ಬೆಂಗಳೂರು: ಬಿ ಖಾತಾ ಆಸ್ತಿಗಳನ್ನು ನಿಯಮಾನುಸಾರ ಎ ಖಾತಾ ಆಗಿ ಬದಲಾವಣೆ ಮಾಡಿಕೊಳ್ಳಲು ಗಡುವು ವಿಸ್ತರಿಸಲಾಗಿದೆ. ಬಿ ಖಾತಾ ಆಸ್ತಿ ಎ ಖಾತಾ ಪರಿವರ್ತಿಸಿಕೊಳ್ಳಲು ನಿಗದಿಪಡಿಸಿದ್ದ ವಿಶೇಷ ಯೋಜನೆ ಗಡುವನ್ನು 2027ರ ಡಿಸೆಂಬರ್ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಅರ್ಹ ಆಸ್ತಿ ಮಾಲೀಕರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಅನೇಕ ವರ್ಷಗಳಿಂದ ಬಿ ಖಾತಾ ಸಮಸ್ಯೆಯಿಂದಾಗಿ ಬ್ಯಾಂಕ್ ಸಾಲ, ಆಸ್ತಿ ಅಡಮಾನ, ಮಾರಾಟ, ವರ್ಗಾವಣೆ ಸೇರಿ ವಿವಿಧ ವ್ಯವಹಾರಗಳಿಗೆ ತೊಂದರೆ ಉಂಟಾಗಿತ್ತು. ಇಂತಹ ತೊಂದರೆ ಎದುರಿಸುತ್ತಿದ್ದವರಿಗೆ ಅನುಕೂಲ ಮಾಡಿಕೊಡಲಾಗಿದೆ.
ಅರ್ಹತಾ ಮಾನದಂಡಗಳನ್ನು ಪೂರೈಸುವವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಎ ಖಾತಾಗೆ ಬಿ ಖಾತಾ ಆಸ್ತಿಗಳನ್ನು ಪರಿವರ್ತಿಸಿಕೊಳ್ಳಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಿಷ್ಠ 1000 ಚ. ಮೀ. ವಿಸ್ತೀರ್ಣದ ಆಸ್ತಿಗಳಿಗೆ ಅವಕಾಶವಿದೆ. ಆಸ್ತಿ ಕೃಷಿಯೇತರ ಬಳಕೆಯಲ್ಲಿ ಇರಬೇಕು. ಇದರೊಂದಿಗೆ ಮಾಸ್ಟರ್ ಪ್ಲಾನ್ ವಲಯ ನಿಯಮಗಳು ಮತ್ತು ಸಂಬಂಧಿತ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳಿಗೆ ಹೊಂದಾಣಿಕೆಯಾಗಿರಬೇಕು.
2024ರ ಸೆಪ್ಟಂಬರ್ 10 ರಂದು ಅಥವಾ ಅದಕ್ಕೂ ಮೊದಲು ಬೇಕಾದ ಹೊಂದಿರಬೇಕು. 2025ರ ಏಪ್ರಿಲ್ 7ರಂದು ಅಥವಾ ಅದಕ್ಕೂ ಮೊದಲು ಬಿ ಖಾತಾ ದಾಖಲಾಗಿರಬೇಕು. ಕೆಲವು ಖಾತಾ ರಹಿತ ಆಸ್ತಿಗಳಿಗೂ ನಿಗದಿತ ಷರತ್ತುಗಳಡಿ ಎ ಖಾತಾ ಪರಿವರ್ತನೆಗೆ ಅವಕಾಶವಿದೆ. ಹಿಂದಿನ ನೋಂದಾಯಿತ ವಹಿವಾಟು ಸೇರಿ ದಾಖಲೆ ಪರಿಶೀಲಿಸಲಾಗುವುದು. ಆರ್.ಟಿ.ಸಿ., ಮ್ಯುಟೇಶನ್, ಪಹಣಿ ಹಕ್ಕು ಬಾಧ್ಯತೆ ದಾಖಲೆಗಳನ್ನು ಡಿಜಿಟಲ್ ಮೂಲಕ ಪರಿಶೀಲಿಸಲಾಗುವುದು. ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಲಿದ್ದಾರೆ. 2027ರ ಡಿಸೆಂಬರ್ 31ರ ನಡುವಿನೊಳಗೆ ಆಸ್ತಿ ಮಾಲೀಕರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಗಣೇಶ ಹಬ್ಬ ಆಚರಣೆ ಪೂರ್ಣಗೊಳ್ಳುವವರೆಗೆ ಡಿಜೆ ಸಿಸ್ಟಂ ಬಳಕೆ ನಿಷೇಧ
ದಾವಣಗೆರೆ: ಜಿಲ್ಲೆಯಾದ್ಯಂತ ಕಾನೂನು ಸುವ್ಯವ್ಥೆಗೆ ಧಕ್ಕೆಯುಂಟಾಗದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಸೌಹರ್ದತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 14 ರಿಂದ ಪ್ರತಿಷ್ಠಾಪನೆಯಾಗುವ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ ಹಬ್ಬದ ಮೆರವಣಿಗೆಯಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಶಬ್ದಗಳನ್ನು ಹೊರಸೂಸುವ ಡಿ.ಜಿ ಸಿಸ್ಟಂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.
ಡಿಜೆ ಸಿಸ್ಟಂ ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ , ವಯಸ್ಕರಿಗೆ, ಹೃದಯ ಸಂಬಂಧಿತ ಖಾಯಿಲೆ ಇರುವವರಿಗೆ, ನವಜಾತ ಶಿಶುಗಳಿಗೆ ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ Noise Pollution (Regulation & Control) Rule-2000 ನಿಯಮದನುಸಾರ ಶಬ್ದ ಮಾಲಿನ್ಯದ ಮಾನದಂಡಗಳನ್ನಯ ನಿಷೇಧಿಸಿದೆ.
ಶಬ್ದ ಮಾಲಿನ್ಯದ ಮಾನದಂಡಗಳನ್ನಯ ಶಬ್ದದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿ ಅನುಮತಿಯನ್ನು ನೀಡಬಹುದು. ಇತರೆ ಜಿಲ್ಲೆಗಳಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಡಿ.ಜೆ ಸಿಸ್ಟಂ ತಂದು ಜಿಲ್ಲೆಯಲ್ಲಿ ಬಳಸುವುದನ್ನು ನಿಷೇಧಿಸಿದೆ. ಊಪರ್ಸ್ ಮತ್ತು ಸಬ್ ಊಪರ್ಸ್ ಬಳಕೆ ಮಾಡಿಕೊಳ್ಳಬಹುದು, ಡಿ.ಜೆ ಗಳಲ್ಲಿ ಬಳಸಲಾಗುವ ಹೆಚ್ಚಿನ ಶಬ್ದ ಹೊರಸೂಸುವ Pressure Measurement ಹಾಗೂ ಇತರೆ ಹೆಚ್ಚಿನ ಶಬ್ದಗಳನ್ನು ವಿಶೇಷವಾಗಿ ಹೊರಸೂಸುವ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಾನದಂಡಗಳನ್ನು ಡಿ.ಜೆ ಬಳಕೆದಾರರು ಮತ್ತು ಆಯೋಜಕರು ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯವರು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದ್ದಾರೆ.

