HomeIndiaಡೆಲಿವರಿ ಬಾಯ್ ಮೇಲೆ ಮಾಜಿ ಯೋಧನಿಂದ ಹಲ್ಲೆ: ಬೆಚ್ಚಿಬೀಳಿಸುವ ವಿಡಿಯೋ ವೈರಲ್ (WATCH)

ಡೆಲಿವರಿ ಬಾಯ್ ಮೇಲೆ ಮಾಜಿ ಯೋಧನಿಂದ ಹಲ್ಲೆ: ಬೆಚ್ಚಿಬೀಳಿಸುವ ವಿಡಿಯೋ ವೈರಲ್ (WATCH)

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಕರ್ತವ್ಯದಲ್ಲಿದ್ದ ಡೆಲಿವರಿ ಯುವಕನೊಬ್ಬನ ಮೇಲೆ ಮಾಜಿ ಯೋಧನೆಂದು ಹೇಳಿಕೊಂಡ ಭದ್ರತಾ ಸಿಬ್ಬಂದಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೋಗಿವಾಲಾ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲಭ್ಯವಾಗಿರುವ ವಿವರಗಳ ಪ್ರಕಾರ, ಡೆಲಿವರಿ ಹುಡುಗನು ರಿಲಯನ್ಸ್ ಮಾಲ್‌ನಲ್ಲಿ ಗ್ರಾಹಕರ ಆರ್ಡರ್ ಪಡೆದುಕೊಳ್ಳಲು ಬಂದಿದ್ದನು. ಈ ವೇಳೆ ಆತ ಮಾಲ್‌ಗೆ ನಿಗದಿಪಡಿಸಲಾಗಿದ್ದ ಸಾಮಾನ್ಯ ಪ್ರವೇಶ ಮಾರ್ಗದ ಬದಲಿಗೆ ಬೇರೊಂದು ಮಾರ್ಗದ ಮೂಲಕ ಒಳನುಗ್ಗಿದ್ದಾನೆ ಎಂಬ ಕಾರಣಕ್ಕೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆಕ್ರೋಶಗೊಂಡಿದ್ದಾನೆ. ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಡೆಲಿವರಿ ಯುವಕನ ಹೆಲ್ಮೆಟ್ ಕಿತ್ತು ನೆಲಕ್ಕೆಸೆದ ಕಾವಲುಗಾರ, ಆತನನ್ನು ಮನಬಂದಂತೆ ಥಳಿಸಲು ಆರಂಭಿಸಿದ್ದಾನೆ.

ಹಲ್ಲೆಗೊಳಗಾದ ಯುವಕ ಕೈಮುಗಿದು ಪದೇ ಪದೇ ಕ್ಷಮೆಯಾಚಿಸಿದರೂ ಕಾವಲುಗಾರನ ರೋಷ ತಣಿಯಲಿಲ್ಲ. ರಸ್ತೆಯಲ್ಲೇ ಯುವಕನನ್ನು ಕೆಳಗೆ ಬೀಳಿಸಿ, ಕಪಾಳಮೋಕ್ಷ ಮಾಡಿ ಕಾಲಿನಿಂದ ಒದ್ದು ದೌರ್ಜನ್ಯ ಎಸಗಿದ್ದಾನೆ. “ನಾನು ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದವನು” ಎಂದು ಕೂಗಾಡುತ್ತಾ ಆತ ಅಸಭ್ಯ ಪದಗಳಿಂದ ಬೈಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸ್ಥಳದಲ್ಲಿದ್ದ ಕೆಲವರು ಆತನನ್ನು ತಡೆಯಲು ಯತ್ನಿಸಿ ಹೊಡೆಯಬೇಡಿ ಎಂದು ಅಂಗಲಾಚಿದರೂ ಆತ ಹಲ್ಲೆ ಮುಂದುವರಿಸಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅಮಾನುಷ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ನೆಹರೂ ಕಾಲೋನಿ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಹಲ್ಲೆ ನಡೆಸಿದ ಆರೋಪಿ ಮಾಜಿ ಸೈನಿಕನನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಡೆಲಿವರಿ ಯುವಕನನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಆತನಿಂದ ಅಧಿಕೃತ ಹೇಳಿಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular