HomeBusinessಯುಪಿಐ ಪಾವತಿಗಳ ಮೇಲೆ ಶುಲ್ಕ: ವರ್ತಕರ ಆಕ್ರೋಶ, ಇನ್ನು ಡಿಜಿಟಲ್ ಪಾವತಿ ಸ್ಥಗಿತಗೊಳಿಸಿ ನಗದು ಮಾತ್ರ...

ಯುಪಿಐ ಪಾವತಿಗಳ ಮೇಲೆ ಶುಲ್ಕ: ವರ್ತಕರ ಆಕ್ರೋಶ, ಇನ್ನು ಡಿಜಿಟಲ್ ಪಾವತಿ ಸ್ಥಗಿತಗೊಳಿಸಿ ನಗದು ಮಾತ್ರ ಸ್ವೀಕರಿಸಲು ಪೆಟ್ರೋಲ್ ಪಂಪ್ ಮಾಲೀಕರ ನಿರ್ಧಾರ

ನವದೆಹಲಿ: 2,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ 0.4% ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸುತ್ತಿರುವ ನಡುವೆಯೇ ವರ್ತಕರು, ಪೆಟ್ರೋಲ್ ಪಂಪ್ ಮಾಲೀಕರಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ.

2000 ರೂ. ಗಿಂತ ಹೆಚ್ಚಿನ ಯೋಗ್ಯ ವ್ಯವಹಾರಗಳ ಮೇಲೆ ವಿಧಿಸುವ ಶೇಕಡ 0.4 ರಷ್ಟು ಶುಲ್ಕದಿಂದ ಪಾರಾಗಲು ಮತ್ತೆ ನಗದು ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ದೆಹಲಿ ವರ್ತಕರ ಸಂಘಗಳು ನಿರ್ಧಾರ ಕೈಗೊಂಡಿವೆ.

ಕಮಲಾನಗರ ಮಾರುಕಟ್ಟೆ ಸಂಘದ ಅಧ್ಯಕ್ಷ ನಿತಿನ್ ಗುಪ್ತಾ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಇದುವರೆಗೆ ನಾವು ಸರ್ಕಾರದ ಡಿಜಿಟಲ್ ಪಾವತಿ ನೀತಿ ಬೆಂಬಲಿಸಿ ಯುಪಿಐ ವ್ಯವಹಾರ ಮಾಡುತ್ತಿದ್ದೆವು. ಈಗ ಯುಪಿಐ ಪಾವತಿ ಮೇಲೆಯೂ ಹೆಚ್ಚುವರಿ ಶುಲ್ಕ ವಿಧಿಸಿದರೆ ನಾವು ಮತ್ತೆ ನಗದು ವ್ಯವಹಾರವನ್ನೇ ಉತ್ತೇಜಿಸುತ್ತೇವೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ನಾವು ವಹಿವಾಟು ಶುಲ್ಕ ಮತ್ತು ಶೇಕಡ 18ರಷ್ಟು ಜಿಎಸ್​ಟಿ ಪಾವತಿಸುತಿದ್ದೇವೆ. ಹೀಗಿರುವಾಗ ಯುಪಿಐ ಮೇಲೆಯೂ ಏಕೆ ಹೆಚ್ಚುವರಿ ಶುಲ್ಕ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಸಗಟು ವ್ಯಾಪಾರಿಗಳಿಗೆ ಪಾವತಿ ಮಾಡಲು ಚೆಕ್ ಮತ್ತು ಬ್ಯಾಂಕಿಂಗ್ ಮಾರ್ಗ ಬಳಸಲು ಚಿಂತನೆ ನಡೆಸುವುದಾಗಿ ತಿಳಿಸಲಾಗಿದೆ.

ಡಿಜಿಟಲ್ ಪಾವತಿ ಸ್ಥಗಿತ

ಯುಪಿಐ ಪಾವತಿಗಳ ಮೇಲೆ ಶುಲ್ಕವಿಧಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಪೆಟ್ರೋಲ್ ಪಂಪ್ ಮಾಲೀಕರು ಡಿಜಿಟಲ್ ಪಾವತಿ ಸ್ಥಗಿತಗೊಳಿಸಿ ಕೇವಲ ನಗದು ಮಾತ್ರ ಸ್ವೀಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತೈಲ ಮಾರಾಟ ಕಂಪನಿಗಳು ನಿಗದಿಪಡಿಸುವ ಕಮಿಷನ್ ಲಾಭವು ಅತ್ಯಂತ ಕಡಿಮೆಯಾಗಿದೆ. ಪ್ರತಿ ಲೀಟರ್ ಗೆ ಸುಮಾರು 2.40 ರಿಂದ 3.40 ರೂ. ಇದೆ. ಹೀಗಿರುವಾಗ ಪ್ರತಿ 2,000 ರೂ. ಗಿಂತ ಹೆಚ್ಚಿನ ಪಾವತಿಗೆ 5 ರೂ. ಶುಲ್ಕ ವಿಧಿಸಿದರೆ ತಮಗೆ ಆರ್ಥಿಕ ನಷ್ಟವಾಗುತ್ತದೆ ಎಂದು ಪೆಟ್ರೋಲ್ ಪಂಪ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಭಾರತೀಯ ಪೆಟ್ರೋಲಿಯಂ ಡೀಲರ್ ಗಳ ಸಂಘ, ಅಖಿಲ ಕರ್ನಾಟಕ ಪೆಟ್ರೋಲಿಯಂ ವರ್ತಕರ ಒಕ್ಕೂಟ ಈ ಕುರಿತಾಗಿ ಸರ್ಕಾರ ಮತ್ತು ತೈಲ ಕಂಪನಿಗಳಿಗೆ ಪತ್ರ ಬರೆದು ಪೆಟ್ರೋಲ್ ಪಂಪ್ ಮಳೆ ಗಳಿಗೆ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡುವಂತೆ ಆಗ್ರಹಿಸಿವೆ.

UPI ವರ್ಗಾವಣೆಗಳ ಮೇಲೆ 0.4% ಶುಲ್ಕ

ಅಕ್ಟೋಬರ್ 15 ರಿಂದ ವ್ಯಾಪಾರಿಗಳಿಗೆ(ಮರ್ಚೆಂಟ್‌ಗಳಿಗೆ) ಮಾಡುವ 2,000 ರೂ.ಗಿಂತ ಹೆಚ್ಚಿನ ಮೌಲ್ಯದ UPI ವರ್ಗಾವಣೆಗಳ ಮೇಲೆ 0.4% ಶುಲ್ಕ ವಿಧಿಸಲಾಗುವುದು ಎಂದು ಸರ್ಕಾರ ಮಂಗಳವಾರ ಘೋಷಿಸಿದೆ. ಅದೇ ಸಮಯದಲ್ಲಿ, ದೈನಂದಿನ ವ್ಯಕ್ತಿ-ವ್ಯಕ್ತಿ (person-to-person) ನಡುವಿನ ವಹಿವಾಟುಗಳು ಹಾಗೂ ಸಣ್ಣ ಪಾವತಿಗಳನ್ನು ಯಾವುದೇ ಶುಲ್ಕದಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

“UPI ಮೂಲಕ ಇಂತಹ ಪಾವತಿಗಳನ್ನು ಮಾಡುವಾಗ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ,” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

“MDR ಎಂಬುದು ವ್ಯಾಪಾರಿ ಪಾವತಿ ವ್ಯವಸ್ಥೆಯ (ecosystem) ಒಳಗಿನ ಶುಲ್ಕವಾಗಿದೆ. ಇದು UPI ಪಾವತಿಗಳನ್ನು ಮಾಡುವ ಗ್ರಾಹಕರ ಮೇಲಿನ ಶುಲ್ಕವಲ್ಲ,” ಎಂದು ಅದು ಹೇಳಿದೆ.

ಅಲ್ಲದೆ, ವ್ಯಕ್ತಿಗಳು “ಅನಿಯಮಿತ ಉಚಿತ ಬಳಕೆಯನ್ನು” ಮುಂದುವರಿಸಲಿದ್ದಾರೆ; ಉಚಿತ UPI ವಹಿವಾಟುಗಳ ಮೇಲೆ ಯಾವುದೇ ಮಾಸಿಕ ಮಿತಿಗಳು, ವಹಿವಾಟಿನ ಪ್ರಮಾಣದ ನಿರ್ಬಂಧಗಳು ಅಥವಾ ಹಂತ-ಆಧಾರಿತ ಮಿತಿಗಳು ಇರುವುದಿಲ್ಲ ಎಂದು ಅದು ತಿಳಿಸಿದೆ.

ಎಚ್ಚರಿಕೆಯಿಂದ ರೂಪಿಸಲಾದ ಈ ಕ್ರಮವು ವಿಶ್ವದ ಅತಿದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆಯ ಒಂದು ಯುಗದ ಅಂತ್ಯವನ್ನು ಸೂಚಿಸಿದೆ.

ಹೊಸ ಚೌಕಟ್ಟಿನ ಅಡಿಯಲ್ಲಿ, UPI QR ಕೋಡ್‌ಗಳ ಮೂಲಕ ತಿಂಗಳಿಗೆ 1 ಲಕ್ಷ ರೂ.ವರೆಗೆ ಆದಾಯ ಗಳಿಸುವ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿಯು ಒಟ್ಟು ವ್ಯಾಪಾರಿ ವಹಿವಾಟುಗಳಲ್ಲಿ ಶೇಕಡಾ 96 ರಷ್ಟನ್ನು ಒಳಗೊಂಡಿದೆ ಎಂದು ಸರ್ಕಾರ ಹೇಳಿದೆ.

ಹೊಸ MDR ಶುಲ್ಕವನ್ನು ಗ್ರಾಹಕರ ಮೇಲೆ ಹೊರಿಸುವಂತಿಲ್ಲ. ಒಟ್ಟು UPI ವಹಿವಾಟುಗಳ ಸಂಖ್ಯೆಯಲ್ಲಿ ಶೇಕಡಾ 37 ರಷ್ಟು ಮತ್ತು ಮೌಲ್ಯದಲ್ಲಿ ಶೇಕಡಾ 70 ರಷ್ಟನ್ನು ಹೊಂದಿರುವ ‘ವ್ಯಕ್ತಿಯಿಂದ ವ್ಯಕ್ತಿಗೆ’ (P2P) ನಡೆಯುವ UPI ವರ್ಗಾವಣೆಗಳು ಈ ಶುಲ್ಕದ ವ್ಯಾಪ್ತಿಯಿಂದ ಹೊರತಾಗಿರುತ್ತವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular