HomeInternationalʼಅಮೆರಿಕಾಸ್ ಗಾಟ್ ಟ್ಯಾಲೆಂಟ್ʼ ನಲ್ಲಿ ರೋಬೋಟ್‌ಗಳ ಕಮಾಲ್ ; ಚೀನೀ ನರ್ತಕನ ಜತೆ ಹೆಜ್ಜೆ ಹಾಕಿ...

ʼಅಮೆರಿಕಾಸ್ ಗಾಟ್ ಟ್ಯಾಲೆಂಟ್ʼ ನಲ್ಲಿ ರೋಬೋಟ್‌ಗಳ ಕಮಾಲ್ ; ಚೀನೀ ನರ್ತಕನ ಜತೆ ಹೆಜ್ಜೆ ಹಾಕಿ ನೇರವಾಗಿ ಫಿನಾಲೆಗೆ ಎಂಟ್ರಿ | Watch

ಜನಪ್ರಿಯ ಅಮೆರಿಕನ್ ರಿಯಾಲಿಟಿ ಶೋ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ವೇದಿಕೆಯಲ್ಲಿ ಚೀನೀ ನರ್ತಕ ವು ಯುಫೇ ಅವರೊಂದಿಗೆ ಮಾನವಸದೃಶ (ಹ್ಯೂಮನಾಯ್ಡ್) ರೋಬೋಟ್‌ಗಳು ನಡೆಸಿಕೊಟ್ಟ ಅದ್ಭುತ ನೃತ್ಯ ಮತ್ತು ಸಮರ ಕಲೆಯ ಪ್ರದರ್ಶನವು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಯೂನಿಟ್ರೀ ಸಂಸ್ಥೆಯ ಅತ್ಯಾಧುನಿಕ ಜಿ1 ಮಾದರಿಯ ರೋಬೋಟ್‌ಗಳು ಮನುಷ್ಯರಂತೆಯೇ ಅತ್ಯಂತ ಚುರುಕಾಗಿ, ಲಯಬದ್ಧವಾಗಿ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿವೆ.

ಚೀನೀ ಸಮರ ಕಲೆ (ಮಾರ್ಷಲ್ ಆರ್ಟ್ಸ್), ಶಾಸ್ತ್ರೀಯ ನೃತ್ಯ ಹಾಗೂ ಅತ್ಯಾಧುನಿಕ ರೊಬೊಟಿಕ್ಸ್ ತಂತ್ರಜ್ಞಾನವನ್ನು ಮೇಳೈಸಿ ಈ ಪ್ರದರ್ಶನವನ್ನು ಸಿದ್ಧಪಡಿಸಲಾಗಿತ್ತು. ನರ್ತಕ ವು ಯುಫೇ ಅವರೊಂದಿಗೆ ವೇದಿಕೆಗೆ ಇಳಿದ ರೋಬೋಟ್‌ಗಳು ಒಂದೇ ರೀತಿಯ ಭಂಗಿಗಳು, ಪಂಚ್‌ಗಳು, ಕಿಕ್‌ಗಳು ಹಾಗೂ ಬ್ಯಾಕ್‌ಫ್ಲಿಪ್‌ಗಳನ್ನು ಅತ್ಯಂತ ಕರಾರುವಾಕ್ಕಾಗಿ ಪ್ರದರ್ಶಿಸಿ ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿದವು. ಮನುಷ್ಯರು ಮತ್ತು ಯಂತ್ರಗಳು ಒಂದೇ ನೃತ್ಯ ತಂಡದಂತೆ ಪರಸ್ಪರ ಹೊಂದಿಕೊಂಡು ಹೆಜ್ಜೆ ಹಾಕಿದ್ದು ಈ ಕಲೆಯ ಪ್ರಮುಖ ಆಕರ್ಷಣೆಯಾಗಿತ್ತು.

ಈ ಹಿಂದೆ ಜೂನ್‌ನಲ್ಲಿ ನಡೆದ 21 ನೇ ಆವೃತ್ತಿಯ ಆಡಿಷನ್‌ನಲ್ಲಿ ಎಂಟು ರೋಬೋಟ್‌ಗಳೊಂದಿಗೆ ಕಾಣಿಸಿಕೊಂಡಿದ್ದ ವು ಯುಫೇ, ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದರು. ಆದರೆ ಸೆಪ್ಟೆಂಬರ್ 8 ರಂದು ನಡೆದ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಈ ಪ್ರದರ್ಶನವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಾಗಿತ್ತು. ರೋಬೋಟ್‌ಗಳ ಅದ್ಭುತ ಸಮತೋಲನ, ಚುರುಕುತನ ಹಾಗೂ ಸಾಹಸಮಯ ಹೆಜ್ಜೆಗಳನ್ನು ಕಂಡು ಮೂಕವಿಸ್ಮಿತರಾದ ತೀರ್ಪುಗಾರ್ತಿ ಸೋಫಿಯಾ ವೆರ್ಗಾರಾ ಅವರು ತಮ್ಮ ‘ಲೈವ್ ಗೋಲ್ಡನ್ ಬಜರ್’ ಒತ್ತುವ ಮೂಲಕ ಈ ರೋಬೋಟ್ ತಂಡವನ್ನು ನೇರವಾಗಿ ಕಾರ್ಯಕ್ರಮದ ಅಂತಿಮ ಫಿನಾಲೆ ಸುತ್ತಿಗೆ ಕಳುಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಾಚೀನ ಸಂಸ್ಕೃತಿಯನ್ನು ಇಂದಿನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಸೆದು ಅದ್ಭುತವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಕೆಲವರು ಶ್ಲಾಘಿಸಿದ್ದರೆ, ರೋಬೋಟ್‌ಗಳು ಮನರಂಜನೆಗೆ ಸರಿ ಆದರೆ ಭವಿಷ್ಯದಲ್ಲಿ ಇವುಗಳು ಅಪಾಯಕಾರಿಯಾಗಿ ಬದಲಾಗಬಹುದು ಎಂದು ಇನ್ನು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಚೀನಾದ ಮುನ್ನಡೆಗೆ ಈ ಪ್ರದರ್ಶನ ಕನ್ನಡಿ ಹಿಡಿದಿದೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular