HomeKarnatakaತನ್ನನ್ನು ದೇಶದ್ರೋಹಿ ಎಂದು ಕರೆದ ಬಿಜೆಪಿ ನಾಯಕರಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು

ತನ್ನನ್ನು ದೇಶದ್ರೋಹಿ ಎಂದು ಕರೆದ ಬಿಜೆಪಿ ನಾಯಕರಿಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು

ಬೆಂಗಳೂರು: ದೇಶಾಭಿಮಾನವನ್ನು ನಾನು ಬಿಜೆಪಿಗರಿಂದ ಕಲಿಯಬೇಕಿಲ್ಲ. ನಾನು ಹಿಂದೂಸ್ತಾನಿ, ಕನ್ನಡಿಗ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ವಿಪಕ್ಷ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸ್ವಕ್ಷೇತ್ರ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಪಾಲ್ಗೊಂಡು ಸಚಿವ ಜಮೀರ್‌ ಅಹ್ಮದ್ ಮಾತನಾಡಿದರು. ಬೆಂಗಳೂರು ದಕ್ಷಿಣ ಎಸಿ ವಿಶ್ವನಾಥ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್‌ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣಕ್ಕೆ ವಿನಾಯ್ತಿ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಧ್ವಜಾರೋಹಣ ಮಾಡೋದು ಸೌಭಾಗ್ಯ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಧ್ವಜಾರೋಹಣ ಮಾಡಲು ಅವಕಾಶ ಸಿಕ್ಕಿತ್ತು. 2 ವರ್ಷ ಬಳ್ಳಾರಿ ಉಸ್ತುವಾರಿಯಾಗಿದ್ದೆ, ಸಿದ್ದರಾಮಯ್ಯ ಅವರು ಇದ್ದಾಗಲೂ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಡಿ.ಕೆ ಶಿವಕುಮಾರ್ ಅವ್ರಿಗೂ ಹೇಳಿದ್ದೆ. ಕೆಲಸದ ಒತ್ತಡದಿಂದ ಬಸಂತಪ್ಪ ಅವರಿಗೆ ಅವಕಾಶ ಕೊಡಲು ಹೇಳಿದ್ದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಮಂತ್ರಿ ಆದ್ಮೇಲೆ ಧ್ವಜಾರೋಹಣ ಮಾಡಬೇಕು ಅಂತ ಆಸೆ ಇರುತ್ತೆ. 2006ರಲ್ಲಿ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿ ಆಗಿದ್ದೆ. ದೇಶದ್ರೋಹಿ ಯಾರಿದ್ದಾರೆ ಅಂತ ಜನರಿಗೆ ಗೊತ್ತು. ದೇಶಾಭಿಮಾನ ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸ್ವಾತಂತ್ರ‍್ಯ ಯಾರಿಂದ ಬಂದಿದೆ ಅಂತ ದೇಶಕ್ಕೆ ಗೊತ್ತು. ಬಿಜೆಪಿಯವರಿಂದ ನಾನು ಕಲಿಯುವುದಿಲ್ಲ. ನಾನು ಹಿಂದೂಸ್ತಾನಿ, ನಾನು ಒಬ್ಬ ಕನ್ನಡಿಗ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular