HomeEntertainmentಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಅನುಪಮಾ ಪರಮೇಶ್ವರನ್: ಶಸ್ತ್ರಚಿಕಿತ್ಸೆಗೂ ಕಾರಣವಾಯ್ತು ಆ ಪ್ರೇಮ ಸಂಬಂಧ!

ಆಘಾತಕಾರಿ ವಿಚಾರ ಬಿಚ್ಚಿಟ್ಟ ನಟಿ ಅನುಪಮಾ ಪರಮೇಶ್ವರನ್: ಶಸ್ತ್ರಚಿಕಿತ್ಸೆಗೂ ಕಾರಣವಾಯ್ತು ಆ ಪ್ರೇಮ ಸಂಬಂಧ!

ಸಿನಿಮಾ ರಂಗದಲ್ಲಿ ಜನಪ್ರಿಯ ನಟಿಯಾಗಿರುವ ಅನುಪಮಾ ಪರಮೇಶ್ವರನ್ ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದು, ಮಾಜಿ ಪ್ರೇಮಿಯಿಂದ ತಮಗಾದ ತೀವ್ರ ಮಾನಸಿಕ ಹಾಗೂ ಶಾರೀರಿಕ ಕಿರುಕುಳದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಧನ್ಯಾ ವರ್ಮಾ ಅವರ ಯೂಟ್ಯೂಬ್ ಟಾಕ್ ಶೋನಲ್ಲಿ ಭಾಗವಹಿಸಿದ್ದ ಅನುಪಮಾ, ನಟನೊಬ್ಬನೊಂದಿಗಿನ ಎರಡು ವರ್ಷಗಳ ಸಂಬಂಧದಲ್ಲಿ ತಾನು ಅನುಭವಿಸಿದ ‘ನಾರ್ಸಿಸಿಸ್ಟಿಕ್ ಅಬ್ಯೂಸ್’ (ಸ್ವಮೋಹದ ಕಿರುಕುಳ) ಬಗ್ಗೆ ಕಣ್ಣೀರಿಡುತ್ತಾ ವಿವರಿಸಿದ್ದಾರೆ.

ಈ ವಿಷಕಾರಿ ಸಂಬಂಧದಿಂದಾಗಿ ತಮಗೆ ಪ್ಯಾನಿಕ್ ಅಟ್ಯಾಕ್, ದಿಢೀರ್ ಪ್ರಜ್ಞೆ ತಪ್ಪುವುದು, ತೀವ್ರ ತೂಕ ನಷ್ಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು ಎಂದು ಅನುಪಮಾ ಹೇಳಿದ್ದಾರೆ. ಸದಾ ಆತಂಕ ಮತ್ತು ಒತ್ತಡದಲ್ಲಿದ್ದ ಕಾರಣ ಆಹಾರ ಸೇವಿಸಿದ ತಕ್ಷಣ ವಾಂತಿಯಾಗುತ್ತಿತ್ತು. ಚಿತ್ರೀಕರಣದ ಸಮಯದಲ್ಲಿ ಬಲಗಣ್ಣು ನಿಯಂತ್ರಣವಿಲ್ಲದೆ ಕಂಪಿಸುತ್ತಿದ್ದರಿಂದ ಶೂಟಿಂಗ್ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ದಿನವಿಡೀ ಘಂಟೆಗಟ್ಟಲೆ ಕಣ್ಣೀರು ಹಾಕುತ್ತಿದ್ದರಿಂದ ಕಣ್ಣಿನ ಗ್ಲ್ಯಾಂಡ್ ದೋಷಕ್ಕೊಳಗಾಗಿ ಕೊನೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಮಹಿಳೆಯಾಗಿರುವುದಕ್ಕೆ ಮತ್ತು ನಟಿಯಾಗಿ ಸಾಧನೆ ಮಾಡಿದ್ದಕ್ಕೆ ಆ ವ್ಯಕ್ತಿ ತಮ್ಮಲ್ಲಿ ಕೀಳರಿಮೆ ಮೂಡಿಸುತ್ತಿದ್ದ ಎಂದು ಅನುಪಮಾ ಆರೋಪಿಸಿದ್ದಾರೆ. ತಪ್ಪುಗಳನ್ನು ಪ್ರಶ್ನಿಸಿದಾಗಲೆಲ್ಲಾ ಆತ ಮಾಸಿಕ ಋತುಚಕ್ರದ ನೆಪ ಹೇಳಿ ನಿಂದಿಸುತ್ತಿದ್ದ. ಒಮ್ಮೆ ಪ್ರೀತಿಯ ಮಳೆ ಸುರಿಸುವುದು, ಮರುದಿನವೇ ತೀವ್ರವಾಗಿ ನಿಂದಿಸುವುದು ಮತ್ತು ಆ ನಂತರ ಮಗುವಿನಂತೆ ಅತ್ತು ಕ್ಷಮೆ ಕೇಳುವ ಮೂಲಕ ಆತ ನನ್ನನ್ನು ಮಾನಸಿಕವಾಗಿ ನಿಯಂತ್ರಿಸುತ್ತಿದ್ದ ಎಂದು ಅವರು ವಿವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಪರದಾ ಸಿನಿಮಾದ ಪ್ರಚಾರದ ವೇಳೆ ಅವರ ಕಣ್ಣಿನ ಬಾವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮಾಜಿ ಪ್ರೇಮಿಯ ಹೆಸರನ್ನು ಅನುಪಮಾ ಎಲ್ಲೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ, ನೆಟ್ಟಿಗರು ನಟ ಧ್ರುವ ವಿಕ್ರಮ್ ಕಡೆಗೆ ಬೆಟ್ಟು ಮಾಡುತ್ತಿದ್ದಾರೆ. ಬೈಸನ್ ಕಾಳಮಾಡನ್ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದು, ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular