HomeKarnatakaರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಖುದ್ದು ಹಾಜರಿಗೆ ಷರತ್ತುಬದ್ಧ ಸಮ್ಮತಿ ನೀಡಿದ ಹೈಕೋರ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಖುದ್ದು ಹಾಜರಿಗೆ ಷರತ್ತುಬದ್ಧ ಸಮ್ಮತಿ ನೀಡಿದ ಹೈಕೋರ್ಟ್

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿ ನಟ ದರ್ಶನ್ ಖುದ್ದು ನ್ಯಾಯಾಲಯದಲ್ಲಿ ಹಾಜರಾಗಲು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ವಿಚಾರಣೆ ನಡೆಸುದ ಹೈಕೋರ್ಟ್​, ಖುದ್ದು ಹಾಜರಾಗಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಷರತ್ತು ವಿಧಿಸಿದೆ.

ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಹಲವು ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್, ಮಾಫಿ ಸಾಕ್ಷಿಯಾಗುವುದಾಗಿ ಕೋರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರದ್ಫ್ಷ್ ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಕೋರ್ಟ್ ಅನುಮತಿ ನೀಡಿದೆ. ಪ್ರದೋಷ್ ಮಾಫಿ ಸಾಕ್ಷಿಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದಾರಾದರೂ ದರ್ಶನ್ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಆದರೆ ದರ್ಶನ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ದರ್ಶನ್​​ಗೆ ಮುನ್ನಡೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಸಾಕ್ಷ್ಯಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ದರ್ಶನ್ ಅವಕಾಶ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಷರತ್ತುಗಳ ಮೇರೆಗೆ ದರ್ಶನ್ ಖುದ್ದು ಹಾಜರಿಗೆ ಸಮ್ಮತಿ ನೀಡಿದೆ.

ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠವು ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಿದ್ದು, ಮುಖ್ಯವಾದ ಸಾಕ್ಷ್ಯಗಳ ವಿಚಾರಣೆ ಇರುವ ದಿನಗಳು ದರ್ಶನ್​​ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಒಪ್ಪಿಗೆ ನೀಡಿದೆ. ಅಲ್ಲದೆ ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ನಡೆಯಬೇಕು ಎಂದು ಸಹ ಹೈಕೋರ್ಟ್ ಹೇಳಿದೆ. ಮುಖ್ಯ ಸಾಕ್ಷ್ಯಗಳ ವಿಚಾರಣೆಗೆ ನಿಗದಿತ ದಿನಾಂಕವನ್ನು ಎರಡೂ ಕಡೆಯವರು ಚರ್ಚಿಸಿ ನಿಗದಿ ಪಡಿಸಬೇಕು ಎಂದು ಸೂಚಿಸಿದೆ.

ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯೂ ಇರುವುದರಿಂದ ವಿಶಿಷ್ಟ ಪ್ರಕರಣ ಎಂದು ಪರಿಗಣಿಸಲಾಗುತ್ತಿದೆ. ಆದರೆ ಇದನ್ನು ಇತರೆ ಪ್ರಕರಣಗಳಿಗೆ ಉದಾಹರಣೆಯಾಗಿ ಪರಿಗಣಿಸಬಾರದು ಎಂದ ನ್ಯಾಯಾಲಯವು, ಭದ್ರತೆಯ ಬಗ್ಗೆ ಎತ್ತಲಾದ ಪ್ರಶ್ನೆಗೆ, ಸೂಕ್ತ ಭದ್ರತೆ ಕೊಟ್ಟು ಕರೆತರುವುದು ಸರ್ಕಾರದ ಹೊಣೆ, ಈಗ ದರ್ಶನ್ ಆರೋಪಿ ಮಾತ್ರ, ಅಪರಾಧಿಯಾಗುವವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಕೋರ್ಟ್‌ಗಳದ್ದೂ ಭದ್ರತೆಯ ಹೊಣೆ ಇರುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಸಿಕ್ಯೂಷನ್ ಎಗ್ಸಾಮಿನೇಷನ್ ಇನ್ ಚೀಫ್‌ ಅನ್ನು ವಿಸಿಯಲ್ಲಿ ನಡೆಸಬೇಕು, ಆದರೆ ಮುಖ್ಯ ಸಾಕ್ಷಿಗಳ ಕ್ರಾಸ್ ಎಗ್ಸಾಮಿನೇಷನ್‌ಗೆ ದಿನಾಂಕ ನಿಗದಿಪಡಿಸಬೇಕು, ಎರಡೂ ಕಡೆಯವರ ಸಮ್ಮತಿ ಮೇರೆಗೆ ದಿನಾಂಕ ನಿಗದಿಪಡಿಸಬೇಕು ಆ ದಿನಗಳಂದು ದರ್ಶನ್‌ರನ್ನು ಖುದ್ದು ಹಾಜರುಪಡಿಸಬೇಕು, ಖುದ್ದಾಗಿ ಹಾಜರುಪಡಿಸಿದಾಗ ದಿನಾಂಕ ಮುಂದೂಡಿಕೆ ಕೇಳಬಾರದು, ಪ್ರಾಸಿಕ್ಯೂಷನ್ ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ನಡೆಸಬೇಕು. ಏಳು ಮುಖ್ಯ ಸಾಕ್ಷಿಗಳ ವಿಚಾರಣೆ ಇದರಲ್ಲಿ ಸೇರಿಸಬೇಕು. ಮುಖ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್​​ಗೆ ಪ್ರತ್ಯೇಕ ದಿನಾಂಕಗಳು ಇರಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.

ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ದರ್ಶನ್ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಹೈಕೋರ್ಟ್​​ನ ಆದೇಶದಿಂದಾಗಿ ದರ್ಶನ್, ಕೋರ್ಟ್​​ಗೆ ಬರುವಂತಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular