HomeKarnatakaಪಿಜಿ, ಹಾಸ್ಟೆಲ್ ಗಳಿಗೆ ಆಹಾರ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ: ಕಳಪೆ ಆಹಾರ ನೀಡಿದ್ರೆ...

ಪಿಜಿ, ಹಾಸ್ಟೆಲ್ ಗಳಿಗೆ ಆಹಾರ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ: ಕಳಪೆ ಆಹಾರ ನೀಡಿದ್ರೆ ಕ್ಷಮಿಸುವ ಮಾತೇ ಇಲ್ಲ

ಬೆಂಗಳೂರು: ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಈಗಾಗಲೇ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಆಹಾರದ ಗುಣಮಟ್ಟ, ಸ್ವಚ್ಚತೆ ಬಗ್ಗೆ ದಾಳಿ ನಡೆಸಿ ಪರಿಶೀಲಿಸಿದ ಬೆನ್ನಲ್ಲೇ ಇದೀಗ ಪಿಜಿ, ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ ಗಳ ಮೇಲೂ ದಾಳಿ ನಡೆಸಲು ಸಜ್ಜಾಗಿದ್ದಾರೆ.

ಈ ಬಗ್ಗೆ ಆಹಾರ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ. ಪಿಜಿ, ಹಾಸ್ಟೇಲ್ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ, ಖಾಸಗಿ ಹಾಸ್ಟೆಲ್ ಗಳನ್ನು ಕೂಡ ಪರಿಶೀಲನೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಜಿ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ವಿದ್ಯಾಭ್ಯಾಸಕ್ಕಾಗಿ, ಕೆಲಸಕ್ಕಾಗಿ ಯುವ ಜನತೆ ಮನೆ ಬಿಟ್ಟು ದೂರದೂರುಗಳಿಂದ ಪಿಜಿ, ಹಾಸ್ಟೆಲ್ ಗಳಲ್ಲಿ ಬ್ಂದು ವಾಸವಾಗುತ್ತಾರೆ. ಅವರಿಗೆ ಒಳ್ಳೆಯ ಊಟ ನೀಡಿ. ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ ಎಂದು ತಿಳಿಸಿದರು. ಪಿಜಿಗಳು ಮತ್ತೆ ತಪ್ಪು ಮಾಡಿದ್ರೆ ಕ್ಷಮಿಸುವ ಮಾತೇ ಇಲ್ಲ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಹಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯಕ್ಕೆ ಫಾರಿನ್ ಕಂಪನಿ ಚಾಕೊಲೆಟ್‌ಗಳು ಬರುತ್ತವೆ, ಶುಗರ್‌ನಲ್ಲಿ ಭಾರೀ ವ್ಯತ್ಯಾಸ ಇದೆ. ಸೆಂಟ್ರಲ್ ಆಕ್ಟ್‌ನಲ್ಲಿ ಚೇಂಜ್ ಆಗಬೇಕು. ಕೇಂದ್ರ ಆಹಾರ ಸಚಿವರಿಗೆ ಸಚಿವರಿಗೆ ಮಾಹಿತಿ ಕೊಡ್ತೇವೆ. ಇನ್ನೂ ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್ ಜೊತೆಗೆ 5 ಲಕ್ಷದ ವರೆಗೂ ದಂಡ ಹಾಕ್ತೇವೆ. ದಂಡ ಹಾಕಿ ಕ್ರಮ ವಹಿಸುತ್ತೇವೆ, ಕ್ಷಮಿಸುವ ಮಾತೇ ಇಲ್ಲ ಎಂದು ತಿಳಿಸಿದರು.

ಬಸ್ ಸ್ಟಾಪ್ ಹೋಟೆಲ್‌, ಮದುವೆ ಮನೆ ಕೂಡ ಪರಿಶೀಲನೆ ಮಾಡ್ತೇವೆ. ರೈಲ್ವೇ ಕ್ಯಾಂಟೀನ್ ಮೇಲೂ ಪರಿಶೀಲನೆ ಮಾಡ್ತೇವೆ. ಫ್ಲೈಟ್ ನಲ್ಲೂ ಕೊಡುವ ಆಹಾರದ ಬಗ್ಗೆಯೂ ಪರಿಶೀಲನೆ ಮಾಡ್ತೇವೆ. ಅದಕ್ಕಾಗಿ ನ್ಯಾಷನಲ್ ಪ್ರಾಕ್ಟೀಸ್ ಟೀಂ ಸೆಟ್ ಮಾಡ್ತೇವೆ. ಕೂಲ್ ಡ್ರಿಂಕ್ಸ್ ಬೇರೆ ಕಡೆಗಳಲ್ಲಿ ಬೇರೆ, ಇಲ್ಲಿ ಬಂದಾಗ ಅದರ ರುಚಿಯೇ ಬೇರೆ. ಸೆಂಟ್ರಲ್ ಫುಡ್ ಸೇಫ್ಟಿ ನಿಯಮ ಬದಲಾಗಬೇಕು. ಬೇರೆ ದೇಶದ ಕ್ವಾಲಿಟಿ ಕೂಡ ಇಲ್ಲಿ ಅದೇ ಆಗಿರಬೇಕು. ಇದಕ್ಕಾಗಿ ಅಂತಾರಾಷ್ಟ್ರೀಯ ಆಲ್ ಇಂಡಿಯಾ ಫುಡ್ ಸೇಫ್ಟಿ ಕಾನ್ಕ್ಲೇವ್ ಮಾಡುತ್ತೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular