HomeLatest Newsನಮ್ಮ ಹಾದಿಗಳು ಬೇರೆಯಾಗಿವೆ: ನಿಶ್ಚಿತಾರ್ಥ ಮುರಿದುಕೊಂಡ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ!

ನಮ್ಮ ಹಾದಿಗಳು ಬೇರೆಯಾಗಿವೆ: ನಿಶ್ಚಿತಾರ್ಥ ಮುರಿದುಕೊಂಡ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ!

ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಪೃಥ್ವಿ ಶಾ ಮತ್ತು ಅವರ ಭಾವಿ ಪತ್ನಿ (ಫಿಯಾನ್ಸೆ) ಆಕೃತಿ ಅಗರ್ವಾಲ್ ಪರಸ್ಪರ ಒಪ್ಪಂದದೊಂದಿಗೆ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ. ನಿಶ್ಚಿತಾರ್ಥ ನಡೆದ ಕೆಲವೇ ಕೆಲವು ತಿಂಗಳುಗಳಲ್ಲಿ ಈ ಜೋಡಿ ಬೇರೆಯಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಿರುವ ಆಕೃತಿ ಅಗರ್ವಾಲ್, “ಅತ್ಯಂತ ಭಾರವಾದ ಹೃದಯದಿಂದ ನಾನು ಮತ್ತು ನನ್ನ ಫಿಯಾನ್ಸೆ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸುತ್ತಿದ್ದೇನೆ. ನಮ್ಮಿಬ್ಬರ ಭವಿಷ್ಯದ ಗುರಿಗಳು, ಜವಾಬ್ದಾರಿಗಳು ಹಾಗೂ ಜೀವನದ ಸಂದರ್ಭಗಳು ವಿಭಿನ್ನವಾಗಿವೆ. ನಾವಿಬ್ಬರೂ ಇಂದಿಗೂ ಪರಸ್ಪರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದೇವೆ, ಆದರೆ ನಮ್ಮ ಮುಂದಿನ ಜೀವನದ ಹಾದಿಗಳು ಒಂದಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಮಾರ್ಚ್ 2026ರಲ್ಲಿ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ತಮ್ಮ ನಿಶ್ಚಿತಾರ್ಥದ ಕ್ಷಣಗಳ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಆದರೆ ಕಳೆದ ಜುಲೈ ತಿಂಗಳಿನಲ್ಲಿ ಆಕೃತಿ ಅವರು ಹಂಚಿಕೊಂಡಿದ್ದ ಕೆಲವು ಮಾರ್ಮಿಕ ಪೋಸ್ಟ್‌ಗಳು ಈ ಜೋಡಿಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿದ್ದವು. ಇದೀಗ ಬಂದಿರುವ ಈ ಅಧಿಕೃತ ಹೇಳಿಕೆಯು ಆ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಮುಂದಿನ ಜೀವನದ ಪಯಣದಲ್ಲಿ ಇಬ್ಬರಿಗೂ ಒಳಿತಾಗಲಿ ಹಾಗೂ ಶಾಂತಿ ಸಿಗಲಿ ಎಂದು ಹಾರೈಸಿರುವ ಆಕೃತಿ, ಈ ಕಠಿಣ ಸಮಯದಲ್ಲಿ ತಮ್ಮ ಖಾಸಗಿತನಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅಲ್ಲದೆ, ನಮ್ಮ ಈ ವೈಯಕ್ತಿಕ ನಿರ್ಧಾರದ ಹಿಂದೆ ಇರುವ ಕಾರಣಗಳ ಬಗ್ಗೆ ಅನಗತ್ಯವಾಗಿ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಮಾಧ್ಯಮಗಳು ಹಾಗೂ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular