HomeKarnatakaಕರ್ನಾಟಕದ ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ಮತ್ತಷ್ಟು ಬಲ; SFAL 2.0ಗೆ ಏಳು ಕಾರ್ಯತಂತ್ರದ ಪಾಲುದಾರಿಕೆ

ಕರ್ನಾಟಕದ ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ಮತ್ತಷ್ಟು ಬಲ; SFAL 2.0ಗೆ ಏಳು ಕಾರ್ಯತಂತ್ರದ ಪಾಲುದಾರಿಕೆ

ಬೆಂಗಳೂರು: ಕರ್ನಾಟಕದ ಸೆಮಿಕಂಡಕ್ಟರ್‌ ಇಕೋಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್‌ (SFAL) ಮಹತ್ವದ ಹೆಜ್ಜೆ ಇಟ್ಟಿದೆ. SEMICON India 2026ರಲ್ಲಿ SFAL ಏಳು ಹೊಸ ಕಾರ್ಯತಂತ್ರದ ಪಾಲುದಾರಿಕೆಗಳಿಗೆ ಸಹಿ ಹಾಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಹೊಸ ಪಾಲುದಾರಿಕೆಗಳು ಸಂಶೋಧನೆ, ಮೂಲಮಾದರಿ ಅಭಿವೃದ್ಧಿ, ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ, ಕೌಶಲ್ಯಾಭಿವೃದ್ಧಿ, ಹೂಡಿಕೆ ಹಾಗೂ ವಾಣಿಜ್ಯೀಕರಣಕ್ಕೆ ಉತ್ತೇಜನ ನೀಡಲಿವೆ ಎಂದು ಹೇಳಿದ್ದಾರೆ.

ಪ್ರಮುಖ ಪಾಲುದಾರಿಕೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • IISc CeNSE: ಸಂಶೋಧನಾ ಸಹಯೋಗ, ಮೂಲಮಾದರಿ ಹಾಗೂ ನ್ಯಾನೊಎಲೆಕ್ಟ್ರಾನಿಕ್ಸ್ ಸಾಮರ್ಥ್ಯ ಬಲವರ್ಧನೆ.

  • ಕೇನ್ಸ್ ಸೆಮಿಕಾನ್: ಸ್ಟಾರ್ಟ್‌ಅಪ್‌ಗಳನ್ನು ಮೌಲ್ಯೀಕರಣದಿಂದ ಉತ್ಪಾದನೆ ಮತ್ತು ವಾಣಿಜ್ಯೀಕರಣದ ಹಂತಕ್ಕೆ ಕೊಂಡೊಯ್ಯಲು ನೆರವು.

  • ಸಿಲ್ವಾಕೊ: ಸೆಮಿಕಂಡಕ್ಟರ್ ವಿನ್ಯಾಸ ಪರಿಣತಿ ಮತ್ತು EDA ಪರಿಕರಗಳಿಗೆ ಹೆಚ್ಚಿನ ಪ್ರವೇಶ.

  • ಫೋರ್‌ಫ್ರಂಟ್: ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಹಾಗೂ ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ನಾವೀನ್ಯತೆಗೆ ಬೆಂಬಲ.

  • WOWSEMI ಫೌಂಡೇಶನ್: ಸೆಮಿಕಂಡಕ್ಟರ್ ಕೌಶಲ್ಯ ಮತ್ತು ಪ್ರತಿಭೆ ಅಭಿವೃದ್ಧಿಗೆ ಉತ್ತೇಜನ.

  • ಪೀಚ್‌ಟ್ರೀ ಎಲಿವೇಟ್: ಸ್ಟಾರ್ಟ್‌ಅಪ್ ಮಾರ್ಗದರ್ಶನ ಮತ್ತು ಡೀಪ್‌ಟೆಕ್ ಸಾಮರ್ಥ್ಯ ನಿರ್ಮಾಣ.

  • ಆರಾಯಾ ಅಡ್ವೈಸರಿ: ಹೂಡಿಕೆ ಸಿದ್ಧತೆ, ನಿಧಿಸಂಗ್ರಹಣೆ ಮತ್ತು ಕಾರ್ಯತಂತ್ರದ ಬೆಳವಣಿಗೆಗೆ ಸಹಾಯ.

ಪ್ರಿಯಾಂಕ್ ಖರ್ಗೆ ಅವರು, ಕರ್ನಾಟಕ ಸರ್ಕಾರ ಮತ್ತು ಉದ್ಯಮದ ಪಾಲುದಾರರ ಸಹಯೋಗದೊಂದಿಗೆ ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ SFAL ಅನ್ನು ಆರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ. ಸೆಮಿಕಂಡಕ್ಟರ್ ನಾವೀನ್ಯತೆಯನ್ನು ವೇಗಗೊಳಿಸುವುದು ಹಾಗೂ ಸ್ಟಾರ್ಟ್‌ಅಪ್‌ಗಳು, ಸಂಶೋಧನೆ, ತಂತ್ರಜ್ಞಾನ ಮತ್ತು ಉದ್ಯಮವನ್ನು ಒಂದೇ ವೇದಿಕೆಯಲ್ಲಿ ಹತ್ತಿರ ತರುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಹಂತದಲ್ಲಿ SFAL 2.0 ಮೂಲಕ ಸಂಶೋಧನೆ ಮತ್ತು ವಿನ್ಯಾಸದಿಂದ ಮೌಲ್ಯೀಕರಣ, ಉತ್ಪಾದನೆ, ಹೂಡಿಕೆ ಹಾಗೂ ಜಾಗತಿಕ ಮಾರುಕಟ್ಟೆ ಪ್ರವೇಶದವರೆಗೆ ಬಲವಾದ ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಕರ್ನಾಟಕದ ಸೆಮಿಕಂಡಕ್ಟರ್ ಮತ್ತು ಚಿಪ್-ವಿನ್ಯಾಸ ಇಕೋಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸುವುದಾಗಿ ಅವರು ಹೇಳಿದ್ದಾರೆ.

ತುಳು ಭಾಷೆ ಕರ್ನಾಟಕದ ಎರಡನೇ ಆಡಳಿತ ಭಾಷೆ

ತುಳು ಭಾಷೆಯನ್ನು ಕರ್ನಾಟಕದ ಎರಡನೇ ಆಡಳಿತ ಭಾಷೆ ಎಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಇಂದು ನಡೆದ ಕರಾವಳಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತುಳು, ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ನಮ್ಮ ಸರ್ಕಾರ ಆದ್ಯತೆಯಾಗಿ ಪರಿಗಣಿಸಿದೆ. ಈ ಭಾಗದ ಜನರ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ತುಳು ಭಾಷೆಗೆ ಮನ್ನಣೆ ನೀಡಲಾಗಿದೆ.ತುಳು ಭಾಷೆಯ ಅನುವಾದ, ತರಬೇತಿ ಮತ್ತು ಭಾಷಾ ಬಳಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸರ್ಕಾರ ಪ್ರತಿ ವರ್ಷ 82 ಲಕ್ಷ ರೂ. ಅನುದಾನ ನೀಡಲಿದೆ. ಕರ್ನಾಟಕದ ಪ್ರತಿ ಪ್ರದೇಶ, ಅಲ್ಲಿನ ಭಾಷೆ ಹಾಗೂ ಸಂಸ್ಕೃತಿ ಮತ್ತು ಜನರ ಭಾವನೆಗಳಿಗೆ ಗ್ಯಾರಂಟಿ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular