HomeKarnatakaಉರುಳಿಗೆ ಬಿದ್ದು ಮೃತಪಟ್ಟ ಚಿರತೆ ಸುಟ್ಟು ವಿಡಿಯೋ ಮಾಡಿ ವಿಕೃತಿ ಮೆರೆದ ದುರುಳರು: ಮೂವರು ಆರೋಪಿಗಳು...

ಉರುಳಿಗೆ ಬಿದ್ದು ಮೃತಪಟ್ಟ ಚಿರತೆ ಸುಟ್ಟು ವಿಡಿಯೋ ಮಾಡಿ ವಿಕೃತಿ ಮೆರೆದ ದುರುಳರು: ಮೂವರು ಆರೋಪಿಗಳು ಅರೆಸ್ಟ್

ತುಮಕೂರು: ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆಯನ್ನು ಅರಣ್ಯಾಧಿಕಾರಿಗಳಿಗೆ ತಿಳಿಸದೇ ಗ್ರಾಮಸ್ಥರೇ ಸುಟ್ಟು ಹಾಕಿದ್ದಲ್ಲದೇ ಚಿರತೆ ಸುಡುವ ಕೃತ್ಯವನ್ನು ವಿಡಿಯೋ ಮಾಡಿ ಅವ್ಗಳನ್ನು ಶೇರ‍್ ಮಾಡಿರುವ ಘಟನೆ ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗೇಟ್ ಬಳಿ ನಡೆದಿದೆ.

ಚಿರತೆ ಸುಡುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಗೌರಗೊಂಡನಹಳ್ಳಿಯ ಜಿ.ಡಿ.ಶಿವಕುಮಾರ್, ನಾರಾಯಣಪ್ಪ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾರಾಯಣಪ್ಪನ ಹೊಲಕ್ಕೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಉರುಳು ಹಾಕಿದ್ದ. ಇತ್ತೀಚೆಗೆ ಉರುಳಿಗೆ ಚಿರತೆ ಸಿಕ್ಕು ಸಾವನ್ನಪ್ಪಿತ್ತು. ಬಳಿಕ ಗ್ರಾಮಸ್ಥರು ಚಿರತೆಯನ್ನು ಸುಟ್ಟು ಹಾಕಿದ್ದರು.

ಸತ್ತ ಚಿರತೆ ಸುಡುವುದನ್ನು ಗ್ರಾಮದ ಕೆಲವು ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ಆಧರಿಸಿ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular