HomeKarnatakaಸಿದ್ದರಾಮಯ್ಯರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ; ಅವರಿಗೆ ಮನೆಯಲ್ಲಿ ರೆಸ್ಟ್ ಗ್ಯಾರಂಟಿ:...

ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ; ಅವರಿಗೆ ಮನೆಯಲ್ಲಿ ರೆಸ್ಟ್ ಗ್ಯಾರಂಟಿ: ಆರ್.ಅಶೋಕ್ ವ್ಯಂಗ್ಯ

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನವರು ರೆಸ್ಟ್ ಗ್ಯಾರಂಟಿ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ನಾನು ಈಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಸರ್ಕಾರದಲ್ಲಿ ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಎಂಬುದು ನನಗೆ ಮಾತ್ರ ಗೊತ್ತು ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರ ಮಾತಿನ ಬೆನ್ನಲ್ಲೇ ಶಾಸಕ ಕೆ.ಎನ್.ರಾಜಣ್ಣ, ಸಿದ್ದರಾಮಯ್ಯ ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಪಕ್ಷ ಸ್ಟ್ರಾಂಗ್ ಇರುತ್ತದೆ, ಅವರು ವೀಕ್ ಆದ್ರೆ ಕಾಂಗ್ರೆಸ್ ಕೂಡ ವೀಕ್ ಆಗುತ್ತೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಒಕ್ಕಲಿಗರೆಲ್ಲರೂ ವೋಟ್ ಹಾಕುವುದಿಲ್ಲ ಎಂದಿದ್ದರು. ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸಿದರಾಮಯ್ಯ ಅವರಿಗೆ ಕಾಂಗ್ರೆಸ್ ನವರು ವಿಶ್ರಾಂತಿ ಕೊಟ್ಟಿದ್ದಾರೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಡಿ.ಕೆ.ಶಿವಕುಮಾರ್ ಮುಖ ನೋಡಿ ಒಕ್ಕಲಿಗರು ವೋಟ್ ಹಾಕಲ್ಲ ಎಂದು ಅವರದೇ ಪಕ್ಷದ ಕೆ.ಎನ್.ರಾಜಣ್ಣ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ ಎಂದು ಟೀಕಿಸಿದರು.

ಮಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿದೆ. ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದ್ದು, ಹೊಸ ಘೋಷಣೆಗೆ ಹಣ ಎಲ್ಲಿಂದ ತರುತ್ತೆ? ಕಾಂಗ್ರೆಸ್ ಸರ್ಕಾರ ಮೂರೇ ವರ್ಷಗಳಲ್ಲಿ 1.5 ಲಕ್ಷ ಕೋಟಿ ಸಾಲ ಮಾಡಲು ಹೊರಟಿದೆ. ಪ್ರಸ್ತುತ ವರ್ಷಕ್ಕೆ 35,000 ದಿಂದ 40,000 ಕೋಟಿ ಬಡ್ಡಿ ಕಟ್ಟುವ ಸ್ಥಿತಿ ಎದುರಾಗಿದೆ. ಸಾಲ ಮಾಡದೇ ಬಜೆಟ್ ಮಂಡಿಸಿ ತೋರಿಸಲಿ ಎಂದು ಸಿಎಂಗೆ ಅಶೋಕ್ ಸವಾಲು ಹಾಕಿದರು.

ಬೊಮ್ಮಾಯಿ ಸರ್ಕಾರ ಉಳಿತಾಯದ ಬಜೆಟ್ ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ದಿವಾಳಿಯಾದ ಬಜೆಟ್ ನೀಡಿದೆ. ಕೆಎಸ್ಆರ್‌ಟಿಸಿಗೆ 5,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದ್ದು, ಸಿಬ್ಬಂದಿಗೆ ಸಂಬಳ ಹಾಗೂ ಡೀಸೆಲ್‌ಗೂ ಹಣವಿಲ್ಲದಂತಾಗಿದೆ. ಕ್ರಷರ್‌ಗಳಿಂದ ವರ್ಷಕ್ಕೆ 1 ಕೋಟಿ ಕಮಿಷನ್ ಬೇಡಿಕೆ ಇಟ್ಟಿರುವುದರಿಂದ ಜೆಲ್ಲಿ, ಎಂ-ಸ್ಯಾಂಡ್ ಸಿಗದೆ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಕಿಡಿಕಾರಿದರು.

ಇನ್ನು ಆಸ್ಪತ್ರೆಗಳಲ್ಲಿ ಔಷಧಿಯಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆಯಾಗಿಲ್ಲ ಮತ್ತು ರೈತರಿಗೆ ಸೂಕ್ತ ಬರ ಪರಿಹಾರ ತಲುಪಿಲ್ಲ. ಹಿಂದೆ ಕಲಬುರಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆಯ ಘೋಷಣೆಗಳು ಒಂದೂ ಜಾರಿಯಾಗಿಲ್ಲ. ಈಗ ಮಂಗಳೂರಿನ ರೆಸಾರ್ಟ್‌ನಲ್ಲಿ ಮೀನು, ಏಡಿಕಾಯಿ ತಿಂದುಕೊಂಡು ಕ್ಯಾಬಿನೆಟ್ ನಡೆಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular