರಬೇಕು ಎಂಬ ಅಲಿಖಿತ ನಿಯಮವಿದೆ. ಹೀಗಾಗಿ ಬೇರೆ ಕೋಚ್‌ನಲ್ಲಿ ಯಾವುದಾದರೂ ಸೀಟ್ ಸಿಗಬಹುದೇ ಎಂದು ನಾನು ಟಿಟಿಇಯವರನ್ನು ಕೇಳಿದೆ. ಅವರು ಪ್ರಯತ್ನಿಸಿದರು. ಆದರೆ ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ, ಅದೇ ಕೋಚ್‌ನಲ್ಲಿ ಬೇರೆ ಸೀಟ್‌ನಲ್ಲಿ ಕುಳಿತುಕೊಳ್ಳಬೇಕಾಯಿತು.

ಅಷ್ಟರಲ್ಲಿ, ಈಗಾಗಲೇ ನಿರಂತರವಾಗಿ ಮಾತನಾಡುತ್ತಾ, ನಗುತ್ತಾ ಗದ್ದಲ ಮಾಡುತ್ತಿದ್ದ 8 ಜನರ ಗುಂಪು UNO ಆಟ ಆಡಲು ಆರಂಭಿಸಿತು. ಆಗ ಮತ್ತೊಮ್ಮೆ ಟಿಟಿಇಯವರ ಬಳಿ ಹೋಗಿ ಏನಾದರೂ ಮಾಡಬಹುದೇ ಎಂದು ಕೇಳಿದೆ. ಅವರು ಆ ಗುಂಪಿನವರಿಗೆ ಆಟ ನಿಲ್ಲಿಸುವಂತೆ ಹೇಳಿದರು. ಅವರು ತಕ್ಷಣ ಆಟ ನಿಲ್ಲಿಸಿದರು. ಆದರೆ ಒಂದೆರಡು ನಿಮಿಷಗಳ ನಂತರ ಟಿಟಿಇ ವಾಪಸ್ ಬಂದು ವ್ಯಂಗ್ಯವಾಗಿ, “ಯಾಕೆ ಸರ್ ಗಲಾಟೆ ಮಾಡ್ತಾ ಇದ್ದೀರಾ?” ಎಂದು ಅವರನ್ನು ಕೇಳಿದರು. ಆಗ ಅವರೆಲ್ಲರೂ ಟಿಟಿಇ ಜೊತೆ ನಕ್ಕು, “ಸರ್, ನೀವೂ ಬನ್ನಿ, ಆಡೋಣ” ಎಂದು ಹೇಳಿದರು. ಹೀಗಾಗಿ ಇಲ್ಲಿ ಯಾರು ಗೆದ್ದರು ಎಂಬುದು ವಿಷಯವಲ್ಲ. ಅವರ ಜೊತೆಯಲ್ಲಿ ನಾನೂ ಒಬ್ಬ ಭಾರತೀಯನಾಗಿ ನಾಗರಿಕ ಪ್ರಜ್ಞೆಯ ಆಟದಲ್ಲಿ ಸೋತಿದ್ದೇವೆ. ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆ? ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular