ಅಮೆರಿಕದ ಲಾಸ್ ಎಂಜಲೇಶನ್‌ನಲ್ಲಿ ನಡೆದ ಪ್ರತಿಷ್ಠಿತ ‘ಡಿಸ್ನಿ ಲೆಜೆಂಡ್ಸ್’ ಸಮಾರಂಭದಲ್ಲಿ ಪ್ರಸಿದ್ಧ ಸಂಗೀತ ಬಳಗ ಜೋನಾಸ್ ಬ್ರದರ್ಸ್ ಸದಸ್ಯರಾದ ನಿಕ್ ಜೋನಾಸ್, ಜೋ ಜೋನಾಸ್ ಹಾಗೂ ಕೆವಿನ್ ಜೋನಾಸ್ ಅವರಿಗೆ ವಿಶೇಷ ಗೌರವ ಸಮರ್ಪಿಸಲಾಗಿದೆ. ಮನರಂಜನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಆವೃತ್ತಿಯ ಡಿಸ್ನಿ ಲೆಜೆಂಡ್ಸ್ ಬಿರುದನ್ನು ಅವರಿಗೆ ಪ್ರದಾನ ಮಾಡಲಾಯಿತು. ಜನಪ್ರಿಯ ನಟಿ ವೆನೆಸ್ಸಾ ಹಡ್ಗನ್ಸ್ ಅವರು ವೇದಿಕೆ ಮೇಲೆ ಜೋನಾಸ್ ಸಹೋದರರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ನಿಕ್ ಜೋನಾಸ್ ಅವರ ಪತ್ನಿ, ನಟಿ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ದರು. ಚಾಟ್ಸ್ ಬೈ ಸಿ. ಡ್ಯಾಮ್ ಡಿಸೈನರ್ ಸಂಸ್ಥೆಯ ಬ್ರೌನ್ ಬಣ್ಣದ ತೊಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದರು. ಸರಳ ಆಭರಣಗಳು ಹಾಗೂ ಸೂಕ್ತ ಮೇಕಪ್ ಮೂಲಕ ಪ್ರಿಯಾಂಕಾ ಎಲ್ಲರ ಗಮನ ಸೆಳೆದರೆ, ನಿಕ್ ಜೋನಾಸ್ ಅವರು ಲೈಟ್ ಗ್ರೇ ಪಿನ್‌ಸ್ಟ್ರೈಪ್ಡ್ ಸೂಟ್ ಹಾಗೂ ಕಪ್ಪು ಶರ್ಟ್ ಧರಿಸಿ ಕಾಣಿಸಿಕೊಂಡರು. ದಂಪತಿ ಒಟ್ಟಿಗೆ ಫೋಟೋಗಳಿಗೆ ನೀಡಿದ ಪೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಸ್ನಿ ಚಾನೆಲ್ ಮೂಲಕವೇ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ಜೋನಾಸ್ ಬ್ರದರ್ಸ್ ಅವರಿಗೆ ಈ ಗೌರವ ಸಿಕ್ಕಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪ್ರಿಯಾಂಕಾ ಚೋಪ್ರಾ ಸೇರಿದಂತೆ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಕ್ ಹಾಗೂ ಅವರ ಸಹೋದರರಿಗೆ ಶುಭ ಕೋರಿದರು.
[16/08] Vanessa Hudgens, Joe Jonas, Ming-Na Wen, Priyanka Chopra, Nick Jonas, Danielle Jonas e Kevin Jonas no evento D23: Legends em Anaheim, Califórnia. pic.twitter.com/GIi1gkI7Nk
— Vanessa Hudgens Brasil (@vahudgensbr) August 16, 2026
https://www.instagram.com/p/DcH8u9wm44K
Vanessa Hudgens, Joe Jonas, Ming-Na Wen, Priyanka Chopra Jonas, Nick Jonas, Danielle Jonas and Kevin Jonas backstage at D23: Legends – August 16th pic.twitter.com/1Aq4gFwlLy
— Team Hudgens (@TeamHudgensNYC) August 16, 2026

