HomeKarnatakaಡಿಕೆಶಿ ರೌಡಿಸಂಗೆ ಹೆದರಿ ಡಿಕೆ ಸರ್ಕಾರ 100 ದಿನ ಪೂರೈಸಿದ್ದಕ್ಕೆ ಬಿಗ್‌ಬಾಸ್ ವೇದಿಕೆಯಲ್ಲಿ ಶುಭಾಶಯ ತಿಳಿಸಿದ...

ಡಿಕೆಶಿ ರೌಡಿಸಂಗೆ ಹೆದರಿ ಡಿಕೆ ಸರ್ಕಾರ 100 ದಿನ ಪೂರೈಸಿದ್ದಕ್ಕೆ ಬಿಗ್‌ಬಾಸ್ ವೇದಿಕೆಯಲ್ಲಿ ಶುಭಾಶಯ ತಿಳಿಸಿದ ಕಿಚ್ಚ ಎಂದ ಕುಮಾರಣ್ಣನ ಹುಡುಗ್ರು; ವಿಡಿಯೊ

ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ ಬಳಿಕ ಇದೀಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಗದ್ದುಗೆ ಏರಿದ್ದು, ತಮ್ಮ ಆಡಳಿತ ನಡೆಸುತ್ತಿದ್ದಾರೆ.

ಬೂತ್ ಹಂತದಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸಿ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಟವಾಗುವಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿದ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಕೂಗು ಹಲವು ದಿನಗಳ ಹಿಂದಿನಿಂದಲೇ ಇದ್ದು, ಕೊನೆಗೂ ಹಲವು ಏರಿಳಿತಗಳ ಬಳಿಕ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಲಭಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಹಲವು ದಿನಗಳ ಕನಸನ್ನು ನನಸು ಮಾಡಿಕೊಂಡ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನೂರು ದಿನಗಳು ಕಳೆದಿದ್ದು, ಈ ಸಲುವಾಗಿ ಕಾಂಗ್ರೆಸ್ ವಿಭಿನ್ನ ಜಾಹೀರಾತುಗಳ ಮೂಲಕ ಪ್ರಚಾರವನ್ನು ಮಾಡಿತ್ತು. ಅಲ್ಲದೇ ಕಾಂಗ್ರೆಸ್ ಹಾಗೂ ಡಿಕೆ ಶಿವಕುಮಾರ್ ಹಿಂಬಾಲಕರು ಡಿಕೆ ಸರ್ಕಾರದ ನೂರು ದಿನಗಳ ಶುಭ ಕೋರಿದರು. ಇನ್ನು ವಿವಿಧ ಇಲಾಖೆಗಳು ಈ ಅವಧಿಯಲ್ಲಾದ ಸಾಧನೆಗಳ ಕುರಿತು ಪೋಸ್ಟರ್‌ಗಳನ್ನು ಪ್ರಕಟಿಸಿ ಸಂಭ್ರಮಿಸಿದವು.

ಅಲ್ಲದೇ ಬಿಗ್‌ಬಾಸ್ ಕನ್ನಡ ಸೀಸನ್ 13ರ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ಸಹ ಈ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಮುಂದಾಳತ್ವ ಎಷ್ಟು ಮುಖ್ಯ ಎಂದು ಮಾತನಾಡಿದ ಕಿಚ್ಚ ಸುದೀಪ್ ಡಿಕೆ ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸಿ ಅವರ ಸರ್ಕಾರ ನೂರು ದಿನಗಳನ್ನು ಪೂರೈಸಿದ್ದು, ಈ ನೂರು ದಿನಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ ಎಂದು ಹಾಡಿಹೊಗಳಿದರು.

ಆದರೆ ಈ ವಿಡಿಯೊವನ್ನು ಇಟ್ಟುಕೊಂಡು ಕುಮಾರಸ್ವಾಮಿ ಅಭಿಮಾನಿ ಪೇಜ್ ಆದ ‘ಕುಮಾರಸ್ವಾಮಿ ಫಾರ್ ಸಿಎಂ’ನಲ್ಲಿ ಟ್ರೋಲ್ ಮಾಡಲಾಗಿದೆ. ಈ ಹಿಂದೆ ರಾಜ್ಯ ಪ್ರಶಸ್ತಿ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ನಟ ಹಾಗೂ ನಟಿಯರೇ ಗೈರಾಗಿದ್ದನ್ನು ಕಂಡು ವೇದಿಕೆ ಮೇಲೆ ಚಿತ್ರರಂಗದವರ ನಟ್ಟು, ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಡಿಕೆಶಿ ನೀಡಿದ್ದ ಹೇಳಿಕೆಯ ವಿಡಿಯೊವನ್ನು ಬಳಸಿ ಇದೇನಾ ನಟ್ಟು ಬೋಲ್ಟು ಟೈಟ್ ಮಾಡುವುದು ಎಂದರೆ ಎಂದು ಕಿಚ್ಚ ಸುದೀಪ್ ಡಿಕೆ ಸರ್ಕಾರಕ್ಕೆ ಶುಭ ಕೋರಿದ ವಿಡಿಯೊವನ್ನು ಎಡಿಟ್ ಮಾಡಿ ಹಾಕಿಕೊಂಡಿದೆ.

ಇನ್ನು ಈ ಟ್ರೋಲ್ ವಿಡಿಯೊನ ಕೊನೆಯಲ್ಲಿ ಕಳೆದ ಹದಿಮೂರು ವರ್ಷಗಳಲ್ಲಿ ನಾಲ್ಕು ಸಿಎಂಗಳು ಬಂದು ಹೋದರು, ಆದರೆ ಅವರು ನೂರು ದಿನ ಪೂರೈಸಿದಾಗ ಯಾರೂ ಅವರ ಬಗ್ಗೆ ಮಾತನಾಡಲಿಲ್ಲ, ಹಾಗಾದ್ರೆ ಆ ವೇದಿಕೆ ಮೇಲಿನ ಶುಭಾಶಯದ ಹಿಂದೆ ಇರುವುದು ನೈಜ ಒಲವೋ ಅಥವಾ ಭಯವೋ, ರೌಡಿಸಂ ರಾಜಕೀಯ ಮುಂದುವರಿಸುತ್ತಿದ್ದಾರಾ ಡಿಕೆ ಶಿವಕುಮಾರ್? ಎಂದು ಉಲ್ಲೇಖಿಸಲಾಗಿದೆ. ಸದ್ಯ ಈ ವಿಡಿಯೊ ಎಕ್ಸ್ ವೇದಿಕೆಯಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular