HomeLatest Newsಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ: ಸಾಫ್ಟ್ ಟೆನ್ನಿಸ್‌ನಲ್ಲಿ ಚೊಚ್ಚಲ ಕಂಚಿನ ಪದಕ ಗೆದ್ದ...

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಐತಿಹಾಸಿಕ ಸಾಧನೆ: ಸಾಫ್ಟ್ ಟೆನ್ನಿಸ್‌ನಲ್ಲಿ ಚೊಚ್ಚಲ ಕಂಚಿನ ಪದಕ ಗೆದ್ದ 26ರ ಹರೆಯದ ತಾರೆ!

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಕ್ರೀಡಾಪಟು ಜೈ ಮೀನಾ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ. ಸಾಫ್ಟ್ ಟೆನ್ನಿಸ್ ಕ್ರೀಡೆಯಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಹಿರಿಮೆಗೆ ಇವರು ಪಾತ್ರರಾಗಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಟಕುಯಾ ಕುರೊಸಾಕಾ ವಿರುದ್ಧ 2-4 ಅಂತರದಿಂದ ಸೋಲನುಭವಿಸಿದರೂ, ಜೈ ಮೀನಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಧ್ಯಪ್ರದೇಶದ ದೇವಾಸ್ ಮೂಲದ 26 ವರ್ಷದ ಜೈ ಮೀನಾ ಅವರ ಈ ಕ್ರೀಡಾ ಪಯಣ ಅತ್ಯಂತ ರೋಚಕವಾಗಿದೆ. ಬಾಲ್ಯದಲ್ಲಿ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡಿದ್ದ ಮೀನಾ, ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿದ್ದರು. ಪಯೋನೀರ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾಗ ಸಾಫ್ಟ್ ಟೆನ್ನಿಸ್ ಅಂಕಣದಲ್ಲಿ ಪಂದ್ಯಗಳನ್ನು ವೀಕ್ಷಿಸುತ್ತಾ, ಆರಂಭದಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡಲು ಶುರು ಮಾಡಿದ್ದರು. ಅಲ್ಲಿಂದ ಶುರುವಾದ ಆಸಕ್ತಿ ನಂತರ ಅವರ ಕ್ರೀಡಾ ಜೀವನದ ಹಾದಿಯನ್ನೇ ಬದಲಿಸಿತು.

ಶಾಲಾ ಮಟ್ಟದಿಂದ ಆರಂಭವಾದ ಅವರ ಪಯಣ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದವರೆಗೆ ತಲುಪಿತು. ಕೇವಲ 14ನೇ ವಯಸ್ಸಿನಲ್ಲಿಯೇ ಜಪಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 2022ರ ಗುಜರಾತ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹಾಗೂ 2025ರಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಪಡೆದಿದ್ದರು. 2024ರ ವಿಶ್ವ ಸಾಫ್ಟ್ ಟೆನ್ನಿಸ್ ಚಾಂಪಿಯನ್‌ಷಿಪ್‌ನ ಮಿಶ್ರ ಡಬಲ್ಸ್‌ನಲ್ಲಿ ಹಾಗೂ 2025ರ ಏಷ್ಯನ್ ಸಾಫ್ಟ್ ಟೆನ್ನಿಸ್ ಚಾಂಪಿಯನ್‌ಷಿಪ್‌ನಲ್ಲೂ ಪದಕ ಗೆದ್ದು ಸಾಧನೆ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ 2018 ಮತ್ತು 2022ರ ಏಷ್ಯನ್ ಗೇಮ್ಸ್‌ಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಜೈ ಮೀನಾ, ಈ ಬಾರಿ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಕೂಟದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಶೆರ್ವಿನ್ ನುಗುಯಿಟ್ ವಿರುದ್ಧ 4-3 ಅಂತರದ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಈ ಮೂಲಕ ಸಾಫ್ಟ್ ಟೆನ್ನಿಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಬ್ಯಾಟ್‌ನಿಂದ ಟೆನ್ನಿಸ್ ರಾಕೆಟ್ ಹಿಡಿದು ಇತಿಹಾಸ ಬರೆದ ಜೈ ಮೀನಾ ಅವರ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular