HomeIndiaBREAKING : UGC NET ಮರು ಪರೀಕ್ಷೆಯ ಫಲಿತಾಂಶ ಪ್ರಕಟ ; ರಿಸಲ್ಟ್ ಹೀಗೆ ಚೆಕ್...

BREAKING : UGC NET ಮರು ಪರೀಕ್ಷೆಯ ಫಲಿತಾಂಶ ಪ್ರಕಟ ; ರಿಸಲ್ಟ್ ಹೀಗೆ ಚೆಕ್ ಮಾಡಿ |UGC NET June Result 2026

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವತಿಯಿಂದ UGC NET ಜೂನ್ 2026 ಮರು ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ ತಮ್ಮ ಸ್ಕೋರ್‌ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಯುಜಿಸಿ ನೆಟ್ ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ವಿಷಯಗಳ ರೀ-ಎಗ್ಜಾಮ್‌ನಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶ ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಬೇಕು.

ಫಲಿತಾಂಶ ಡೌನ್‌ಲೋಡ್ ಮಾಡುವುದು ಹೇಗೆ?

  1. ಮೊದಲು ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ.

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ
  2. ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿರುವ Candidate Activity ವಿಭಾಗದ ಮೇಲೆ ಕ್ಲಿಕ್ ಮಾಡಿ.

  3. ನಂತರ UGC-NET June 2026 Score Card (Re-Exam) ಲಿಂಕ್ ಆಯ್ಕೆ ಮಾಡಿ.

  4. ಅಗತ್ಯ ಮಾಹಿತಿಯನ್ನು ನಮೂದಿಸಿದ ಬಳಿಕ ಫಲಿತಾಂಶ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.

  5. ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು, ಭವಿಷ್ಯದ ಬಳಕೆಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಸೆಪ್ಟೆಂಬರ್ 9 ಮತ್ತು 10ರಂದು ನಡೆದಿತ್ತು ಪರೀಕ್ಷೆ

UGC NET ಮರು ಪರೀಕ್ಷೆ ಸೆಪ್ಟೆಂಬರ್ 9 ಮತ್ತು 10ರಂದು ನಡೆಸಲಾಗಿತ್ತು. ದೇಶಾದ್ಯಂತ 454 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಒಟ್ಟು 1,96,491 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 1,20,355 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

NTA ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, NET ಪರೀಕ್ಷೆಯ ಮೂಲಕ JRFಗೆ 824 ಅಭ್ಯರ್ಥಿಗಳು, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ 11,610 ಅಭ್ಯರ್ಥಿಗಳು ಹಾಗೂ PhD ಪ್ರವೇಶಕ್ಕೆ 23,154 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಸ್ಕೋರ್‌ಕಾರ್ಡ್‌ನಲ್ಲಿ ಈ ವಿವರಗಳನ್ನು ಪರಿಶೀಲಿಸಿ

ಅಭ್ಯರ್ಥಿಗಳು ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿದ ಬಳಿಕ ಅದರಲ್ಲಿ ನಮೂದಿಸಿರುವ ಹೆಸರು, ಪರೀಕ್ಷೆಯ ಹೆಸರು, ಪರೀಕ್ಷಾ ಕೇಂದ್ರ ಹಾಗೂ ಪಡೆದ ಅಂಕಗಳು ಸೇರಿದಂತೆ ಎಲ್ಲ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಉದ್ಯೋಗಾವಕಾಶಗಳಿಗೆ ಕೌಶಲ್ಯವೇ ಮೂಲಾಧಾರ:

ಬಳ್ಳಾರಿ : ಇಂದಿನ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆಯಷ್ಟೇ ಸಾಲದು, ಯುವಜನರು ಉದ್ಯೋಗ ಪಡೆಯಲು ವೃತ್ತಿಪರ ಕೌಶಲ್ಯಾಭಿವೃದ್ಧಿ ಅತ್ಯಂತ ಪೂರಕ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಕೇಂದ್ರದ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೌಶಲ್ಯ ತರಬೇತಿ ಪ್ರಮಾಣಪತ್ರ ವಿತರಣೆ’ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ನೂತನ ‘ಜಾಬ್ ಪೋರ್ಟಲ್’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನಿರಂತರ ಕೌಶಲ್ಯ ಕಲಿಕೆಯಿಂದ ಮಾತ್ರ ಕಾರ್ಯಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್ ಮಾತನಾಡಿ, ಕೈಗಾರಿಕಾ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಯುವಜನರು ಪ್ರಾಯೋಗಿಕ ಜ್ಞಾನ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಐಟಿ ಕಮಿಟಿ ಚೇರ್ಮನ್ ಪಿ. ವೇಣುಗೋಪಾಲ ಗುಪ್ತ ಹಾಗೂ ಸಿಇಒ ಡಾ. ಡಿ.ಎಲ್. ರಮೇಶಗೋಪಾಲ್ ಅವರು ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಜಾಬ್ ಪೋರ್ಟಲ್‌ನ ಮಹತ್ವದ ಕುರಿತು ವಿವರಿಸಿದರು.

ಉದ್ಯೋಗ ಮಾಹಿತಿ ವೆಬ್‌ಸೈಟ್: www.jobroots.in ಸಂಪರ್ಕ ಸಂಖ್ಯೆ: 8660455326, 9880654649 (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ). ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್. ದೊಡ್ಡನಗೌಡ, ಸೊಂತ ಗಿರಿಧರ್, ಪಿ. ಪಾಲಣ್ಣ, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಎಸ್. ಸತ್ಯನಾರಾಯಣ ಉಪಸ್ಥಿತರಿದ್ದರು. ಕಾಳಿದಾಸ ಕಾರ್ಯಕ್ರಮ ನಿರೂಪಿಸಿ, ನಾಗಳ್ಳಿ ರಮೇಶ್ ವಂದಿಸಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular