HomeKarnatakaಪೊಲೀಸರ ನಿದ್ದೆಗೆಡಿಸಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್ ಅರೆಸ್ಟ್

ಪೊಲೀಸರ ನಿದ್ದೆಗೆಡಿಸಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್ ಅರೆಸ್ಟ್

ತುಮಕೂರು: ಪೊಲೀಸರ ನಿದ್ದೆಗೆಡಿಸಿದ್ದ ನಕಲಿ ನಕ್ಸಲ್ ಕನಿಕಲಬಂಡೆ ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಡಮಲ ಕುಂಟೆ ಬೆಟ್ಟದಲ್ಲಿ ಆರೋಪಿ ವೆಂಕಟೇಶನನ್ನು ಬಂಧಿಸಲಾಗಿದೆ.

ತುಮಕೂರು ಜಿಲ್ಲೆ ಪಾವಗಡ ಪಟ್ಟಣ ಸಮೀಪದ ಬೆಟ್ಟದಲ್ಲಿ ವೆಂಕಟೇಶ್ ನನ್ನು ಬಂಧಿಸಲಾಗಿದೆ. ಹಣಕ್ಕಾಗಿ ಬೇಡಿಕೆ, ಕಚ್ಚಾ ಬಾಂಬ್ ಸ್ಪೋಟದ ಬೆದರಿಕೆ ಪತ್ರ ಆರೋಪ ಹೊಂದಿರುವ ಕನಿಕಲಬಂಡೆ ವೆಂಕಟೇಶ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಚ್ಚಾ ಬಾಂಬ್ ಸ್ಪೋಟ, ನಕ್ಸಲ್ ಪಾರ್ಟಿ ಹೆಸರಲ್ಲಿ ಬೆದರಿಕೆ ಪತ್ರ ಕಳುಹಿಸಿದ್ದ. ಕನಿಕಲಬಂಡೆ ಗ್ರಾಮದ ರೈತರ ಪಂಪ್ ಸೆಟ್ ನಲ್ಲಿ ಆಗಸ್ಟ್ ನಲ್ಲಿ ಕಚ್ಚಾ ಬಾಂಬ್ ಸ್ಪೋಟಿಸಿ ಆತಂಕ ಮೂಡಿಸಿದ್ದ. ಘಟನೆ ನಡೆದ ನಂತರ ಕನಿಕಲಬಂಡೆ ವೆಂಕಟೇಶ್ ನಾಪತ್ತೆಯಾಗಿದ್ದ.

ಸ್ಪೋಟ ಪ್ರಕರಣದಲ್ಲಿ ವೆಂಕಟೇಶ್ ಪತ್ನಿ ಸಾವಿತ್ರಮ್ಮ, ವೆಂಕಟೇಶ್ ನ ಇಬ್ಬರು ಮಕ್ಕಳು ಸೇರಿ ಐದು ಜನರನ್ನು ಬಂಧಿಸಲಾಗಿತ್ತು, ಕಳೆದ ಒಂದು ತಿಂಗಳಿನಿಂದ ಆರೋಪಿ ವೆಂಕಟೇಶ್ ನಾಪತ್ತೆಯಾಗಿದ್ದ. ಪಾವಗಡ ಬೆಟ್ಟದಲ್ಲಿ ಅಡಗಿರುವ ಮಾಹಿತಿ ತಿಳಿದು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪಾವಗಡ ಬೆಟ್ಟದಲ್ಲಿ ನಕಲಿ ನಕ್ಸಲ್ ವೆಂಕಟೇಶ್ ಅಡಗಿದ್ದ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಲಾಗಿದೆ. ಬೆಟ್ಟದಲ್ಲಿ ಕಾರ್ಯಾಚರಣೆಯಲ್ಲಿ 250 ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದರು. ವೆಂಕಟೇಶ್ ನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಸದ್ಯ ಪಾವಗಡ ಟೌನ್ ಪೋಲಿಸರಿಂದ ವೆಂಕಟೇಶನ ವಿಚಾರಣೆ ನಡೆಸಲಾಗಿದೆ.

ಸೆ.18 ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಶಿವಮೊಗ್ಗ ಇವರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ದಿನಾಂಕ : 18-09-2026 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಅಪೋಲೋ ಫಾರ್ಮಸಿ ಪ್ರೈ. ಲಿ.’ ಹಾಗೂ ‘ಮುತ್ತೂಟ್ ಮೈಕ್ರೋ ಫಿನ್ ಪ್ರೈ.ಲಿ.’ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ.

ಶೈಕ್ಷಣಿಕ ಅರ್ಹತೆ: ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ 18 ರಿಂದ 35 ವರ್ಷ ವಯೋಮಾನದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು.ಉಚಿತ ಪ್ರವೇಶವಿದ್ದು,

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂದರ್ಶನವು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 9380663606/9108235132 ಮೂಲಕ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಭವಿಷ್ಯ ನಿಧಿ ವಿನಾಯಿತಿ ಸಕ್ರಮಕ್ಕೆ ‘ಅಮ್ನೆಸ್ಟಿ-2026’ ಯೋಜನೆ ಜಾರಿ: ಡಿಸೆಂಬರ್ 28 ಕೊನೆಯ ದಿನ

ಚಿತ್ರದುರ್ಗ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭವಿಷ್ಯ ನಿಧಿ(ಪಿಎಫ್) ಟ್ರಸ್ಟ್‍ಗಳ ಸಕ್ರಮಕ್ಕಾಗಿ ಮಹತ್ವದ ‘ಅಮ್ನೆಸ್ಟಿ-2026’ (AMNESTY-2026)  ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ. ವಿ. ಪ್ರವೀಣ್ ತಿಳಿಸಿದ್ದಾರೆ.

ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಮಾನ್ಯತೆ ಪಡೆದಿದ್ದರೂ, ನೌಕರರ ಭವಿಷ್ಯ ನಿಧಿ ಕಾಯ್ದೆಯಡಿ ಇದುವರೆಗೆ ಅಧಿಕೃತ ವಿನಾಯಿತಿ ಪಡೆಯದ ಸಂಸ್ಥೆಗಳ ಭವಿಷ್ಯ ನಿಧಿ ಟ್ರಸ್ಟ್‍ಗಳಿಗೆ ಇದು ಒಂದು ಬಾರಿಯ ಸುವರ್ಣಾವಕಾಶವಾಗಿದೆ.

ಈ ಯೋಜನೆಯು 2026ರ ಜುಲೈ 11ರಿಂದ ಆರಂಭವಾಗಿದ್ದು, 2026ರ ಡಿಸೆಂಬರ್ 28ರಂದು ಮುಕ್ತಾಯಗೊಳ್ಳಲಿದೆ. ಅಧಿಕೃತ ವಿನಾಯಿತಿ ಹೊಂದಿರದ ಪಿಎಫ್ ಟ್ರಸ್ಟ್‍ಗಳ ವಿನಾಯಿತಿ ಸ್ಥಿತಿಯನ್ನು ನಿಯಮಾನುಸಾರ ಕ್ರಮಬದ್ಧಗೊಳಿಸಲು ಕಲ್ಪಿಸಲಾಗಿರುವ ಏಕಕಾಲೀನ ಅವಕಾಶ ಇದಾಗಿದೆ.

ಈ ಯೋಜನೆಯ ನಿಯಮಾನುಸಾರ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ, ನಿಯಮಗಳ ಅಡಿಯಲ್ಲಿ ಹಿಂದಿನ ಅವಧಿಯಿಂದಲೇ ಅನ್ವಯವಾಗುವಂತೆ ವಿನಾಯಿತಿ ಮಂಜೂರು ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular