HomeEntertainmentಹಾಲಿವುಡ್ ಅಂಗಳಕ್ಕೆ ವಿಜಯ್ ಸೇತುಪತಿ ʼಮಹಾರಾಜʼ ; ಇಂಗ್ಲಿಷ್‌ನಲ್ಲಿ ಸಿದ್ಧವಾಗಲಿದೆ ತಮಿಳಿನ ಬ್ಲಾಕ್‌ಬಸ್ಟರ್ ಮೂವಿ !

ಹಾಲಿವುಡ್ ಅಂಗಳಕ್ಕೆ ವಿಜಯ್ ಸೇತುಪತಿ ʼಮಹಾರಾಜʼ ; ಇಂಗ್ಲಿಷ್‌ನಲ್ಲಿ ಸಿದ್ಧವಾಗಲಿದೆ ತಮಿಳಿನ ಬ್ಲಾಕ್‌ಬಸ್ಟರ್ ಮೂವಿ !

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಅವರ ಅಭಿನಯದ 50 ನೇ ಚಿತ್ರವಾಗಿ ಹೊರಬಂದು ಭಾರಿ ಯಶಸ್ಸು ಕಂಡಿದ್ದ ಕ್ರೈಮ್ ಥ್ರಿಲ್ಲರ್ ಮಹಾರಾಜ ಇದೀಗ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಜಾಗತಿಕ ಮಟ್ಟದಲ್ಲಿ ಚಿತ್ರಕ್ಕೆ ಸಿಕ್ಕ ಅಪಾರ ಮೆಚ್ಚುಗೆ, ಅದರಲ್ಲೂ ಮುಖ್ಯವಾಗಿ ಚೀನಾ ಮಾರುಕಟ್ಟೆಯಲ್ಲಿ ಗಳಿಸಿದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಈ ಚಿತ್ರದ ಇಂಗ್ಲಿಷ್ ರೀಮೇಕಿಂಗ್ ಹಕ್ಕುಗಳನ್ನು ಹಾಲಿವುಡ್‌ನ ಪ್ರಮುಖ ಸಂಸ್ಥೆಯೊಂದು ಪಡೆದುಕೊಂಡಿದೆ.

ಚಿತ್ರದ ನಿರ್ಮಾಪಕ ಸುಧನ್ ಸುಂದರಂ ಈ ಮಹತ್ವದ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಹಾಲಿವುಡ್‌ನ ಖ್ಯಾತ ತಾರಾಗಣದೊಂದಿಗೆ ಮುಂಬರುವ ವರ್ಷದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಚೀನಾದ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ನೆಟ್‌ಫ್ಲಿಕ್ಸ್ ಜಾಗತಿಕ ವೇದಿಕೆಯಲ್ಲೂ ಟಾಪ್ ಟ್ರೆಂಡಿಂಗ್‌ನಲ್ಲಿದ್ದ ಈ ಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರ ಮಾರುಕಟ್ಟೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಚೀನಾದ ಬಾಕ್ಸ್ ಆಫೀಸ್ ಒಂದರಲ್ಲೇ ಈ ಸಿನಿಮಾ ಸುಮಾರು 91.65 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ವಿಶ್ವಾದ್ಯಂತ ಒಟ್ಟು 190 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹಿಸಿ ಚೀನಾದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಹಾಲಿವುಡ್ ಅವತರಣಿಕೆಯಲ್ಲಿ ಮುಖ್ಯ ಭೂಮಿಕೆಯನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಸದ್ಯ ಗರಿಗೆದರಿದೆ. ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಹಾಲಿವುಡ್ ನಟ ಮ್ಯಾಥ್ಯೂ ಮೆಕ್‌ಕಾನಹೇ ಅವರು ವಿಜಯ್ ಸೇತುಪತಿ ನಿರ್ವಹಿಸಿದ್ದ ಪಾತ್ರಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕರು, ಮ್ಯಾಥ್ಯೂ ಮೆಕ್‌ಕಾನಹೇ ಅವರೊಂದಿಗೆ ಪ್ರಾಥಮಿಕ ಮಾತುಕತೆಗಳು ನಡೆಯುತ್ತಿರಬಹುದು, ಆದರೆ ಅಂತಿಮ ನಿರ್ಧಾರವನ್ನು ಹಾಲಿವುಡ್‌ನ ಸಂಬಂಧಪಟ್ಟ ಏಜೆನ್ಸಿ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿತಿಲನ್ ಸಾಮಿನಾಥನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಹಾರಾಜ ಚಿತ್ರವು ಕಳೆದುಹೋದ ಕಸದ ಬುಟ್ಟಿಯೊಂದನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ಬರುವ ಕ್ಷೌರಿಕನ ಸುತ್ತಲಿನ ಕಥೆಯನ್ನು ಹೊಂದಿತ್ತು. ಮೇಲ್ನೋಟಕ್ಕೆ ತೀರಾ ಸಾಮಾನ್ಯ ದೂರಿನಂತೆ ಕಂಡರೂ, ಆಳಕ್ಕೆ ಇಳಿದಂತೆ ಕಥೆಯ ಹಿಂದಿನ ಗಂಭೀರ ಮತ್ತು ಕರಾಳ ತಿರುವುಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದವು. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಖಳನಾಯಕನಾಗಿ ನಟಿಸಿದ್ದು, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿತ್ತು.

ಇದು ಕೇವಲ ಡಬ್ಬಿಂಗ್ ಆವೃತ್ತಿಯಾಗಿರದೆ, ಅಮೆರಿಕದ ಪರಿಸರ ಮತ್ತು ಸಂಸ್ಕೃತಿಗೆ ತಕ್ಕಂತೆ ಸಂಪೂರ್ಣ ಹೊಸ ಚಿತ್ರಕಥೆಯೊಂದಿಗೆ ನೂತನ ತಾರಾಗಣವನ್ನು ಒಳಗೊಂಡು ಹಾಲಿವುಡ್‌ನಲ್ಲಿ ಪ್ರತ್ಯೇಕವಾಗಿಯೇ ನಿರ್ಮಾಣವಾಗಲಿದೆ. ತಮಿಳು ಚಿತ್ರವೊಂದು ಹಾಲಿವುಡ್ ಭಾಷೆಗೆ ಅಧಿಕೃತವಾಗಿ ರೂಪಾಂತರಗೊಳ್ಳುತ್ತಿರುವುದು ಭಾರತೀಯ ಚಿತ್ರರಂಗದ ಮಟ್ಟಿಗೆ ಮತ್ತೊಂದು ಅಪರೂಪದ ಮೈಲಿಗಲ್ಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular