HomeKarnatakaGOOD NEWS : ರಾಜ್ಯದಲ್ಲಿ 814 ಉಪನ್ಯಾಸಕರ ನೇಮಕಾತಿಗೆ ಸರ್ಕಾರದಿಂದ ಅಧಿಸೂಚನೆ ; KEA ಮೂಲಕ...

GOOD NEWS : ರಾಜ್ಯದಲ್ಲಿ 814 ಉಪನ್ಯಾಸಕರ ನೇಮಕಾತಿಗೆ ಸರ್ಕಾರದಿಂದ ಅಧಿಸೂಚನೆ ; KEA ಮೂಲಕ ನೇರ ನೇಮಕಾತಿ

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಅಧಿಸೂಚನೆಯಂತೆ, ಒಟ್ಟು 814 ಹುದ್ದೆಗಳಲ್ಲಿ 778 ಹುದ್ದೆಗಳು ಉಳಿಕೆ ಮೂಲ ವೃಂದ (NKK) ಹಾಗೂ 36 ಹುದ್ದೆಗಳು ಕಲ್ಯಾಣ-ಕರ್ನಾಟಕ (KK) ಭಾಗಕ್ಕೆ ಸೇರಿವೆ.

ಕೆಇಎಗೆ ನೇಮಕಾತಿ ಹೊಣೆ

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವನ್ನಾಗಿ ಸರ್ಕಾರ ನಿರ್ದಿಷ್ಟಪಡಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ನೇಮಕಾತಿ ಪ್ರಕ್ರಿಯೆಯನ್ನು ಕೆಇಎ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024ರ ಅಕ್ಟೋಬರ್ 15ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ಅದರ ಅನ್ವಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಪ್ರಾಧಿಕಾರವಾಗಿ ಕೆಇಎಯನ್ನು ಪರಿಗಣಿಸಲಾಗಿದೆ.

9 ಮತ್ತು 10ನೇ ತರಗತಿ ಬೋಧನೆಗೂ ಅವಕಾಶ

ಇದೇ ವೇಳೆ, 9 ಮತ್ತು 10ನೇ ತರಗತಿಗಳಿಗೆ ಪದವಿ ಪೂರ್ವ ಉಪನ್ಯಾಸಕರಿಂದ ಬೋಧನಾ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

ಪ್ರಸ್ತುತ ನೇಮಕಾತಿಗೆ ಅನುಮತಿ ನೀಡಿರುವ 814 ಉಪನ್ಯಾಸಕರ ಹುದ್ದೆಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಪ್ರಕಟಣೆ ಹೊರಡಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.

ಯಾವ ವಿಷಯಕ್ಕೆ ಎಷ್ಟು ಹುದ್ದೆಗಳು?

ಒಟ್ಟು 814 ಉಪನ್ಯಾಸಕರ ಹುದ್ದೆಗಳಲ್ಲಿ, ಕನ್ನಡ ವಿಷಯಕ್ಕೆ 89 ಹುದ್ದೆಗಳು, ಇಂಗ್ಲಿಷ್‌ಗೆ 145, ಇತಿಹಾಸಕ್ಕೆ 50 ಮತ್ತು ಅರ್ಥಶಾಸ್ತ್ರಕ್ಕೆ 90 ಹುದ್ದೆಗಳನ್ನು ಮೀಸಲಿಡಲಾಗಿದೆ. ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರಕ್ಕೆ ತಲಾ 25 ಹುದ್ದೆಗಳು, ಭೂಗೋಳಶಾಸ್ತ್ರಕ್ಕೆ 10 ಹುದ್ದೆಗಳು, ವಾಣಿಜ್ಯ (Bst + Acc) ವಿಷಯಕ್ಕೆ 150 ಹುದ್ದೆಗಳು ನಿಗದಿಯಾಗಿವೆ. ಇನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಿಗೆ ತಲಾ 30 ಹುದ್ದೆಗಳಿದ್ದು, ಕಂಪ್ಯೂಟರ್ ಸೈನ್ಸ್‌ಗೆ 110 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಈ ಪೈಕಿ ಉಳಿಕೆ ಮೂಲ ವೃಂದ (NKK)ಕ್ಕೆ 778 ಹುದ್ದೆಗಳು ಹಾಗೂ ಕಲ್ಯಾಣ-ಕರ್ನಾಟಕ (KK) ಭಾಗಕ್ಕೆ 36 ಹುದ್ದೆಗಳು ಸೇರಿದ್ದು, ಒಟ್ಟಾರೆ 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಒಟ್ಟಿನಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಮುಂದಿನ ಹಂತದಲ್ಲಿ ಕೆಇಎ ನೇಮಕಾತಿ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ.

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular