HomeBusinessಐಫೋನ್ ಖರೀದಿಸಿದ ಮೊದಲ ಗ್ರಾಹಕ ನಾನೇ ಎಂದ ಯುವಕ ; ಜಗಳಕ್ಕಿಳಿದ ಮತ್ತೊಬ್ಬ !

ಐಫೋನ್ ಖರೀದಿಸಿದ ಮೊದಲ ಗ್ರಾಹಕ ನಾನೇ ಎಂದ ಯುವಕ ; ಜಗಳಕ್ಕಿಳಿದ ಮತ್ತೊಬ್ಬ !

ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಹೊಸ ಐಫೋನ್ ಬಿಡುಗಡೆಯಾದಾಗಲೆಲ್ಲಾ ಅದನ್ನು ಮೊದಲು ಖರೀದಿಸಲು ಗ್ರಾಹಕರು ಮುಗಿಬೀಳುವುದು ಸಾಮಾನ್ಯ. ಆದರೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆ್ಯಪಲ್ ಸಂಸ್ಥೆಯ ನೂತನ ಐಫೋನ್ 18 ಮಾದರಿಯನ್ನು ಮೊದಲಿಗೆ ಯಾರು ಖರೀದಿಸಿದರು ಎಂಬ ವಿಚಾರವಾಗಿ ಇಬ್ಬರು ಗ್ರಾಹಕರು ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಜಗಳವಾಡಿಕೊಂಡಿರುವ ವಿಚಿತ್ರ ಹಾಗೂ ನಗೆಪಾಟಲಿನ ಘಟನೆ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಪ್ರಕಾರ, ಸಿಡ್ನಿಯ ಅಧಿಕೃತ ಆ್ಯಪಲ್ ಮಳಿಗೆಯಿಂದ ಹೊಸ ಐಫೋನ್ 18 ಪಡೆದು ಹೊರಬಂದ ವ್ಯಕ್ತಿಯೊಬ್ಬ ತಾನೇ ಮೊದಲು ಖರೀದಿಸಿದ ಗ್ರಾಹಕ ಎಂದು ಕೈಬೀಸಿ ಸಂಭ್ರಮಿಸಲು ಶುರುಮಾಡಿದನು. ಅಲ್ಲಿದ್ದ ಜನರೂ ಚಪ್ಪಾಳೆ ತಟ್ಟಿ ಆತನನ್ನು ಹುರಿದುಂಬಿಸಿದರು. ಆದರೆ ಅಷ್ಟರಲ್ಲೇ ಅಲ್ಲಿಗೆ ಧಾವಿಸಿದ ಮತ್ತೊಬ್ಬ ಗ್ರಾಹಕ ಆತನ ಸಂಭ್ರಮವನ್ನು ನೇರವಾಗಿ ಆಕ್ಷೇಪಿಸಿ, ಈತ ಸುಳ್ಳು ಹೇಳುತ್ತಿದ್ದಾನೆ, ನಾನೇ ನಿನ್ನೆಯಿಂದಲೇ ಮಳಿಗೆ ಎದುರು ಸಾಲಿನಲ್ಲಿ ನಿಂತು ಮೊದಲ ಫೋನ್ ಖರೀದಿಸಿದ್ದೇನೆ ಎಂದು ತಗಾದೆ ತೆಗೆದಿದ್ದಾನೆ. ಅಷ್ಟಕ್ಕೇ ಮುಗಿಯದೆ ಮತ್ತೊಬ್ಬ ವ್ಯಕ್ತಿಯೂ ಮಧ್ಯಪ್ರವೇಶಿಸಿ ತಾನೇ ಮೊದಲ ಗ್ರಾಹಕ ಎಂದು ಹೇಳಿಕೊಂಡಿದ್ದು, ಅಲ್ಲಿ ನೆರೆದಿದ್ದವರಲ್ಲಿ ಗೊಂದಲ ಹಾಗೂ ನಗುವನ್ನು ಮೂಡಿಸಿತು. ಕೇವಲ ಒಂದು ಫೋನ್‌ಗಾಗಿ ಇಷ್ಟೊಂದು ಅತಿರೇಕದ ಹುಚ್ಚಾಟ ಅಗತ್ಯವೇ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಈ ಹುಚ್ಚು ಕೇವಲ ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾಗಿರದೆ, ಭಾರತದಲ್ಲೂ ಹೊಸ ಐಫೋನ್ ಸರಣಿಯ ಮಾರಾಟದ ಮೊದಲ ದಿನವೇ ಭರ್ಜರಿ ಜನಸಂದಣಿ ಕಂಡುಬಂದಿದೆ. ಶುಕ್ರವಾರ ಮುಂಜಾನೆ 8 ಗಂಟೆಯಿಂದಲೇ ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಂಗಳೂರಿನಲ್ಲಿರುವ ಅಧಿಕೃತ ಮಳಿಗೆಗಳ ಮುಂದೆ ನೂರಾರು ಜನರು ಸಾಲುಗಟ್ಟಿ ನಿಂತಿದ್ದರು. ವಿಶೇಷವಾಗಿ ಮುಂಬೈನ ಬಿಕೆಸಿ ಹಾಗೂ ದೆಹಲಿಯ ಸೆಲೆಕ್ಟ್ ಸಿಟಿವಾಕ್ ಮಳಿಗೆಗಳ ಮುಂದೆ ನೂಕುನುಗ್ಗಲು ಉಂಟಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಫೋನ್ ಅನ್ನು ಮೊದಲ ದಿನವೇ ಕೈಗೆತ್ತಿಕೊಳ್ಳಲು ಹಲವರು ದೂರದ ಊರುಗಳಿಂದ ಪ್ರಯಾಣ ಬೆಳೆಸಿ ಬಂದಿದ್ದರು. ಗುಜರಾತ್‌ನಿಂದ ಮುಂಬೈಗೆ ಆಗಮಿಸಿದ್ದ ಗ್ರಾಹಕರೊಬ್ಬರು ಪ್ರಸಿದ್ಧ ಲಾಲ್‌ಬಾಗ್‌ ರಾಜನ ದರ್ಶನ ಪಡೆದು ಮುಂಜಾನೆ 6 ಗಂಟೆಗೆ ಮಳಿಗೆಗೆ ಬಂದು ಸಾಲಿನಲ್ಲಿ ನಿಂತು 1.64 ಲಕ್ಷ ರೂಪಾಯಿ ಮೌಲ್ಯದ ಐಫೋನ್ 18 ಪ್ರೊ ಖರೀದಿಸಿದರು. ಹೊಸ ಎ20 ಪ್ರೊಸೆಸರ್ ಮತ್ತು ಚೆರ್ರಿ ರೆಡ್ ಬಣ್ಣದ ಆವೃತ್ತಿ ತಮಗೆ ಇಷ್ಟವಾಯಿತು ಎಂದು ಅವರು ತಿಳಿಸಿದರು. ಸೂರತ್ ಮೂಲದ ಮತ್ತೊಬ್ಬ ವ್ಯಕ್ತಿ ಮುಂಬೈಗೆ ಬಂದು ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಎರಡೂ ಮಾದರಿಗಳನ್ನು ಖರೀದಿಸಿ ಗಮನ ಸೆಳೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular