HomeKarnatakaತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲ ನಗರ ಎಂದು ನಾಮಕರಣ ಮಾಡುವಂತೆ ಮನವಿ

ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲ ನಗರ ಎಂದು ನಾಮಕರಣ ಮಾಡುವಂತೆ ಮನವಿ

ಬೆಂಗಳೂರು: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಎಂದು ನಾಮಕರಣ ಮಾಡುವಂತೆ ಬಿಸ್ಮಿಲ್ಲಾ ನಗರ ನಿವಾಸಿಗಳು ಬಿಎಂಆರ್ ಸಿ ಎಲ್ ಗೆ ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸ್ಮಿಲ್ಲಾ ನಗರ ಮುಸ್ಲಿಂ ನಿವಾಸಿಗಳು ಬಿಎಂಆರ್ ಸಿಎಲ್ ಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳಲಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ಮಾರ್ಗದ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಬಿಎಂಅರ್ ಸಿಎಲ್ ಎಂ.ಡಿ ಪಿ.ಸಿ.ಜಾಫರ್‌ಗೆ ಮನವಿ ಮಾಡಿದರು.

ತಾವರೆಕೆರೆಯ ಮೆಟ್ರೋ ನಿಲ್ದಾಣದ ಸುತ್ತಲೂ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದಾರೆ.

ಭದ್ರತಾ ಸಿಬ್ಬಂದಿಗಳನ್ನು ಬದಿಗಿಟ್ಟು ಭಿಕ್ಷುಕನಂತೆ ವೇಷ ತೊಟ್ಟು ರಸ್ತೆ ಬದಿ ಭಿಕ್ಷಾಟನೆ ಮಾಡಿದ ಶಾಸಕ

ಮುಂಬೈ: ಶಾಸಕರೊಬ್ಬರು ಭಿಕ್ಷುಕನಂತೆ ವೇಷ ತೊಟ್ಟು ರಸ್ತೆ ಬದಿ ಭಿಕ್ಷಾಟನೆ ಮಾಡಿರುವ ಘಟನೆ ನಡೆದಿದ್ದು, ಶಾಸಕರ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಂಬೈನ ಘಾಟ್‌ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಭಿಕ್ಷಾಟನೆ ಮಾಡಿರುವ ಶಾಸಕ. ಭದ್ರತಾ ಸಿಬ್ಬಂದಿ, ಐಷಾರಾಮಿ ಕಾರುಗಳು ಮತ್ತು ದುಬಾರಿ ವಸ್ತುಗಳನ್ನೆಲ್ಲ ಬಿಟ್ಟು ಭಿಕ್ಷುಕನಂತೆ ವೇಶ ತೊಟ್ಟು ರಸ್ತೆ ಬದಿ ಬಿಕ್ಷಾಟನೆ ಮಾಡಿದ್ದಾರೆ.

ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ಉದ್ಯಮಿಯೂ ಆಗಿರುವ ಪರಾಗ್ ಶಾ ಭಿಕ್ಷಾಟನೆ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಜೈನ ಧರ್ಮದ ಚಾತುರ್ಮಾಸದ ಹಿನ್ನೆಲೆಯಲ್ಲಿ ಶಾಸಕ ಪರಾಗ್ ಶಾ ಅವರು ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಈ ಆತ್ಮಾನುಭವ ಪಡೆಯಲು ನಿರ್ಧರಿಸಿದ್ದರು. ಶಾಸಕರು ಮುಖಕ್ಕೆ ವಿಶೇಷ ಮೇಕಪ್ ಮಾಡಿಕೊಂಡು, ಹರಿದ-ಸಾಧಾರಣ ಬಟ್ಟೆಗಳನ್ನು ಧರಿಸಿ ಕಂಪ್ಲೀಟ್ ಆಗಿ ಭಿಕ್ಷುಕನ ರೂಪ ತಳೆದು ಭಿಕ್ಷೆ ಬೇಡಿದ್ದಾರೆ.

ಘಾಟ್‌ಕೋಪರ್‌ನ ರಸ್ತೆಗಳಲ್ಲಿ ದಿನವಿಡೀ ಭಿಕ್ಷೆ ಬೇಡುತ್ತಾ ಓಡಾಡಿದರೂ ಸಹ ಅವರ ಸ್ವಂತ ಕ್ಷೇತ್ರದ ಜನರಿಗಾಗಲಿ ಅಥವಾ ಹತ್ತಿರದವರಿಗಾಗಲಿ ಅವರು ಶಾಸಕ ಪರಾಗ್ ಶಾ ಎಂಬುದು ಗೊತ್ತಾಗಿಲ್ಲ. ಸಾರ್ವಜನಿಕರಿಂದ ಸಿಕ್ಕ ಭಿಕ್ಷೆಯ ಹಣ ಹಾಗೂ ಆಹಾರವನ್ನೇ ಸೇವಿಸಿ, ಸಾಮಾನ್ಯ ಭಿಕ್ಷುಕ ಅನುಭವಿಸುವ ಕಷ್ಟ, ಸವಾಲುಗಳು ಮತ್ತು ಜನರ ನಡವಳಿಕೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದರು.

ಒಂದು ಇಡೀ ದಿನದ ಭಿಕ್ಷುಕನ ವೇಷದ ಪ್ರಯೋಗ ಮುಗಿದ ಬಳಿಕ, ಪರಾಗ್ ಶಾ ಅವರು ತಮ್ಮ ಮೇಕಪ್ ತೆಗೆದು ಸಾಮಾನ್ಯ ಶಾಸಕರಾಗಿ ಜನರ ಮುಂದೆ ಬಂದರು. ತಮಗೆ ಲಭಿಸಿದ ಈ ಅಪರೂಪದ ಜೀವನಪಾಠ ಮತ್ತು ರಸ್ತೆಯಲ್ಲಿದ್ದಾಗ ಜನರು ತೋರಿದ ಪ್ರತಿಕ್ರಿಯೆಗಳ ಬಗ್ಗೆ ಗುರುಗಳು ಹಾಗೂ ಸಾರ್ವಜನಿಕರ ಬಳಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕೋಟ್ಯಧಿಪತಿ ಶಾಸಕ ರಸ್ತೆಯಲ್ಲಿ ಭಿಕ್ಷುಕನಾಗಿ ನಿಂತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular