HomeIndiaಮಕ್ಕಳಾಗಲೆಂದು ಆಶೀರ್ವಾದ ಮಾಡುವುದಾಗಿ ನಂಬಿಸಿ, ತೃತೀಯಲಿಂಗಿಯಂತೆ ಮನೆಗೆ ನುಗ್ಗಿದ ವ್ಯಕ್ತಿ: ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹಣ...

ಮಕ್ಕಳಾಗಲೆಂದು ಆಶೀರ್ವಾದ ಮಾಡುವುದಾಗಿ ನಂಬಿಸಿ, ತೃತೀಯಲಿಂಗಿಯಂತೆ ಮನೆಗೆ ನುಗ್ಗಿದ ವ್ಯಕ್ತಿ: ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹಣ ದೋಚಿ ಪರಾರಿ

ಮುಂಬೈ: ವಂಚಕರು ಹಣ ದೋಚಲು ಏನೆಲ್ಲ ವೇಷ ಭೂಷಣಗಳನ್ನು ತೊಟ್ಟು ಮೋಸ ಮಾಡುತ್ತಾರೆ ನೋಡಿ. ಕೆಲವೆಡೆಗಳಲ್ಲಿ ನವದಂಪತಿಗಳಿಗೆ ತೃತೀಯಲಿಂಗಿಗಳಿಂದ ಆಶಿರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ. ಇನ್ನು ಕೆಲವೆಡೆ ಮಗು ಹುಟ್ಟಿದಾಗ ತೃತಿಯಲಿಂಗಿಗಳು ಮನೆಗೆ ಬಂದು ಮಗುವಿಗೆ ಆಶಿರ್ವಾದ ಮಾಡಿ ಹೋಗುವ ಪದ್ಧತಿ ಕೂಡ ಇದೆ. ಇದೇ ರೀತಿ ಇಲ್ಲೋರ್ವ ವ್ಯಕ್ತಿ ಮಹಿಳೆಗೆ ಮಕ್ಕಳಾಗಲೆಂದು ಆಶಿರ್ವಾದಮಾಡುವುದಾಗಿ ಹೇಳಿ ನಂಬಿಸಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯವೆಸಗಿ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತೃತೀಯಲಿಂಗಿಯಂತೆ ನಟಿಸಿ ಸೀರೆ ಧರಿಸಿ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ, ಮಹಿಳೆಗೆ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಗದು ದೋಚಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅನಿಲ್ ಶೇಷರಾವ್ ಶಿಂಧೆ (28) ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತ್ರಸ್ತ ಮಹಿಳೆಗೆ ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡ ಆರೋಪಿ, ದೃಷ್ಟಿ ತೆಗೆದು ಮಗುವಿನ ಭಾಗ್ಯಕ್ಕಾಗಿ ವಿಶೇಷ ಆಶೀರ್ವಾದ ಮಾಡುವುದಾಗಿ ನಂಬಿಸಿ ಫ್ಲಾಟ್‌ಗೆ ಪ್ರವೇಶಿಸಿದ್ದ.

ಮನೆಗೆ ನುಗ್ಗಿದ ವ್ಯಕ್ತಿ ವರಸೆಯೇ ಬದಲಾಗಿದೆ. ಮಹಿಳೆಗೆ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯಲ್ಲಿದ್ದ 2 ಸಾವಿರ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಪೊವೈ ಪೊಲೀಸರು ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಸೀರೆ ಧರಿಸಿದ್ದ ಆರೋಪಿ ಆಟೋರಿಕ್ಷಾ ಮೂಲಕ ಥಾಣೆಯತ್ತ ತೆರಳಿರುವುದು ಪತ್ತೆಯಾಯಿತು. ಖರೇಗಾಂವ್ ಕೊಳೆಗೇರಿ ಪ್ರದೇಶಕ್ಕೆ ತೆರಳಿದ್ದ ಆರೋಪಿಯನ್ನು ಪೊಲೀಸರು ಕಲ್ವಾ ಭಾಗದಲ್ಲಿ ಬಂಧಿಸಿದ್ದಾರೆ.

ಪೂಜೆ, ದೃಷ್ಟಿ ತೆಗೆಯುವುದು, ಭಿಕ್ಷಾಟನೆ ಅಥವಾ ಆಶೀರ್ವಾದದ ಹೆಸರಿನಲ್ಲಿ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ಮನೆ ಅಥವಾ ಫ್ಲಾಟ್‌ಗಳ ಒಳಗೆ ಪ್ರವೇಶ ನೀಡಬಾರದು ಎಂದು ಮುಂಬೈ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಸತಿ ಸಮುಚ್ಛಯಗಳ ಭದ್ರತಾ ಸಿಬ್ಬಂದಿ ಅಪರಿಚಿತರು ಒಳಬರುವಾಗ ಕಡ್ಡಾಯವಾಗಿ ಗುರುತಿನ ಚೀಟಿ ಪರಿಶೀಲಿಸಿ, ನಿವಾಸಿಗಳ ಪೂರ್ವಾನುಮತಿ ಪಡೆದ ನಂತರವಷ್ಟೇ ಒಳಬಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular