HomeLatest Newsಭಾರತ-ಜಪಾನ್ ಪಂದ್ಯದ ವೇಳೆ ತಮಾಷೆಯ ಪ್ರಸಂಗ: ಸಂಜು ಸ್ಯಾಮ್ಸನ್‌ಗೆ 'ಐ ಲವ್ ಯು' ಎಂದ ಪಾಕಿಸ್ತಾನಿ...

ಭಾರತ-ಜಪಾನ್ ಪಂದ್ಯದ ವೇಳೆ ತಮಾಷೆಯ ಪ್ರಸಂಗ: ಸಂಜು ಸ್ಯಾಮ್ಸನ್‌ಗೆ ‘ಐ ಲವ್ ಯು’ ಎಂದ ಪಾಕಿಸ್ತಾನಿ ಅಭಿಮಾನಿ!

ಜಪಾನ್‌ನ ಸಾನೊದಲ್ಲಿ ನಡೆದ ಏಕೈಕ ಟಿ20 ಪಂದ್ಯದ ಬಳಿಕ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಹಾಗೂ ಅಭಿಮಾನಿಯೊಬ್ಬರ ನಡುವೆ ನಡೆದ ಕುತೂಹಲಕಾರಿ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೊದಲು ಇಶಾನ್ ಕಿಶನ್ ಗಮನ ಸೆಳೆಯಲು ಯತ್ನಿಸಿದ ಅಭಿಮಾನಿ, ಅಲ್ಲಿ ಪ್ರತಿಕ್ರಿಯೆ ಸಿಗದಿದ್ದಾಗ ತಕ್ಷಣವೇ ಸಂಜು ಸ್ಯಾಮ್ಸನ್ ಕಡೆಗೆ ತಿರುಗಿ ಸಂಭಾಷಣೆ ಆರಂಭಿಸಿದ್ದಾನೆ.

ಸಂಜು ಸ್ಯಾಮ್ಸನ್‌ಗೆ ಕೂಗಿ ಕರೆದ ಅಭಿಮಾನಿ, ‘ಸಂಜು, ಐ ಲವ್ ಯು. ಅಭಿಷೇಕ್ ಅವರನ್ನು ಒಮ್ಮೆ ಕರೆಯಿರಿ’ ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಅತ್ಯಂತ ಶಾಂತವಾಗಿ ಉತ್ತರಿಸಿದ ಸಂಜು ಸ್ಯಾಮ್ಸನ್, ‘ಅಭಿಷೇಕ್ ಶರ್ಮ ಊಟ ಮಾಡುತ್ತಿದ್ದಾರೆ, ಪಂದ್ಯ ತಾನೇ ಮುಗಿದಿದೆ, ಸ್ವಲ್ಪ ಸಮಯ ನೀಡಿ, ಊಟ ಮುಗಿದ ನಂತರ ಹೊರಗೆ ಬರುತ್ತಾರೆ’ ಎಂದು ತಿಳಿಸಿದ್ದಾರೆ.

ಬ ಬಳಿಕ ಸಂಜು ಸ್ಯಾಮ್ಸನ್ ಮೈದಾನದ ನಿರ್ದಿಷ್ಟ ಸ್ಥಳವೊಂದನ್ನು ತೋರಿಸಿ ಅಲ್ಲಿ ಭೇಟಿಯಾಗಬಹುದು ಎಂದು ಸನ್ನೆ ಮಾಡಿದ್ದಾರೆ. ಅದಕ್ಕೆ ತಕ್ಷಣ ಒಪ್ಪಿಕೊಂಡ ಅಭಿಮಾನಿ, ‘ನಾನು ಅಲ್ಲೇ ಕಾಯುತ್ತೇನೆ. ಆದರೆ ನಾನು ಪಾಕಿಸ್ತಾನದವನು, ಐ ಲವ್ ಯು ಸ್ಯಾಮ್ಸನ್’ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಗಡಿಯಾಚೆಗೂ ಭಾರತೀಯ ಕ್ರಿಕೆಟಿಗರಿಗಿರುವ ಜನಪ್ರಿಯತೆಯನ್ನು ಈ ಘಟನೆ ಎತ್ತಿ ತೋರಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಿಂದಾಗಿ 5 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿತ್ತು. ಉತ್ತgridವಾಗಿ ಜಪಾನ್ ತಂಡವನ್ನು 30 ರನ್‌ಗಳಿಗೆ ನಿಯಂತ್ರಿಸಿದ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 7 ಎಸೆತಗಳಲ್ಲಿ 9 ರನ್ ಗಳಿಸಿದರೆ, ಅಭಿಷೇಕ್ ಶರ್ಮ ಶೂನ್ಯಕ್ಕೆ ಔಟಾಗಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular