ಮಂಗಳೂರು: ಶುದ್ಧ ಪಾನ್ ಮಸಾಲಕ್ಕೆ ಸರ್ಕಾರ ನಿಷೇಧ ಹೇರಿಲ್ಲ. ನಿಕೋಟಿನ್, ತಂಬಾಕು ಇದ್ದರಷ್ಟೇ ನಿಷೇಧ ಮಾಡಲಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ನಷ್ಟ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರು ನೆಹರು ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಾನ್ ಮಸಾಲದಲ್ಲಿ ನಿಕೋಟಿನ್, ತಂಬಾಕು ಮತ್ತು ಗುಟ್ಕಾ ಮಿಶ್ರಣ ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಶುದ್ಧ ಪಾನ್ ಮಸಾಲ ಪ್ರತ್ಯೇಕವಾಗಿ ಬಂದರೆ ಯಾವುದೇ ತೊಂದರೆ ಇಲ್ಲ. ಈ ಕ್ರಮದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
2014ರಲ್ಲಿ ನಾನು ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಇಡಿಕೆಯಾಗಲಿದೆ ಎಂದು ಅಪಪ್ರಚಾರ ಮಾಡಲಾಗಿದ್ದು, ಆದರೆ ಆನಂತರ ಅಡಿಕೆ ದರ ಜಾಸ್ತಿಯಾಯಿತೇ ಹೊರರೂ ಕಡಿಮೆಯಾಗಲಿದ್ದು, ಈಗಲೂ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

