HomeKarnatakaನೈಸ್ ಅನ್ನೋದು‌ ನೈಸಾಗಿ ಕರ್ನಾಟಕ ಜನತೆಯ ಲೂಟಿ ಹೊಡೆದಿದೆ: ಟೋಲ್ ತೆರವುಗೊಳಿಸಬೇಕು: ಆರ್.ಅಶೋಕ್ ವಾಗ್ದಾಳಿ

ನೈಸ್ ಅನ್ನೋದು‌ ನೈಸಾಗಿ ಕರ್ನಾಟಕ ಜನತೆಯ ಲೂಟಿ ಹೊಡೆದಿದೆ: ಟೋಲ್ ತೆರವುಗೊಳಿಸಬೇಕು: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ನೈಸ್ ರಸ್ತೆಯ ಟೋಲ್ ಸಂಗ್ರಹ ವಿಚಾರ ಇದೀಗ ರಾಜಕೀಯ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ನೈಸ್ ರಸ್ತೆಯಲ್ಲಿನ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರಕ್ಕೆ ಬಿಜೆಪಿ ಸಹ ಬೆಂಬಲಿಸಿದೆ.

ಈ ಬಗ್ಗೆ ವಿಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆಗ್ರಹಕ್ಕೆ‌ ನನ್ನ ಬೆಂಬಲವಿದೆ. ನಾನು‌ ಆ ಭಾಗದ ಶಾಸಕನಾಗಿದ್ದೆ. ನಾನೊಬ್ಬನೇ ಆಗ ಪ್ರತಿಭಟನೆ ಮಾಡಿದ್ದೆ. ಜೆ.ಎಚ್ ಪಾಟೀಲ್ ಅವರು ಆಗ ಉದ್ಘಾಟನೆ ಮಾಡಿದ್ರು. ಆಗ ಜೆಡಿಎಸ್ ಸರ್ಕಾರ ಇತ್ತು. ನೈಸ್ ಅನ್ನೋದು‌ ನೈಸಾಗಿ ಕರ್ನಾಟಕ ಜನತೆಯ ಲೂಟಿ ಹೊಡೆದಿದೆ. ಕೋಟ್ಯಾಂತರ ರೂಪಾಯಿ ಲೂಟಿ ಆಗಿದೆ. ಎಂದು ಕಿಡಿಕಾರಿದರು.

ಕ್ರಾಸ್ ರೋಡ್ ಗಳಿಗೆ‌ ಫ್ಲೈಓವರ್ ಮಾಡಬೇಕು ಪ್ರತಿವರ್ಷ ಟೋಲ್ ದರ ಹೆಚ್ಚಳ ಮಾಡುತ್ತಾ ಹೋಗಿದ್ದಾರೆ. ಅವತ್ತು ಕಾಂಗ್ರೆಸ್ ಸರ್ಕಾರ ಇತ್ತು ಮತ್ತೆ ಅದೇ ಸರ್ಕಾರ ಬಂದಿರುವುದಕ್ಕೆ ಶಲ್ಟರ್ ಕೊಡ್ತಿದ್ದಾರೆ. ಟೋಲ್ ತೆಗೆದು ಹಾಕಿದ್ರೆ ಜನರ ಹೊರೆ ಕಡಿಮೆ ಆಗುತ್ತೆ. ಕೋರ್ಟ್ ಆದೇಶದಂತೆ ಟೋಲ್ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular