HomeKarnatakaಶಿವಮೊಗ್ಗದಲ್ಲಿ ಅಡಿಕೆ ಬೇಯಿಸುವಾಗ ದುರಂತ: ಹಂಡೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ದಾರುಣ ಸಾವು

ಶಿವಮೊಗ್ಗದಲ್ಲಿ ಅಡಿಕೆ ಬೇಯಿಸುವಾಗ ದುರಂತ: ಹಂಡೆಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ದಾರುಣ ಸಾವು

ಶಿವಮೊಗ್ಗ: ಅಡಿಕೆ ಬೇಯಿಸುವಾಗ ಎಷ್ಟೇ ಮುಂಜಾಗೃತೆ ವಹಿಸಿದರೂ ಕಡಿಮೆಯೆ. ವ್ಯಕ್ತಿಯೊಬ್ಬರು ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು, ಮೃತಪಾಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಈ ದುರಂತ ಸಂಭವಿಸಿದೆ. ಜೇನು ಕುಮಾರ್ ಮೃತ ದುರ್ದೈವಿ. ಸೆಪ್ಟೆಂಬರ್.8 ರಂದು ಜೇನು ಕುಮಾರ್ ತಮ್ಮ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಅಡಿಕೆ ಹೊರತೆಗೆದು, ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆ ಏರಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹಂಡೆಯೊಳಗೆ ಮುಗ್ಗರಿಸಿ ಬಿದ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳದಲ್ಲಿದ್ದ ಇತರ ಮೂವರು ಅವರನ್ನು ತಕ್ಷಣ ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಜೇನು ಕುಮಾರ್‌ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಜೇನು ಕುಮಾರ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಜೇನು ಕುಮಾರ್ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಬಿಜೆಪಿ ಮಾಜಿ ಶಾಸಕ ನರೇಂದ್ರ ಪವಾರ್ ವಿರುದ್ಧ ಎಫ್ಐಆರ್ ದಾಖಲು

ಮುಂಬೈ:ವಿವಾಹಿತ ಮಹಿಳೆಗೆ ಚಾಕು ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಹಾಗೂ ವಜಾಗೊಂಡ ಪೊಲೀಸ್ ಸಿಬ್ಬಂದಿಯೋರ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

22 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ ಸದಾನಂದ ದಾತೆ ಅವರ ನಿರ್ದೇಶನದ ಮೇರೆಗೆ, ಕಲ್ಯಾಣ್ ಪಶ್ಚಿಮ ಕ್ಷೇತ್ರದ ಮಾಜಿ ಶಾಸಕ ನರೇಂದ್ರ ಪವಾರ್ ಮತ್ತು ಪೊಲೀಸ್ ಸಿಬ್ಬಂದಿ ಶೈಲೇಶ್ ಪಾಟೀಲ್ ವಿರುದ್ಧ ಪಢ್ಘಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತೆ ತನ್ನ ಪತಿಯೊಂದಿಗೆ ಕಲ್ಯಾಣ್‌ನಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ವಿವಾದವೊಂದನ್ನು ಬಗೆಹರಿಸಲು ಸಹಾಯ ಮಾಡುವಂತೆ ಮಾಜಿ ಶಾಸಕ ನರೇಂದ್ರ ಪವಾರ್ ಅವರನ್ನು ಸಂತ್ರಸ್ತೆ ಸಂಪರ್ಕಿಸಿದ್ದರು. ಸೆಪ್ಟೆಂಬರ್ 13ರಂದು ಸಹಾಯ ಮಾಡುವ ನೆಪದಲ್ಲಿ ನರೇಂದ್ರ ಪವಾರ್ ಆಕೆಯನ್ನು ಕಲ್ಯಾಣ್‌ನಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಭಿವಂಡಿ ತಾಲೂಕಿನ ಬಾಪಗಾಂವ್ ಗ್ರಾಮದ ಫಾರ್ಮ್‌ ಹೌಸ್‌ಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಶೈಲೇಶ್ ಪಾಟೀಲ್ ಚಾಕು ತೋರಿಸಿ ಬೆದರಿಸಿದ್ದಾನೆ. ಮೊದಲು ಬಲವಂತವಾಗಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ನರೇಂದ್ರ ಪವಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಪವಾರ್ ಬಳಿಕ ಶೈಲೇಶ್ ಪಾಟೀಲ್ ತನ್ನ ಮೇಲೆ ದೌರ್ಜನ್ಯವೆಸಗಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ.

ಈ ಘಟನೆಗಳಿಂದ ಶಾಕ್ ಗೊಳಗಾದ ಸಂತ್ರಸ್ತೆ ಕಾಂಗ್ರೆಸ್ ಕಾರ್ಪೊರೇಟರ್ ಕಾಂಚನ್ ಕುಲಕರ್ಣಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಕಾಂಚನ್ ಕುಲಕರ್ಣಿ ಸಂತ್ರೆಸ್ತೆಯೊಂದಿಗೆ ಬುಧವಾರ ತಡರಾತ್ರಿ ಪಡ್ಘಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ದೂರು ಹಿನ್ನೆಲೆಯಲ್ಲಿ ನರೇಂದ್ರ ಪವಾರ್ ಮತ್ತುಶೈಲೇಶ್ ಪಾಟೀಲ್ ವಿರುದ್ಧ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಚನ್ ಕುಲ್ಕರ್ಣಿ, ಈ ಹಿಂದೆಯೂ ಶೈಲೇಶ್ ಪಾಟೀಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular