HomeEntertainmentವಿನಯ್ ರಾಜ್‌ಕುಮಾರ್ ಅಭಿನಯದ ‘ಸಿಟಿಲೈಟ್ಸ್’ ಚಿತ್ರದ ‘ಒಂದೇ ಚಂದ್ರ’ ಸಾಂಗ್ ರಿಲೀಸ್!

ವಿನಯ್ ರಾಜ್‌ಕುಮಾರ್ ಅಭಿನಯದ ‘ಸಿಟಿಲೈಟ್ಸ್’ ಚಿತ್ರದ ‘ಒಂದೇ ಚಂದ್ರ’ ಸಾಂಗ್ ರಿಲೀಸ್!

ಸ್ಯಾಂಡಲ್‌ವುಡ್‌ನ ಭರವಸೆಯ ನಟ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಸಿಟಿಲೈಟ್ಸ್’ ಸಿನಿಮಾದ ಲಿರಿಕಲ್ ಹಾಡು ಹೊರಬಿದ್ದಿದೆ. ‘ಒಂದೇ ಚಂದ್ರ’ ಎಂಬ ಶೀರ್ಷಿಕೆಯ ಈ ಗೀತೆಯನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಮಧುರವಾದ ಗೀತೆಗೆ ಚರಣ್ ರಾಜ್ ಎಂ.ಆರ್ ಅವರ ಸಂಗೀತ ಸಂಯೋಜನೆಯಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ಆಂಟೋನಿ ದಾಸನ್ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಹಾಡು ಕೇಳುಗರ ಗಮನ ಸೆಳೆಯುತ್ತಿದೆ. ಚಿತ್ರವನ್ನು ದುನಿಯಾ ಟಾಕೀಸ್ ಮತ್ತು ಯಂತ್ರೋದ್ಧಾರಕ ಆಂಜನೇಯ ಬ್ಯಾನರ್‌ಗಳ ಅಡಿಯಲ್ಲಿ ವಿಜಯಕುಮಾರ್ ಹಾಗೂ ವಿಕ್ರಮ್ ಆರ್ಯ ಜಂಟಿಯಾಗಿ ನಿರ್ಮಿಸಿದ್ದಾರೆ.

ಚಿತ್ರಕ್ಕೆ ವಿಜಯಕುಮಾರ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪ್ರಸಿದ್ಧ ಸಂಭಾಷಣೆಗಾರ ಮಾಸ್ತಿ ಅವರ ಮಾತುಗಳು ಈ ಸಿನಿಮಾಗೆ ಮತ್ತಷ್ಟು ಬಲ ನೀಡಲಿವೆ. ಶಿವಸೇನಾ ಮತ್ತು ಹರ್ಷ ಗೌಡ ಅವರ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ವಿನೋದ್, ನರಸಿಂಹ ಸಿ ಮತ್ತು ಸಾಗರ್ ಅವರ ಸಾಹಸ ನಿರ್ದೇಶನ ಸಿನಿಮಾದಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವ ನಟ ವಿನಯ್ ರಾಜ್‌ಕುಮಾರ್ ಅವರ ಹೊಸ ಪ್ರಯತ್ನಕ್ಕೆ ಚಿತ್ರಪ್ರೇಮಿಗಳು ಕಾಯುತ್ತಿದ್ದು, ಈಗ ಬಿಡುಗಡೆಯಾಗಿರುವ ‘ಒಂದೇ ಚಂದ್ರ’ ಹಾಡು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular