HomeKarnatakaಇನ್ಮುಂದೆ ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ! ಇದು ಲೂಟಿ ಸರ್ಕಾರದ ಹೊಸ ಸ್ಕೆಚ್: ವಿಪಕ್ಷ...

ಇನ್ಮುಂದೆ ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ! ಇದು ಲೂಟಿ ಸರ್ಕಾರದ ಹೊಸ ಸ್ಕೆಚ್: ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾ ರ್ ನಡೆಸುತ್ತಿದೆ. ಇನ್ಮುಂದೆ ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ ವಿಧಿಸುತ್ತಿದೆ. ಲೂಟಿ ಸರ್ಕಾರದ ಹೊಸ ಸ್ಕೆಚ್ ಇದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಲ್ಲಿ ಬೆಂಗಳೂರಿನ ಜನತೆ ತಮ್ಮ ಸ್ವಂತ ಮನೆಯ ಮುಂದೆ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕೂ ದಂಡ ಕಟ್ಟಬೇಕಂತೆ ಎಣ್ದು ಟೀಕಿಸಿದ್ದಾರೆ.

ಜಿಬಿಎ (GBA) ಹೊಸ ಪಾರ್ಕಿಂಗ್ ರೂಲ್ಸ್ 2026 ಹೆಸರಿನಲ್ಲಿ, ಬೆಂಗಳೂರಿಗರು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಕಾರು ನಿಲ್ಲಿಸಲು ವರ್ಷಕ್ಕೆ ₹15,000 ದಿಂದ ₹25,000 ವರೆಗೆ ದಂಡದ ರೂಪದ ಶುಲ್ಕ ತೆರಬೇಕು ಎನ್ನುವ ತುಘಲಕ್ ನೀತಿಯನ್ನು ಜಾರಿಗೆ ತರಲು ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಕೃಷ್ಣಬೈರೇಗೌಡ ಸ್ಕೆಚ್ ಹಾಕಿದ್ದಾರೆ ಎಂದಿದ್ದಾರೆ.

ಖಾಲಿ ನಿವೇಶನಗಳಲ್ಲಿ ಕಸ ತೆಗೆಯುವ ನೆಪದಲ್ಲಿ ಕೋಟಿ ಕೋಟಿ ಗುಡಿಸಿದ್ದು ಸಾಲದೆಂಬಂತೆ, ಈಗ ‘ಮನೆ ಮುಂದಿನ ಪಾರ್ಕಿಂಗ್’ ಮೇಲೆಯೂ ಕಣ್ಣು ಬಿದ್ದಿದೆಯೇ? ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಟ್ಯಾಕ್ಸಾ? ಸಾರ್ವಜನಿಕರು ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿ ಮನೆ ಕಟ್ಟಿಕೊಂಡಿರುವುದು ನಿಮ್ಮ ಕಮಿಷನ್ ದಂಧೆಗೆ ಸಾಲದೆಂದು ಮನೆ ಮುಂದಿನ ಜಾಗಕ್ಕೂ ಲೂಟಿ ಶುಲ್ಕ ವಿಧಿಸುತ್ತಿದ್ದೀರಾ?

ರಸ್ತೆಗಳ ಸ್ಥಿತಿ ಏನಾಗಿದೆ?:ಸಾಲು ಸಾಲು ಗುಂಡಿಗಳು, ಮಳೆಯಾದರೆ ಈಜುಕೊಳವಾಗುವ ರಸ್ತೆಗಳನ್ನು ಸರಿಪಡಿಸಲು ಯೋಗ್ಯತೆಯಿಲ್ಲದ ಸರ್ಕಾರಕ್ಕೆ ಈ ಪಾರ್ಕಿಂಗ್ ಟ್ಯಾಕ್ಸ್ ವಸೂಲಿ ಮಾಡಲು ಏನು ನೈತಿಕ ಹಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಸರಿಪಡಿಸಿ: ಪಾರ್ಕಿಂಗ್ ದರ ಏರಿಸಿ ಜನರನ್ನು ದೋಚುವ ಮೊದಲು ನಂಟುಕೊಂಡಿರುವ ಮೆಟ್ರೋ ಕಾಮಗಾರಿ ಚುರುಕುಗೊಳಿಸಿ, ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ.

ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಕನ್ನ ಹಾಕಲು ಹೊರಟಿರುವ ಈ ಜನವಿರೋಧಿ ‘ಪಾರ್ಕಿಂಗ್ ಲೂಟಿ ನೀತಿ’ಯನ್ನು ಕಾಂಗ್ರೆಸ್ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ! ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular