HomeEntertainmentಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಿಂದ ‘ಬಲರಾಮನ ದಿನಗಳು’ ನಿರ್ಮಾಪಕರಿಗೆ ಮೋಸ, ಸರ್ಕಾರಕ್ಕೂ GST ವಂಚನೆ ಆರೋಪ: ದೂರು

ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಿಂದ ‘ಬಲರಾಮನ ದಿನಗಳು’ ನಿರ್ಮಾಪಕರಿಗೆ ಮೋಸ, ಸರ್ಕಾರಕ್ಕೂ GST ವಂಚನೆ ಆರೋಪ: ದೂರು

ಬೆಂಗಳೂರು: ಕೆವಿಎನ್ ಪ್ರೊಡಕ್ಷನ್ಸ್(KVN Productions) ಸಂಸ್ಥೆಯ ವಿರುದ್ಧ ‘ಬಲರಾಮನ ದಿನಗಳು’ ಚಿತ್ರದ ನಿರ್ಮಾಣ ಸಂಸ್ಥೆಯಾದ ಪದ್ಮಾವತಿ ಫಿಲಮ್ಸ್ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ವಂಚನೆ ಮತ್ತು ಜಿಎಸ್‌ಟಿ ವಂಚನೆಯ ಗಂಭೀರ ದೂರು ನೀಡಿದೆ.

ಇತ್ತೀಚೆಗೆ ಬಿಡುಗಡೆಯಾದ ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಚಿತ್ರದ ವಿತರಣಾ ಹಕ್ಕುಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಪಡೆದುಕೊಂಡಿತ್ತು. ಚಿತ್ರದ ಬಿಡುಗಡೆ ಹಾಗೂ ಹಣಕಾಸಿನ ವಹಿವಾಟಿನಲ್ಲಿ ಕೆವಿಎನ್ ಸಂಸ್ಥೆ ತಮಗೆ ಮಹಾಮೋಸ ಮಾಡಿದೆ ಎಂದು ಪದ್ಮಾವತಿ ಫಿಲಮ್ಸ್‌ನ ಶ್ರೇಯಸ್ ಆರೋಪಿಸಿದ್ದಾರೆ.

ದೂರಿನಲ್ಲಿರುವ ಪ್ರಮುಖ ಆರೋಪಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣಕಾಸು ವಂಚನೆ ಮತ್ತು ಲಾಭದ ಪಾಲು ನಿರಾಕರಣೆ: ಸಿನಿಮಾ ವಿತರಣೆಯಿಂದ ಬಂದ ಲಾಭದ ಸರಿಯಾದ ಪಾಲನ್ನು ಮತ್ತು ಸೂಕ್ತ ಲೆಕ್ಕಾಚಾರವನ್ನು ಕೆವಿಎನ್ ಪ್ರೊಡಕ್ಷನ್ಸ್ ತಮಗೆ ನೀಡಿಲ್ಲ.

ಜಿಎಸ್‌ಟಿ ಮತ್ತು ತೆರಿಗೆ ವಂಚನೆ: ‘ಎಸ್‌ಎಸ್‌ಎಸ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ವ್ಯವಹಾರಗಳನ್ನು ನಡೆಸಿ, ಸರ್ಕಾರಕ್ಕೆ ಜಿಎಸ್‌ಟಿ (GST) ವಂಚನೆ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಚಿತ್ರಮಂದಿರಗಳ ಮಲತಾಯಿ ಧೋರಣೆ: ‘ಬಲರಾಮನ ದಿನಗಳು’ ಚಿತ್ರಕ್ಕೆ ಸೂಕ್ತ ಚಿತ್ರಮಂದಿರಗಳನ್ನು ನೀಡದೆ, ಕೆವಿಎನ್ ಸಂಸ್ಥೆಗೆ ನಿಕಟವಾಗಿರುವ ಚಿತ್ರಮಂದಿರಗಳಿಗೆ ಮಾತ್ರ ಆದ್ಯತೆ ನೀಡಿ ಚಿತ್ರದ ಕಲೆಕ್ಷನ್‌ ಗೆ ಧಕ್ಕೆ ತರಲಾಗಿದೆ.

ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾತು ತಪ್ಪಿರುವುದು: ಚಿತ್ರದ ಒಟಿಟಿ(OTT) ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಕೊಡಿಸುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.

ಈ ಎಲ್ಲಾ ಕಾರಣಗಳಿಂದ ತಮಗೆ ಭಾರಿ ಆರ್ಥಿಕ ನಷ್ಟವಾಗಿದ್ದು, ₹2 ಕೋಟಿ ಪರಿಹಾರ ಕೊಡಿಸಬೇಕು ಮತ್ತು ಕೆವಿಎನ್ ಪ್ರೊಡಕ್ಷನ್ಸ್ (ಮೋಹನ್ ಸುಪ್ರೀತ್) ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪದ್ಮಾವತಿ ಫಿಲಮ್ಸ್ ನಿರ್ಮಾಪಕರ ಸಂಘಕ್ಕೆ ಮನವಿ ಮಾಡಿದೆ.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ದೂರು

26-06-2026 ರಂದು ಕರ್ನಾಟಕದಾದ್ಯಂತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಿಂದ ಬಿಡುಗಡೆ ಮಾಡಿರುತ್ತೇವೆ. ನಮ್ಮ ಚಿತ್ರ ಬಿಡುಗಡೆ ಮುಂಚೆ ನಮ್ಮನ್ನು ಇದೇ ಸಂಸ್ಥೆಯ ಸುಪ್ರೀತ್ ಎಂಬುವವರು ನಮ್ಮನ್ನು ಭೇಟಿಯಾಗಿರುತ್ತಾರೆ. ಅವರು ಕೆವಿಎನ್ ಸಂಸ್ಥೆಯ ಬಗ್ಗೆ, ಹೊಗಳಿಕ ಮಾತನಾಡಿ, ನಮ್ಮ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿರುತ್ತಾರೆ. ನಂತರ ನಮ್ಮ ಚಿತ್ರದ ಟಿವಿ ರೈಟ್ಸ್ ಮತ್ತು ಡಿಜಿಟಲ್ ರೈಟ್ಸ್ ಅನ್ನು ನಾವೇ ವ್ಯಾಪಾರ ಮಾಡಿಕೊಡುತ್ತೇವೆ. ನಮ್ಮದೇ ಟೀಮ್ ಇದೆ ಎಲ್ಲದಕ್ಕೂ ನಿಮಗೆ ಸಹಕರಿಸಿ ಕೆಲಸ ಮಾಡಿಕೊಡುತ್ತೇವೆಂದು ತಿಳಿಸಿರುತ್ತಾರೆ. ನಾವು ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಿಂದ ಬಂದು ಮಾತನಾಡಿದ ಸುಪ್ರೀತ್ ಮಾತನ್ನು ನಂಬಿರುತ್ತೇವೆ ಹಾಗೂ ಕೆವಿಎನ್ ಸಂಸ್ಥೆ ನೂರಾರು ಕೋಟಿಗಳ ಚಿತ್ರವನ್ನು ಮಾಡುತ್ತಿರುವುದರಿಂದ ನಾವು ನಮ್ಮ ಚಿತ್ರವನ್ನು ಈ ಸಂಸ್ಥೆಯಿಂದ ಬಿಡುಗಡೆ ಮಾಡಲು ಒಪ್ಪಿರುತ್ತೇವೆ. ನಾವು ನಮ್ಮ ಚಿತ್ರ ಬಿಡುಗಡೆಗೆ ಒಂದು ರೂಪಾಯಿಯನ್ನು ಸಹ ಪಡೆದುಕೊಂಡಿರುವುದಿಲ್ಲ. ನಮ್ಮ ಚಿತ್ರವನ್ನು ಒಳ್ಳೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೇ, ಅವರೇ ನಡೆಸುವ ಚಿತ್ರಮಂದಿರಗಳಿಗೆ ಪ್ರಾಮುಖ್ಯತೆ ಕೊಟ್ಟು ಬಿಡುಗಡೆ ಮಾಡಿರುತ್ತಾರೆ.

ಉದಾಹರಣೆಗೆ ಕೆಂಗೇರಿಯ ರಾಬಿನ್ ಚಿತ್ರಮಂದಿರದಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡಲಿಲ್ಲ. ಚಿತ್ರ ಬಿಡುಗಡೆಯಾದ ನಂತರ ಟಿವಿ ಹಾಗೂ ಡಿಜಿಟಲ್ ರೈಟ್ಸ್ ಗಳನ್ನು ಸಹ ಮಾರಾಟ ಮಾಡಿ ಹಾಗೂ ನಮಗೆ ಲೆಕ್ಕಗಳನ್ನು ಸರಿಯಾಗಿ ಕೊಡದೇ ಸತಾಯಿಸಿ ನಂತರದಲ್ಲಿ ನೀಡಿರುತ್ತಾರೆ.

ಆ ಲೆಕ್ಕಗಳನ್ನು ವರಿಶೀಲಿಸಿದಾಗ ನಮಗೆ ತುಂಬಾ ವ್ಯತ್ಯಾಸಗಳು ಕಂಡುಬಂದಿರುತ್ತದೆ. ಉದಾಹರಣೆಗೆ ಯಾವುದೇ ಚಿತ್ರ ಬಿಡುಗಡೆಯಾದರೂ ಚಿತ್ರಮಂದಿರದವರು ಬಾಡಿಗೆ ಅಥವಾ ಶೇಕಡಾವಾರು ಪದ್ಧತಿಯಲ್ಲಿ ನಮಗೆ ಶೇರ್ ಕೊಡುತ್ತಾರೆ. ಕೆವಿಎನ್ ಸಂಸ್ಥೆಯವರು ಹೇಳುವ ಪ್ರಕಾರ 45,000 ಗಳ ಮೇಲೆ collection ಆದರೆ ಮಾತ್ರ ಚಿತ್ರಮಂದಿರದವರು ನಮಗೆ ಶೇರ್ ಕೂಡುತ್ತಾರೆ. ಇಲ್ಲದಿದ್ದರೆ ನಮಗೆ ಶೇರ್ ಕೊಡುವುದಿಲ್ಲವೆಂದು ತಿಳಿಸಿ ನಮಗೆ ಸ್ಟೇಟ್‌ಮೆಂಟ್ ನೀಡಿರುತ್ತಾರೆ. ನಾವು ನಮ್ಮ ಚಿತ್ರ ಬಿಡುಗಡೆಯಾದ ಚಿತ್ರಮಂದಿರದಲ್ಲಿ ವಿಚಾರಿಸಲಾಗಿ, ಎಲ್ಲಾ ಚಿತ್ರಮಂದಿರದವರು Net ಮೇಲೆ 50% ಶೇರ್ ಕೊಟ್ಟಿರುತ್ತಾರೆ.

ದಯಮಾಡಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯವರು ನಮಗೆ ತುಂಬಾ ಮೋಸ ಮಾಡಿರುತ್ತಾರೆ, ಎಲ್ಲಾ ಜಾಹೀರಾತಿನಲ್ಲಿ ಕೆವಿಎನ್ ಸಂಸ್ಥೆ ಬಿಡುಗಡೆ ಎಂದು ಕೊಟ್ಟಿರುತ್ತಾರೆ. ನಂತರದಲ್ಲಿ ಈ ಚಿತ್ರದ ಎಲ್ಲಾ ವ್ಯವಹಾರವು ಎಸ್‌ಎಸ್‌ಎಸ್ ಎಂಟ‌ರ್ಪ್ರೈಸೆಸ್ ಸಂಸ್ಥೆಯಿಂದ ನಡೆದಿರುತ್ತದೆ ಹಾಗೂ ನಮ್ಮ ಚಿತ್ರದ ಶೇರ್ ಮೊತ್ತ ಸಹ ಎಸ್‌ಎಸ್‌ಎಸ್ ಎಂಟರ್‌ಪ್ರೈಸೆಸ್ ಸಂಸ್ಥೆಯಿಂದ Invoice ಮಾಡಿದ್ದಾರೆ. ಇವರು GST ವಿಷಯದಲ್ಲಿ ಸರ್ಕಾರಕ್ಕೂ ಸಹ ಮೋಸ ಮಾಡಿರುತ್ತಾರೆ.

ಅದಕ್ಕೆ ಸಂಬಂಧಿಸಿದಂತೆ ಅವರೇ ಕೊಟ್ಟಿರುವ ಸ್ಟೇಟ್‌ಮೆಂಟ್ ಅನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ. ಇದರ ಪೂರ್ಣ ವಿವರಗಳನ್ನು ದಾಖಲಾತಿಯೊಂದಿಗೆ ನಾನು ಕೆವಿಎನ್ ಸಂಸ್ಥೆಯವರ ಮುಂದೆ ಸಲ್ಲಿಸುತ್ತೇನೆ. ದಯಮಾಡಿ ನನಗೆ ಆಗಿರುವ ನಷ್ಟಕ್ಕೆ ಕೆವಿಎನ್ ಸಂಸ್ಥೆಯಿಂದ 2,00,00,000/- (ಎರಡು ಕೋಟಿ) ಗಳ ಪರಿಹಾರವನ್ನು ಕೊಡಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ ಹಾಗೂ ಇನ್ನು ಮುಂದೆ ಬೇರೆ ಯಾವುದೇ ನಿರ್ಮಾಪಕರಿಗೂ ಕೆವಿಎನ್ ಸಂಸ್ಥೆಯವರಿಂದ ಮೋಸವಾಗದಂತೆ ಕ್ರಮವಿಡಬೇಕೆಂದು ಈ ಮೂಲಕ ಕೋರುತ್ತೇವೆ ಎಂದು ತಿಳಿಸಲಾಗಿದೆ.

 (ಚಿತ್ರಕೃಪೆ:ಎಐ)

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular