HomeKarnatakaಪ್ರವಾಸೋದ್ಯಮ ರೀಲ್ಸ್ ಸ್ಪರ್ಧೆ–2026; ರೀಲ್ಸ್ ಮಾಡಿ ಭರ್ಜರಿ ಬಹುಮಾನ ಗೆಲ್ಲಿ!

ಪ್ರವಾಸೋದ್ಯಮ ರೀಲ್ಸ್ ಸ್ಪರ್ಧೆ–2026; ರೀಲ್ಸ್ ಮಾಡಿ ಭರ್ಜರಿ ಬಹುಮಾನ ಗೆಲ್ಲಿ!

ಹಾಸನ : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಸೆ.27ರಂದು ಹಾಸನ ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಹಾಸನ ಪ್ರವಾಸೋದ್ಯಮ ರೀಲ್ಸ್ ಸ್ಪರ್ಧೆ–2026’ ಆಯೋಜಿಸಲಾಗಿದೆ.

ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ವೈವಿಧ್ಯತೆ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಮಹತ್ವ, ನೈಸರ್ಗಿಕ ಸೌಂದರ್ಯ ಮತ್ತು ಸಾಹಸ ಪ್ರವಾಸೋದ್ಯಮದ ಸಾಧ್ಯತೆಗಳನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸುವುದು ಸ್ಪರ್ಧೆಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಯಾರು ಭಾಗವಹಿಸಬಹುದು?

ಕರ್ನಾಟಕ ರಾಜ್ಯದ 18 ವರ್ಷ ಮೇಲ್ಪಟ್ಟ ನಾಗರಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವೈಯಕ್ತಿಕವಾಗಿ ಅಥವಾ ತಂಡದ ಮೂಲಕ ರೀಲ್ಸ್‌ಗಳನ್ನು ತಯಾರಿಸಬಹುದು. ಒಬ್ಬ ಸ್ಪರ್ಧಾರ್ಥಿಯು ಗರಿಷ್ಠ ಎರಡು ವಿಭಿನ್ನ ವಿಷಯಗಳ ರೀಲ್ಸ್‌ಗಳನ್ನು ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ವಿಷಯಗಳ ಕುರಿತು ರೀಲ್ಸ್ ಮಾಡಬಹುದು?

ಹಾಸನ ಜಿಲ್ಲೆಯ ಕೆಳಗಿನ ಪ್ರವಾಸೋದ್ಯಮ ವಿಷಯಗಳ ಕುರಿತು ಸೃಜನಾತ್ಮಕ ರೀಲ್ಸ್‌ಗಳನ್ನು ತಯಾರಿಸಬಹುದು:

  • ಪಾರಂಪರಿಕ ಹಾಗೂ ಐತಿಹಾಸಿಕ ಪ್ರವಾಸೋದ್ಯಮ

  • ಧಾರ್ಮಿಕ ಪ್ರವಾಸೋದ್ಯಮ

  • ನೈಸರ್ಗಿಕ ಪ್ರವಾಸೋದ್ಯಮ

  • ಜಲಪಾತ ಪ್ರವಾಸೋದ್ಯಮ

  • ಸಾಹಸ ಪ್ರವಾಸೋದ್ಯಮ

  • ಗ್ರಾಮೀಣ ಪ್ರವಾಸೋದ್ಯಮ

  • ಆಹಾರ ಮತ್ತು ಸ್ಥಳೀಯ ಸಂಸ್ಕೃತಿ

  • ಇತರೆ ಪ್ರವಾಸೋದ್ಯಮ ಸಂಬಂಧಿತ ವಿಷಯಗಳು

ರೀಲ್ಸ್‌ಗೆ ಇರಬೇಕಾದ ನಿಯಮಗಳು

ರೀಲ್ಸ್‌ನ ಅವಧಿ ಕನಿಷ್ಠ 1 ನಿಮಿಷ ಹಾಗೂ ಗರಿಷ್ಠ 2 ನಿಮಿಷ ಇರಬೇಕು. ರೀಲ್ಸ್‌ಗಳು ಹಾಸನ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಅದರ ಉತ್ತೇಜನಕ್ಕೆ ಸಂಬಂಧಿಸಿದ ವಿಷಯವನ್ನೇ ಒಳಗೊಂಡಿರಬೇಕು.ವೀಡಿಯೋವು ಸ್ಪರ್ಧಾರ್ಥಿಯೇ ಸ್ವತಃ ಚಿತ್ರೀಕರಿಸಿದ ಅಥವಾ ಸೃಜಿಸಿದ ಮೂಲ ಕೃತಿಯಾಗಿರಬೇಕು. ರೀಲ್ಸ್‌ಗಳನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ರಚಿಸಬೇಕು.

ವೀಡಿಯೋ ಕನಿಷ್ಠ 1080p ಗುಣಮಟ್ಟದಲ್ಲಿ ಇರಬೇಕು. MP4 ಅಥವಾ MOV ಸ್ವರೂಪದಲ್ಲಿ ಸಲ್ಲಿಸಬೇಕು. ಪ್ರವಾಸಿ ತಾಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ರೀಲ್ಸ್ ಸಿದ್ಧಪಡಿಸಿದ್ದರೆ, ಅದು ಕಳೆದ 12 ತಿಂಗಳೊಳಗೆ ಚಿತ್ರೀಕರಿಸಿರುವುದಾಗಿರಬೇಕು. ರೀಲ್ಸ್‌ನಲ್ಲಿ ಪ್ರವಾಸಿ ತಾಣದ ಹೆಸರು ಹಾಗೂ ಸ್ಥಳದ ಕುರಿತು ಸಂಕ್ಷಿಪ್ತ ಮತ್ತು ವಾಸ್ತವಿಕ ಮಾಹಿತಿಯನ್ನು ನೀಡುವುದು ಸೂಕ್ತ.

ಏನೆಲ್ಲಾ ಮಾಡಬಾರದು?

ವೀಡಿಯೋದಲ್ಲಿ ಯಾವುದೇ ವ್ಯಕ್ತಿ, ಧರ್ಮ, ಸಮುದಾಯ ಅಥವಾ ಸಂಸ್ಥೆಗೆ ಅವಹೇಳನವಾಗುವ, ಆಕ್ಷೇಪಾರ್ಹ ಅಥವಾ ಕಾನೂನುಬಾಹಿರ ವಿಷಯಗಳನ್ನು ಒಳಗೊಂಡಿರಬಾರದು.

ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ಅರಣ್ಯ ಪ್ರದೇಶಗಳು, ಜಲಾಶಯಗಳು ಹಾಗೂ ಇತರೆ ಸಂರಕ್ಷಿತ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಸಂಬಂಧಪಟ್ಟ ಇಲಾಖೆಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಸ್ಮಾರಕಗಳು, ಶಿಲ್ಪಗಳು, ದೇವಾಲಯದ ವಿಗ್ರಹಗಳು ಅಥವಾ ಸಂರಕ್ಷಿತ ಪರಂಪರೆಯ ಕಟ್ಟಡಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಚಿತ್ರೀಕರಣ ಮಾಡಬೇಕು.

ಡ್ರೋನ್ ಬಳಸಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಸರ್ಕಾರಿ ನಿಯಮಗಳು ಹಾಗೂ ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು.ಇತರರ ಕೃತಿಸ್ವಾಮ್ಯಕ್ಕೆ ಒಳಪಟ್ಟ ಸಂಗೀತ, ವೀಡಿಯೋ, ಛಾಯಾಚಿತ್ರ ಅಥವಾ ಇತರೆ ವಿಷಯಗಳನ್ನು ಅನುಮತಿಯಿಲ್ಲದೆ ಬಳಸಬಾರದು. ರೀಲ್ಸ್‌ನಲ್ಲಿ ಯಾವುದೇ ಜಾಹೀರಾತು ವಿಷಯವನ್ನು ಒಳಗೊಂಡಿರಬಾರದು.

ರೀಲ್ಸ್‌ನಲ್ಲಿ ಬಳಸಿರುವ ಸಂಗೀತ, ಧ್ವನಿ, ಚಿತ್ರಗಳು ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಕಾನೂನುಬದ್ಧ ಜವಾಬ್ದಾರಿ ಸಂಪೂರ್ಣವಾಗಿ ಸ್ಪರ್ಧಾರ್ಥಿಯದ್ದಾಗಿರುತ್ತದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆ ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ.

ರೀಲ್ಸ್ ಸಲ್ಲಿಸಲು ಕೊನೆಯ ದಿನ

ಸ್ಪರ್ಧಾರ್ಥಿಗಳು ತಮ್ಮ ರೀಲ್ಸ್‌ಗಳನ್ನು ಸೆ.27ರೊಳಗೆ ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿರುವ ಇ-ಮೇಲ್ ವಿಳಾಸಗಳಿಗೆ ಸಲ್ಲಿಸಬೇಕು.

ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಈ ಮಾಹಿತಿಯನ್ನು ನೀಡಬೇಕು:

  • ಸ್ಪರ್ಧಾರ್ಥಿಯ ಹೆಸರು

  • ವಯಸ್ಸು

  • ವಿಳಾಸ

  • ಮೊಬೈಲ್ ಸಂಖ್ಯೆ

  • ಇ-ಮೇಲ್ ವಿಳಾಸ

  • ರೀಲ್ಸ್‌ನ ಶೀರ್ಷಿಕೆ

  • ಚಿತ್ರೀಕರಿಸಿದ ಪ್ರವಾಸಿ ತಾಣದ ಹೆಸರು

  • ರೀಲ್ಸ್ ಮೂಲ ಕೃತಿಯಾಗಿದೆ ಎಂಬ ಘೋಷಣೆ

ಬಹುಮಾನ

ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ರೀಲ್ಸ್‌ಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಬಹುಮಾನಗಳ ಸಂಖ್ಯೆ ಮತ್ತು ಮೊತ್ತವನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಲಿದೆ.ಸಲ್ಲಿಸಲಾದ ರೀಲ್ಸ್‌ಗಳನ್ನು ಪರಿಶೀಲಿಸಲು ಪ್ರವಾಸೋದ್ಯಮ ಇಲಾಖೆ ರಚಿಸುವ ಪರಿಶೀಲನಾ/ತೀರ್ಪುಗಾರರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಯ್ಕೆಯಾದ ರೀಲ್ಸ್‌ಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುವ ಹಕ್ಕನ್ನು ಪ್ರವಾಸೋದ್ಯಮ ಇಲಾಖೆ ಹೊಂದಿರುತ್ತದೆ. ಹಾಸನ ಜಿಲ್ಲೆಯ ಪ್ರವಾಸೋದ್ಯಮವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಹಾಗೂ ಹಾಸನವನ್ನು ಇನ್ನಷ್ಟು ಆಕರ್ಷಕ ಪ್ರವಾಸಿ ತಾಣವಾಗಿ ಡಿಜಿಟಲ್ ಮಾಧ್ಯಮದಲ್ಲಿ ಪ್ರಚಾರಪಡಿಸುವ ಈ ಸೃಜನಶೀಲ ಅಭಿಯಾನದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ

ಜಿಲ್ಲಾ ಸಮಾಲೋಚಕ ಕಾರ್ತಿಕ್ ಜಿ.ಎಂ.
ಮೊಬೈಲ್: 8296256593

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular