HomeIndiaಗೋವಾದಿಂದ ವಿಮಾನದಲ್ಲಿ ಎಷ್ಟು ಮದ್ಯ ತರಬಹುದು ? ಮಿತಿ ಮೀರಿದರೆ ಏನಾಗುತ್ತೆ? ಇಲ್ಲಿದೆ ಮಾಹಿತಿ

ಗೋವಾದಿಂದ ವಿಮಾನದಲ್ಲಿ ಎಷ್ಟು ಮದ್ಯ ತರಬಹುದು ? ಮಿತಿ ಮೀರಿದರೆ ಏನಾಗುತ್ತೆ? ಇಲ್ಲಿದೆ ಮಾಹಿತಿ

ಗೋವಾ ಪ್ರವಾಸದಿಂದ ವಿಮಾನದಲ್ಲಿ ಮದ್ಯದ ಬಾಟಲಿ ತರಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಯಮ ತಿಳಿದುಕೊಳ್ಳುವುದು ಮುಖ್ಯ. ದೇಶೀಯ ವಿಮಾನಗಳಲ್ಲಿ ಸಾಮಾನ್ಯವಾಗಿ 24%ರಿಂದ 70% ಆಲ್ಕೋಹಾಲ್‌ ಅಂಶವಿರುವ ಮದ್ಯವನ್ನು ಒಬ್ಬ ಪ್ರಯಾಣಿಕ ಗರಿಷ್ಠ 5 ಲೀಟರ್‌ವರೆಗೆ ಚೆಕ್‌ಇನ್‌ ಲಗೇಜ್‌ನಲ್ಲಿ ಸಾಗಿಸಬಹುದು.

ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಅಲ್ಲಿನ ಪ್ರಸಿದ್ಧ ವೈನ್‌ ಬಾಟಲಿ ಅಥವಾ ನಿಮಗೆ ಇಷ್ಟವಾದ ಮದ್ಯದ ಬ್ರ್ಯಾಂಡ್‌ ಅನ್ನು ವಿಮಾನದಲ್ಲಿ ತರಲು ಕೆಲವು ನಿಯಮಗಳನ್ನು ಪಾಲಿಸಬೇಕು. ದೇಶೀಯ ವಿಮಾನಗಳಲ್ಲಿ ಮದ್ಯ ಸಾಗಿಸಲು ಅನುಮತಿ ಇದ್ದರೂ, ಆಲ್ಕೋಹಾಲ್ ಪ್ರಮಾಣ, ಸಾಗಿಸುವ ಮಿತಿ ಮತ್ತು ಲಗೇಜ್ ನಿಯಮಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ.

24ರಿಂದ 70% ಆಲ್ಕೋಹಾಲ್‌ ಇದ್ದರೆ 5 ಲೀಟರ್‌ವರೆಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಸ್ಕಿ, ರಮ್, ವೋಡ್ಕಾ, ಬ್ರಾಂಡಿ ಸೇರಿದಂತೆ 24ರಿಂದ 70% ವರೆಗೆ ಆಲ್ಕೋಹಾಲ್‌ ಅಂಶವಿರುವ ಮದ್ಯವನ್ನು ಒಬ್ಬ ಪ್ರಯಾಣಿಕ ಗರಿಷ್ಠ 5 ಲೀಟರ್‌ವರೆಗೆ ಸಾಗಿಸಬಹುದು.

24%ಕ್ಕಿಂತ ಕಡಿಮೆ ಆಲ್ಕೋಹಾಲ್‌ ಇದ್ದರೆ?

ಬಿಯರ್, ವೈನ್‌ನಂತಹ ಪಾನೀಯಗಳಲ್ಲಿ 24%ಕ್ಕಿಂತ ಕಡಿಮೆ ಆಲ್ಕೋಹಾಲ್‌ ಇದ್ದರೆ 5 ಲೀಟರ್‌ ಮಿತಿ ಅನ್ವಯಿಸುವುದಿಲ್ಲ. ಆದರೆ ಅವು ವಿಮಾನಯಾನ ಸಂಸ್ಥೆ ನಿಗದಿಪಡಿಸಿರುವ ಸಾಮಾನ್ಯ ಲಗೇಜ್ ತೂಕದ ಮಿತಿಯೊಳಗಿರಬೇಕು. ತೂಕದ ಮಿತಿ ಮೀರಿದರೆ ಹೆಚ್ಚುವರಿ ಲಗೇಜ್ ಶುಲ್ಕ ಪಾವತಿಸಬೇಕಾಗಬಹುದು.

70%ಕ್ಕಿಂತ ಹೆಚ್ಚು ಆಲ್ಕೋಹಾಲ್‌ ಇದ್ದರೆ ನಿಷೇಧ

70%ಕ್ಕಿಂತ ಹೆಚ್ಚಿನ ಆಲ್ಕೋಹಾಲ್‌ ಅಂಶ ಹೊಂದಿರುವ ದ್ರವಗಳನ್ನು ವಿಮಾನದಲ್ಲಿ ಸಾಗಿಸಲು ಸಂಪೂರ್ಣ ನಿಷೇಧವಿದೆ. ಇವುಗಳನ್ನು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳೆಂದು ಪರಿಗಣಿಸಲಾಗುತ್ತದೆ.

ಹ್ಯಾಂಡ್ ಲಗೇಜ್‌ನಲ್ಲಿ ಮದ್ಯಕ್ಕೆ ಅವಕಾಶ ಇದೆಯೇ?

ಸಾಮಾನ್ಯವಾಗಿ ಮದ್ಯದ ಬಾಟಲಿಗಳನ್ನು ಕ್ಯಾಬಿನ್ ಅಥವಾ ಹ್ಯಾಂಡ್ ಲಗೇಜ್‌ನಲ್ಲಿ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಅವುಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ಚೆಕ್-ಇನ್ ಲಗೇಜ್‌ನಲ್ಲೇ ಇಡಬೇಕು.

ಆದರೆ ಕೆಲವು ವಿಮಾನಯಾನ ಸಂಸ್ಥೆಗಳು ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ ಏರ್‌ಪೋರ್ಟ್‌ನ ಸೆಕ್ಯುರಿಟಿ ಹೋಲ್ಡ್ ಪ್ರದೇಶದಲ್ಲಿ ಖರೀದಿಸಿದ 1 ಲೀಟರ್‌ವರೆಗೆ ಮದ್ಯವನ್ನು, ನಿಯಮಗಳಿಗನುಗುಣವಾಗಿ ಹ್ಯಾಂಡ್ ಬ್ಯಾಗ್‌ನಲ್ಲಿ ಸಾಗಿಸಲು ಅವಕಾಶ ನೀಡುತ್ತವೆ.

ಬಾಟಲಿ ತೆರೆದಿದ್ದರೆ ಸಮಸ್ಯೆ!

ಮದ್ಯದ ಬಾಟಲಿ ಅದರ ಮೂಲ ಪ್ಯಾಕಿಂಗ್‌ನಲ್ಲೇ ಇರಬೇಕು ಮತ್ತು ತಯಾರಕರ ಅಧಿಕೃತ ಸೀಲ್ ಹಾಗೆಯೇ ಇರಬೇಕು.ಅರ್ಧದಷ್ಟು ಕುಡಿದಿರುವ ಬಾಟಲಿಗಳಿಗೆ ಅವಕಾಶವಿಲ್ಲ.ಮುಚ್ಚಳ ತೆರೆದಿರುವ ಬಾಟಲಿಗಳನ್ನು ಸಾಗಿಸಲು ಸಾಧ್ಯವಿಲ್ಲ.ಮದ್ಯವನ್ನು ಪ್ಲಾಸ್ಟಿಕ್ ಬಾಟಲಿಗೆ ವರ್ಗಾಯಿಸಿ ಸಾಗಿಸುವಂತಿಲ್ಲ.ನಿಯಮ ಉಲ್ಲಂಘನೆಯಾದರೆ ಭದ್ರತಾ ಸಿಬ್ಬಂದಿ ಬಾಟಲಿಯನ್ನು ವಶಪಡಿಸಿಕೊಳ್ಳಬಹುದು. ಒಂದೇ ಬಾಟಲಿಯ ಸಾಮರ್ಥ್ಯವೂ 5 ಲೀಟರ್‌ ಮೀರಬಾರದು.

ಕನೆಕ್ಟಿಂಗ್‌ ಫ್ಲೈಟ್‌ ಇದ್ದರೆ ಎಚ್ಚರ!

ವಿದೇಶದಿಂದ ಅಂತರರಾಷ್ಟ್ರೀಯ ವಿಮಾನದಲ್ಲಿ ಭಾರತಕ್ಕೆ ಬಂದು, ಅಲ್ಲಿಂದ ಮತ್ತೊಂದು ದೇಶೀಯ ವಿಮಾನಕ್ಕೆ ಪ್ರಯಾಣಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಂತರರಾಷ್ಟ್ರೀಯ ಟರ್ಮಿನಲ್‌ನಿಂದ ದೇಶೀಯ ಟರ್ಮಿನಲ್‌ಗೆ ತೆರಳುವಾಗ ಹ್ಯಾಂಡ್ ಬ್ಯಾಗ್‌ನಲ್ಲಿರುವ ಡ್ಯೂಟಿ ಫ್ರೀ ಮದ್ಯವನ್ನು ಮತ್ತೆ ಚೆಕ್-ಇನ್ ಲಗೇಜ್‌ಗೆ ವರ್ಗಾಯಿಸಬೇಕಾಗಬಹುದು.

ಸೂಚನೆ : ಏರ್‌ಪೋರ್ಟ್ ಮತ್ತು ವಿಮಾನಯಾನ ಸಂಸ್ಥೆಗಳ ನಿಯಮಗಳಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇರುವುದರಿಂದ, ಪ್ರಯಾಣಕ್ಕೂ ಮುನ್ನ ಸಂಬಂಧಿತ ಏರ್‌ಲೈನ್‌ನ ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಉತ್ತಮ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular