ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್ 12) ಚಿನ್ನದ ಬೆಲೆ ಮತ್ತೊಮ್ಮೆ ಏರಿಕೆ ಕಂಡಿದ್ದು, ಆಭರಣ ಖರೀದಿದಾರರಿಗೆ ಗಾಯದ ಮೇಲೆ ಬಿಸಿ ಬರೆ ಎಳೆದಂತಾಗಿದೆ. ಮಂಗಳವಾರ ಕಂಡ ಬಂಪರ್ ಜಿಗಿತದ ಬಳಿಕ ಹಳದಿ ಲೋಹದ ಓಟವು ಇಂದು ಸಹ ಮುಂದುವರಿದಿದೆ. ಆದರೆ, ನಿನ್ನೆ ಪ್ರತಿ ಕೆಜಿಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಮಾತ್ರ ಇಂದು ಬದಲಾಗದೆ ಸ್ಥಿರ ವಹಿವಾಟು ನಡೆಸಿದೆ.
ಪ್ರಸ್ತುತ ದೇಶದಲ್ಲಿ 10 ಗ್ರಾಂನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,41,950 ರೂಪಾಯಿ ತಲುಪಿದ್ದರೆ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,860 ರೂಪಾಯಿಯಾಗಿದೆ.
ಇತ್ತೀಚೆಗೆ ಪ್ರತಿ ಕೆಜಿಗೆ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸಮಾಧಾನಕರ ರೀತಿಯಲ್ಲಿ ಸ್ಥಿರವಾಗಿದ್ದು, ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 25,500 ರೂಪಾಯಿ (ಪ್ರತಿ ಗ್ರಾಂಗೆ 255 ರೂ) ತಲುಪಿದೆ. ತಮಿಳುನಾಡು ಹಾಗೂ ಕೇರಳ ಸೇರಿದಂತೆ ನೆರೆರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ ಸುಮಾರು 26000 ರೂಪಾಯಿಯಷ್ಟಿದೆ.
ಇಲ್ಲಿವೆ ಆಗಸ್ಟ್ 12ರ ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿಯ ದರಗಳ ಪಟ್ಟಿ :
24 ಕ್ಯಾರಟ್ ಚಿನ್ನ (1 ಗ್ರಾಂ): ₹15,486
22 ಕ್ಯಾರಟ್ ಆಭರಣ ಚಿನ್ನ (1 ಗ್ರಾಂ): ₹14,195
18 ಕ್ಯಾರಟ್ ಚಿನ್ನ (1 ಗ್ರಾಂ): ₹11,614
ಬೆಳ್ಳಿ (1 ಗ್ರಾಂ): ₹255
ಬೆಂಗಳೂರು ಮಾರುಕಟ್ಟೆಯಲ್ಲೂ ದರಗಳು ಸ್ಥಿರ ಹಾಗೂ ಇಳಿಕೆಯ ಹಾದಿಯಲ್ಲಿದ್ದು, 10 ಗ್ರಾಂ ಆಭರಣ ಚಿನ್ನ ₹1,41,950 ರಲ್ಲಿ ವಹಿವಾಟು ನಡೆಸುತ್ತಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,54,860
ನಾಗ್ಪುರ ₹1,54,860
ಮುಂಬೈ ₹1,54,860
ಚೆನ್ನೈ ₹1,54,910
ಕೋಲ್ಕತ್ತಾ ₹1,54,860
ಪಾಟ್ನಾ ₹1,54,910
ಸೂರತ್ ₹1,54,910
ಚಂಡೀಗಢ ₹1,55,010
ಲಕ್ನೋ ₹1,55,010

